Alia Bhatt: ಯಾವುದೇ ಅಂಜಿಕೆ ಇಲ್ಲದೆ ಅಂಬಾನಿ ಜೊತೆ ದೊಡ್ಡ ಡೀಲ್ ಮಾಡಿಕೊಂಡ ಆಲಿಯಾ ಭಟ್, ದುಡ್ಡಿನ ಮಹಿಮೆ.
ಆಲಿಯಾ ಭಟ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಮುಕೇಶ್ ಅಂಬಾನಿ.
Alia Bhatt And Mukesh Ambani: ಬಾಲಿವುಡ್ ನ ಖ್ಯಾತ ನಟಿ ಆಲಿಯಾ ಭಟ್ (Alia Bhatt) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಆಲಿಯಾ ಭಟ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಅವರು ಆರ್ ಆರ್ ಆರ್ ಸಿನಿಮಾ ಮತ್ತು ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸಿ ಹೆಚ್ಚಿನ ಖ್ಯಾತಿ ಪಡೆದಿದ್ದರು.
ಇದೀಗ ನಟಿ ಆಲಿಯಾ ಭಟ್ ಬೇರೆ ಬೇರೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಆಲಿಯಾ ಭಟ್ ಅವರ ಮುಂದಿನ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಆಲಿಯಾ ಭಟ್ ಬಟ್ಟೆ ಕಂಪನಿಯನ್ನು ಖರೀದಿಸಲಿದ್ದಾರೆ ಮುಕೇಶ್ ಅಂಬಾನಿ (Mukesh Ambani)
ನಟಿ ಆಲಿಯಾ ಭಟ್ ಬ್ರಾಂಡ್ ಎಡ್ ಎ ಮಮ್ಮಾ ಎಂಬ ಬಟ್ಟೆಯನ್ನು ಆರಂಭಿಸಿದ್ದು ಪ್ರಸ್ತುತ ಯಶಸ್ವಿಯಾಗಿ ನಡೆಸುತ್ತಿದೆ. ಈ ಮಧ್ಯೆ ಆಲಿಯಾ ಭಟ್ ಕಂಪನಿಯನ್ನು ರಿಲಯನ್ಸ್ ಮುಖ್ಯಸ್ಥ ಅಂಬಾನಿ ಖರೀದಿಸಲಿದ್ದಾರೆ ಎಂಬ ವರದಿ ಕೇಳಿ ಬಂದಿದೆ. ಅದಕ್ಕಾಗಿ ಆಲಿಯಾ ಭಟ್ ಜೊತೆ ಅಂಬಾನಿ ಭಾರಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅನೇಕ ವ್ಯವಹಾರಗಳೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಾರೆ. ಇದೀಗ ತಮ್ಮ ವ್ಯವಹಾರ ವೂಸ್ಟರಣೆಯ ಭಾಗವಾಗಿ ಆಲಿಯಾ ಭಟ್ ಬಟ್ಟೆ ಬ್ರಾಂಡ್ ಕಂಪನಿಯನ್ನು ಖರೀದಿಸುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ.
ನಟಿ ಆಲಿಯಾ ಭಟ್ ಮತ್ತು ಮುಕೇಶ್ ಅಂಬಾನಿ ಅವರ ಒಪ್ಪಂದ
ಅಂಬಾನಿ ತಮ್ಮ ಮಗಳ ವ್ಯಾಪಾರದ ವಿಸ್ತರಣೆಗಾಗಿ ಆಲಿಯಾ ಭಟ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ರಿಲಯನ್ಸ್ ಬ್ರಾಂಡ್ ಆಲಿಯಾ ಭಟ್ ಅವರ ಮಕ್ಕಳ ವೇರ್ ಬ್ರಾಂಡ್ ಎಡ್ ಎ ಮಮ್ಮಾ ಕಂಪನಿಯನ್ನು ಖರೀದಿಸಲು ಸಿದ್ಧವಾಗಿದೆಯಂತೆ.
ಸುಮಾರು ರೂಪಾಯಿ 300 ಕೋಟಿಗೆ ಖರೀದಿಸಲಿದೆ ಎಂದು ವರದಿಗಳಿವೆ. ಇನ್ನು ಈ ವ್ಯವಹಾರ ಒಪ್ಪಂದದ ಬಗ್ಗೆ ಚರ್ಚೆ ಅಂತಿಮ ಹಂತದಲ್ಲಿದೆ. ಮುಂದಿನ ವಾರದಲ್ಲಿ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.