Formers Land: ಸರ್ಕಾರೀ ಜಾಗದಲ್ಲಿ ವ್ಯವಸಾಯ ಮಾಡುವವರಿಗೆ ಮತ್ತು ವಾಸವಿದ್ದವರಿಗೆ ಸಿಹಿಸುದ್ದಿ, ಜಾಗ ನಿಮ್ಮ ಹೆಸರಿಗೆ ಮಾಡಿಕೊಳ್ಳಿ.
ಸರ್ಕಾರೀ ಜಾಗದಲ್ಲಿ ವ್ಯವಸಾಯ ಮಾಡುತ್ತಿರುವರಿಗೆ ಶೀಘ್ರದಲ್ಲಿ ಖಾತಾ ಬದಲಾವಣೆ ಆಗಲಿದೆ.
Government Land Cultivation: ರೈತರು ದೇಶದ ಪ್ರಮುಖ ಆಸ್ತಿ ಆಗಿದ್ದಾರೆ. ತಮ್ಮ ಹೊಲಗಳಲ್ಲಿ ಸ್ವತವಾಗಿ ದುಡಿಮೆ ಮಾಡಿ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ. ಇನ್ನು ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ ಅನೇಕ ನೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತದೆ. ರೈತರಿಗಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತದೆ.
ರೈತರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲು ಮುಂದಾಗುತ್ತದೆ. ಇದೀಗ ರಾಜ್ಯ ಕಾರ್ಮಿಕ ಇಲಾಖೆ ರೈತರಿಗೆ ಸಿಹಿ ಸುದ್ದಿ ನೀಡಿದೆ. ಸರ್ಕಾರೀ ಜಮೀನುಗಳಲ್ಲಿ ಸಾಗುವಾಳಿ ಮಾಡುತ್ತಿರುವ ರೈತರಿಗೆ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ.
ಸಾಗುವಳಿ ಮಾಡುವ ರೈತರ ಹೆಸರಿಗೆ ಶೀಘ್ರವೇ ಖಾತಾ
ಸಾಮಾನ್ಯವಾಗಿ ಸರ್ಕಾರೀ ಜಮೀನುಗಳನ್ನು ನಿರ್ಧಿಷ್ಟ ಅವಧಿಗೆ ರೈತರು ಗುತ್ತಿದೆ ಪಡೆದು ಉಳುಮೆ ಮಾಡುತ್ತಾರೆ. ಸರ್ಕಾರೀ ಜಮೀನುಗಳನ್ನು ಉಳುಮೆ ಮಾಡಲು ಫಾರ್ಮಿನ್ಗ್ ಸೊಸೈಟಿಗಳು ರೈತರಿಗೆ ನೀಡುತ್ತದೆ. ಧಾರವಾಡ, ಅಲ್ನವರ ಮತ್ತು ಕಲಘಟಗಿ ತಾಲೂಕಿನಲ್ಲಿ ಫಾರ್ಮಿನ್ಗ್ ಸೊಸೈಟಿ ಜಮೀನನ್ನು ಸಾಗುವಳಿದಾರರಿಗೆ ಮಂಜೂರಾತಿ ಮಾಡುವ ಕುರಿತು ಧಾರವಾಡ ಜಿಲ್ಲಾ ಉಸ್ತಿವಾರಿ ಸಚಿವರಾದ ಸಂತೋಷ್ ಲಾಡ್ ಮಾತಾಡಿದ್ದಾರೆ.
ಇದೀಗ ಧಾರವಾಡ, ಅಲ್ನವರ ಮತ್ತು ಕಲಘಟಗಿ ತಾಲೂಕಿನಲ್ಲಿ ಸರ್ಕಾರೀ ಜಮೀನಿನನ್ನು ನಿರ್ಧಿಷ್ಟ ಅವಧಿಗೆ ಗುತ್ತಿಗೆ ಪಡೆದು ರೈತರಿಗೆ ಉಳುಮೆ ಮಾಡಲು ಫಾರ್ಮಿನ್ಗ್ ಸೊಸೈಟಿಗಳು ನೀಡಿದ್ದ ಭೂಮಿಯನ್ನು ಸಾಗುವಳಿ ಮಾಡುವ ರೈತರ ಹೆಸರಿಗೆ ಖಾತಾ ಮಾಡಲು ನಿಯಮಾವಳಿ ಪ್ರಕಾರ ಕ್ರಮ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸಾಗುವಳಿ ಮಾಡುವ ರೈತರ ಹೆಸರಿಗೆ ಶೀಘ್ರವೇ ಖಾತಾ ಮಾಡುವ ಬಗ್ಗೆ ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತಿವಾರಿ ಸಚಿವರಾದ ಸಂತೋಷ್ ಲಾಡ್ ಅವರು ಹೇಳಿಕೆ ನೀಡಿದ್ದಾರೆ. ವ್ಯವಸಾಯ ಮಾಡುತ್ತಿರುವ ರೈತರ ಹೆಸರಿಗೆ ಜಮೀನಿನ ಮಾಲೀಕತ್ವ ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸಂಬಂಧಿಸಿದ ತಾಲೂಕಿನ ತಹಶೀಲ್ದಾರ ಹಾಗೂ ಅವರ ಅಧಿಕಾರಿಗಳ ಮೂಲಕ ಸೊಸೈಟಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ರೈತರು ಸಲ್ಲಿಸಿರುವ ಅರ್ಜಿ ಪರಿಶೀಲನೆಯ ಬಳಿಕ ಸರ್ಕಾರೀ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಹೆಸರಿನಲ್ಲಿ ಖಾತಾ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.