Gold Coins: ಚಿನ್ನ ಖರೀದಿಸಿದರೆ ಚಿನ್ನದ ನಾಣ್ಯ ಉಚಿತ, ಅಕ್ಷಯ ತೃತೀಯ ಆಫರ್ ಘೋಷಣೆ.
ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡಿದರೆ ಚಿನ್ನದ ಕಾಯಿನ್ ಉಚಿತ, ಆಫರ್ ಬಿಡುಗಡೆ.
Akshaya Tritiya Gold Offers: ಇತ್ತೀಚಿಗೆ ಚಿನ್ನದ ಬೆಲೆಯ (Gold Price) ಏರಿಕೆಯಿಂದ ಜನರು ಕುಸಿದು ಹೋಗಿದ್ದಾರೆ. ಅಲ್ಲದೆ ಈ ತಿಂಗಳೇ ಅಕ್ಷಯ ತೃತೀಯ (Akshaya Tritiya) ಇರುವುದರಿಂದ ಜನರು ಚಿನ್ನ ಖರೀದಿಸಲು ಯೋಚನೆ ಮಾಡುತ್ತಿದ್ದಾರೆ. ಆದರೆ ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತಿದೆ.
ಈ ದಿನ ಚಿನ್ನ ಖರೀದಿಸಿದರೆ ಲಕ್ಷ್ಮಿ ಒಲಿಯುತ್ತಾಳೆ ಎಂದು ಕೂಡ ಹೇಳಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಲು ಜನರಿಗೆ ಶುಭ ದಿನ. ಇದೀಗ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ.
ಅಕ್ಷಯ ತೃತೀಯದಂದು ಚಿನ್ನ ಖರೀದಿಸುವವರಿಗೆ ಹೊಸ ಸುದ್ದಿ
ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವವರಿಗೆ ಹೊಸ ಸಿಹಿ ಸುದ್ದಿ ಹೊರ ಬಿದ್ದಿದೆ. ತನಿಷ್ಕ್, ಮಲಬಾರ್ ಸೇರಿದಂತೆ ಹಲವು ಕಂಪನಿಗಳು ಗ್ರಾಹಕರಿಗಾಗಿ ವಿಶೇಷ ಆಫರ್ ನೀಡುತ್ತಿದೆ. ತನಿಷ್ಕ್ ಈ ಬಾರಿ ಅಕ್ಷಯ ತೃತೀಯ ಸಂದರ್ಭದಲ್ಲಿ ಬಂಪರ್ ಡಿಸ್ಕೌಂಟ್ ನೀಡುತ್ತಿದೆ.
ಇಲ್ಲಿ ಮೇಕಿಂಗ್ ಚಾರ್ಜ್ ನಲ್ಲಿ ದೊಡ್ಡಮಟ್ಟದ ರಿಯಾಯಿತಿ ನೀಡಲಾಗುತ್ತದೆ. ಕಂಪನಿಯ ಚಿನ್ನ ಮತ್ತು ವಜ್ರದ ಆಭರಣಗಳ ಮೇಕಿಂಗ್ ಚಾರ್ಜ್ ಮೇಲೆ 25% ವರೆಗೆ ರಿಯಾಯಿತಿ ನೀಡಲಾಗುತ್ತಿದೆ, ಏಪ್ರಿಲ್ 14 ರಿಂದ 24 ರ ವರೆಗೆ ಈ ಆಫರ್ ನ ಲಾಭವನ್ನು ಪಡೆದುಕೊಳ್ಳಬಹುದು.
ಅಕ್ಷಯ ತೃತೀಯದಂದು ಚಿನ್ನ ಖರೀದಿಸಿ ಒಂದು ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಿರಿ
ಮಾಲಾಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಈ ಅಕ್ಷಯ ತೃತೀಯದಂದು ವಿಶೇಷ ಕೊಡುಗೆಯನ್ನು ತಂದಿದೆ. ಇದರ ಪ್ರಕಾರ ಉಚಿತ ಚಿನ್ನದ ನಾಣ್ಯವನ್ನು ನೀಡಲಾಗುತ್ತದೆ. 30,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣವನ್ನು ಖರೀದಿಸಿದರೆ 100 mg ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯುವುದು ಸಾಧ್ಯವಾಗುತ್ತದೆ. ಈ ಆಫರ್ ನ ಲಾಭವನ್ನು ಏಪ್ರಿಲ್ 30 ರವರೆಗೆ ಮಾತ್ರ ಪಡೆಯಬಹುದು.