Akshaya Tritiya: ಅಕ್ಷಯ ತೃತೀಯ ದಿನದಂತೆ 300 ರೂ ಇಳಿಕೆಯಾದ ಚಿನ್ನದ ಬೆಲೆ, ಚಿನ್ನ ಕೊಳ್ಳಲು ಉತ್ತಮ ಸಮಯ.
ಅಕ್ಷಯ ತೃತೀಯ ದಿನದಂದು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದು ಇದು ಚಿನ್ನ ಖರೀದಿ ಮಾಡುವವರ ಸಂತಸಕ್ಕೆ ಕಾರಣವಾಗಿದೆ.
Akshaya Tritiya Gold Price In Karnataka: ಸಾಕಷ್ಟು ದಿನಗಳಿಂದ ಚಿನ್ನದ ಬೆಲೆ (Gold Price) ಏರಿಕೆಯತ್ತ ಮುಖ ಮಾಡಿದೆ. ಇದರಿಂದ ಜನ ಸಾಮಾನ್ಯರಿಗೆ ಚಿನ್ನ ಖರೀದಿಸಲು ಕಷ್ಟ ಆಗುತ್ತಿದೆ. ಹಲವು ದಿನಗಳಿಂದ ಏರಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯಲ್ಲಿ ಇಂದು ಬೆಲೆ ಇಳಿಕೆ ಕಂಡಿದೆ.
ಅಕ್ಷಯ ತೃತೀಯ (Akshaya Tritiya) ದಿನದಂದು ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚು ಇರುವುದರಿಂದ ಇಂದು ಬೆಲೆ ಇಳಿಕೆ ಕಂಡಿರುವುದು ಜನರಿಗೆ ಸಿಹಿ ಸುದ್ದಿ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Price)
ಒಂದು ಗ್ರಾಂ ಚಿನ್ನದ ಬೆಲೆ ಇಂದು 5,580 ರೂ. ಆಗಿದೆ. ನಿನ್ನೆಗಿಂತ ಇಂದು 30 ರೂ ಕಡಿಮೆಯಾಗಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 44,880 ಇದ್ದು, ಇಂದು 44,640 ರೂ. ಆಗಿದೆ. ಎಂಟು ಗ್ರಾಂ ಚಿನ್ನದಲ್ಲಿ ಇಂದು 240 ರೂ. ಇಳಿಕೆಯಾಗಿದೆ. ಹ
ತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 56,100 ಇದ್ದು, ಇಂದು 55,800 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 300 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,61,000 ಇದ್ದು, ಇಂದು 5,58,000 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 3,000 ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ಇಂದು 6087 ರೂ. ಆಗಿದೆ. ನಿನ್ನೆಗಿಂತ ಇಂದು 31 ರೂ ಕಡಿಮೆಯಾಗಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 48,944 ಇದ್ದು, ಇಂದು 48,696 ರೂ. ಆಗಿದೆ. ಎಂಟು ಗ್ರಾಂ ಚಿನ್ನದಲ್ಲಿ ಇಂದು 248 ರೂ. ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 61,180 ಇದ್ದು, ಇಂದು 60,870 ರೂ. ಆಗಿದೆ.
ಹತ್ತು ಗ್ರಾಂ ಚಿನ್ನದಲ್ಲಿ ಇಂದು 310 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 6,11,800 ಇದ್ದು, ಇಂದು 6,08,700 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 3100 ರೂ. ಇಳಿಕೆಯಾಗಿದೆ.