Alcohol Rules: ಮದ್ಯ ಪ್ರಿಯರಿಗೆ ಜುಲೈ 20 ರಿಂದ ಹೊಸ ನಿಯಮ, ಹೊಸ ನಿಯಮ ಘೋಷಣೆ ಮಾಡಿದ ಸರ್ಕಾರ.
ಜುಲೈ 20 ರಿಂದ ಮದ್ಯ ಮಾರಾಟದಲ್ಲಿ ಹೊಸ ನಿಯಮ ಜಾರಿಯಾಗಲಿದೆ.
New Alcohol Price Rule From July 20: ರಾಜ್ಯ ಸರ್ಕಾರ (State Govt) ಇದೀಗ ರಾಜ್ಯದ ಜನತೆಗೆ ಐದು ಯೋಜನೆಗಳ ಅನುಷ್ಠಾನವನ್ನು ಜಾರಿಗೊಳಿಸಲು ಹಣವನ್ನು ಹೊಂದಿಸುವ ಸಿದ್ಧತೆ ನಡೆಸುತ್ತಿದೆ. ಇನ್ನು ಐದು ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕವಾಗಿ ಐವತ್ತರಿಂದ 60 ಸಾವಿರ ಕೋಟಿ ಹಣ ಅಗತ್ಯವಿದೆ. ಯೋಜನೆಗಳ ಅನುಷ್ಠಾನಕ್ಕಾಗಿ ಹಣ ಹೊಂದಿಸಲು ಮದ್ಯ ಪ್ರಿಯರಿಗೆ ಸರ್ಕಾರ ಶಾಕ್ ನೀಡುತ್ತಿದೆ.
ಇನ್ನು ಇತ್ತೀಚಿಗೆ ನಡೆದ ವಿಧಾಸಭಾ ಬಜೆಟ್ ನಲ್ಲಿ ಸಿದ್ದರಾಮಯ್ಯ (Siddaramaiah) ಅವರು ಮದ್ಯದ ಬೆಲೆ ಏರಿಸುವ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಜುಲೈ 20 ರಿಂದ ಮದ್ಯ ಮಾರಾಟದಲ್ಲಿ ಹೊಸ ನಿಯಮ ಜಾರಿಯಾಗಲಿದೆ.
ಮದ್ಯಪ್ರಿಯರಿಗೆ ಬೇಸರದ ಸುದ್ದಿ
ಕಾಂಗ್ರೆಸ್ ನ ಐದು ಗ್ಯಾರೆಂಟಿ ಯೋಜನೆಗಳ ಹೊರೆ ತಗ್ಗಿಸಲು ಅಬಕಾರಿ ಸುಂಕ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು ಗ್ಯಾರೆಂಟಿ ಯೋಜನೆಗಳು ಘೋಷಣೆ ಆದ ಬೆನ್ನಲ್ಲಿಯೇ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಗ್ಯಾರೆಂಟಿ ಈಡೇರಿಕೆಗೆ ಬೇಕಾದ ಸಂಪನ್ಮೂಲ ಕ್ರೋಡೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಇದರ ನೇರ ಹೊರೆಯನ್ನು ಮದ್ಯಪ್ರಿಯರ ಮೇಲೆ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಮದ್ಯ ಪ್ರಿಯರಿಗೆ ಜೂಲೈ 20 ರಿಂದ ಹೊಸ ನಿಯಮ
ಇನ್ನು ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20 ರಿಂದ ಜಾರಿಗೆ ಬರಲಿದೆ. ಬೆಲೆ ಏರಿಕೆಗೆ ಸಂಬಂಧಪಟ್ಟಂತೆ ಅಬಕಾರಿ ಮೇಲಿನ ಸುಂಕ ಹೆಚ್ಚಳ ಕುರಿತಂತೆ ಸರ್ಕಾರ ಸೋಮವಾರ ಕರಡು ಪ್ರಕಟಿಸಿದ್ದು 7 ದಿನದೊಳಗೆ ಆಕ್ಷೇಪ ಸಲ್ಲಿಸುವಂತೆ ಮನವಿ ಮಾಡಿದೆ. ಇನ್ನು ಬೆಲೆ ಏರಿಕೆಗೆ ಅವಕಾಶ ಸಿಕ್ಕರೆ ಭಾರತೀಯ ಮದ್ಯ (ಐಎಂಎಲ್) ಒಂದು ಪೆಗ್ (60 ಎಂಎಲ್) ಗೆ 10 ರಿಂದ 20 ರೂ. ಇನ್ನು ಬಿಯರ್ ಬೆಲೆ ಪ್ರತಿ ಬಾಟಲ್ ಗೆ 3 ರಿಂದ 5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.
ಮದ್ಯದ ದರದಲ್ಲಿ ಬಾರಿ ಏರಿಕೆ
ಇನ್ನು ಬಿಯರ್ ಸೇರಿದಂತೆ ಹಾರ್ಡ್ ಡ್ರಿಂಕ್ಸ್ ಗಳ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಬಡ್ ವೈಸರ್ ಬಿಯರ್ ದರ ರೂಪಾಯಿ 198 ರಿಂದ 220 , ಕಿಂಗ್ ಫಿಷರ್ ಬಿಯರ್ ದರ ರೂಪಾಯಿ 160 ರಿಂದ 170 , ಯುಬಿ ಪ್ರೀಮಿಯಂ ದರ ರೂಪಾಯಿ 125 ರಿಂದ 135 ಸ್ಟ್ಯಾಂಗ್ ದರ ರೂಪಾಯಿ 130 ರಿಂದ 135 ಕ್ಕೆ ಹೆಚ್ಚಳ ಮಾಡಲಾಗಿದೆ. ಮದ್ಯಪ್ರಿಯರಿಗೆ MSIL ನಲ್ಲಿ MRP ದರದಂತೆ ಸಿಕ್ಕರೇ, ಬಾರ್, ರೆಸ್ಟೋರೆಂಟ್ ಗಳಲ್ಲಿ 10 ರಿಂದ 20 ರೂ. ಹೆಚ್ಚಿನ ದರದಲ್ಲಿ ಲಭ್ಯವಾಗಲಿದೆ.