Alia Bhatt Daughter Astrology: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಆಲಿಯಾ ಭಟ್ ಮಗಳ ಜಾತಕ, ಹೆತ್ತವರು ತುಂಬಾ ಲಕ್ಕಿ.
Alia Bhatt Daughter Astrology: ಆಲಿಯಾ ಭಟ್ (Alia Bhatt) ದೇಶದ ಚಿತ್ರರಂಗ ಖ್ಯಾತ ನಟಿಯರಲ್ಲಿ ಒಬ್ಬರು. ಬಾಲಿವುಡ್ (Bollywood) ನಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ನಟಿ ಆಲಿಯಾ ಭಟ್ ಅವರು ಸದ್ಯ ಮದುವೆಯ ನಂತರ ಯಾವುದೇ ಚಿತ್ರದಲ್ಲಿ ನಟನೆಯನ್ನ ಮಾಡಿಲ್ಲ.
ಮದುವೆಯಾದ ಒಂದೇ ತಿಂಗಳಿಗೆ ಗರ್ಭಿಣಿಯಾದ (Pregnant) ನಟಿ ಆಲಿಯಾ ಭಟ್ ಅವರು ತನ್ನ ಮಗುವಿನ ಆರೈಕೆಯಲ್ಲಿ ಬಹಳ ಬ್ಯುಸಿ ಆದರೂ ಎಂದು ಹೇಳಿದರೆ ತಪ್ಪಾಗಲ್ಲ. RRR ಚಿತ್ರದ ನಂತರ ತನ್ನ ಬಹುಕಾಲದ ಪ್ರಿಯತಮ ರಣಬೀರ್ ಕಪೂರ್ (Ranabir Kapoor) ಅವರನ್ನ ಮದುವೆಯಾದ ನಟಿ ಆಲಿಯಾ ಭಟ್ ಅವರು ಮದುವೆಯ ನಂತರ ಸಂಸಾರ ಸಾಗರದಲ್ಲಿ ಮುಳುಗಿದರು.
ಮದುವೆಯಾದ ಒಂದೇ ತಿಂಗಳಿಗೆ ಗರ್ಭಿಣಿಯಾದ ನಟಿ ಆಲಿಯಾ ಭಟ್ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ (Social Media) ಫೋಟೋಗಳನ್ನ ಶೇರ್ ಮಾಡುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇದ್ದರು.
ಹೆಣ್ಣು ಮಗಿವಿಗೆ ಜನ್ಮ ನೀಡಿದ ನಟಿ ಆಲಿಯಾ ಭಟ್
ನಿನ್ನೆ ನಟಿ ಆಲಿಯಾ ಭಟ್ ಅವರು ಹೆಣ್ಣು ಮಗುವಿಗೆ ಜನ್ಮವನ್ನ ನೀಡಿದ್ದಾರೆ. ಈ ವಿಷಯವನ್ನ ಆಲಿಯಾ ಭಟ್ ಅವರ ಗಂಡ ರಣಬೀರ್ ಕಪೂರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡು ಸಂತಸವನ್ನ ವ್ಯಕ್ತಪಡಿಸಿದರು. ನಿನ್ನೆ ನಟಿ ಆಲಿಯಾ ಭಟ್ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮವನ್ನ ನೀಡಿದ್ದು ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿ ಇದ್ದಾರೆ.
ಈ ಮಗು ತುಂಬಾ ಲಕ್ಕಿ ಎಂದು ಜ್ಯೋತಿಷ್ಯ ನುಡಿದ ಜ್ಯೋತಿಷಿಗಳು
ಒಬ್ಬ ನಟಿ ಮಗುವಿಗೆ ಜನ್ಮ ನೀಡಿದಳು ಅಂದಮೇಲೆ ಅವರ ಬಗ್ಗೆ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತದೆ. ಅದೇ ರೀತಿಯಲ್ಲಿ ನಟಿ ಆಲಿಯಾ ಭಟ್ ಅವರ ಮಗುವಿನ ಜಾತಕದ ವಿಷಯದ ಕೂಡ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಾಗಿದೆ.
ಹೌದು ಮಗುವಿನ ಕುರಿತು ಭವಿಷ್ಯ ನುಡಿದ ಒವ್ವಾ ಜ್ಯೋತಿಷಿ ಈ ಮಗು ಬಹಳ ಲಕ್ಕಿ ಮಗು ಎಂದು ಹೇಳಿದ್ದಾರೆ. ಈ ಮಗು ಹೆತ್ತವರಿಗೆ ಬಹಳ ಅದೃಷ್ಟವನ್ನ ತರಲಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ನಿನ್ನೆ ಭಾನುವಾರ ರೇವತಿ ನಕ್ಷತ್ರದಲ್ಲಿ ಈ ನಗು ಜನಿಸಿದ ಕಾರಣ ಮುಂದಿನ ದಿನಗಳಲ್ಲಿ ತಂದೆ ತಾಯಿಯ ಜೀವನದಲ್ಲಿ ಬಹಳ ಬದಲಾವಣೆ ಆಗಲಿದೆ ಮತ್ತು ಅವರಿಗೆ ಅದೃಷ್ಟ ಕೈ ಹಿಡಿಯಲಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.
ಮಹರ್ಷಿ ಕಪಿ ಗುರುಕುಲದ ಸಂಸ್ಥಾಪ ಜ್ಯೋತಿಷಿ ವೇದಾಶ್ವಾಪತಿ ಅಲೋಕ್ ಅವಸ್ಥಿ ಅವರು ಆಲಿಯಾ ಭಟ್ ಮಗಳ ಬಗ್ಗೆ ಭವಿಷ್ಯವನ್ನ ಹೇಳಿದ್ದಾರೆ. ಭವಿಷ್ಯದಲ್ಲಿ ಆಲಿಯಾ ಭಟ್ ಮಗಳು ಯಾವ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನ ಆರಂಭ ಮಾಡುತ್ತಲೇ ಮತ್ತು ಆಕೆಯ ಭವಿಷ್ಯ ಹೇಗಿರುತ್ತದೆ ಎಂದು ಭವಿಷ್ಯವನ್ನ ನುಡಿದಿದ್ದಾರೆ.
ಆಲಿಯಾ ಭಟ್ ಮಗಳು ರೇವತಿ ನಕ್ಷತ್ರದಲ್ಲಿ ಹುಟ್ಟಿರುವ ಕಾರಣ ಅವಳ ರಾಶಿಚಕ್ರದ ಪ್ರಕಾರ ಅವಳು ಹೆತ್ತವರ ಹಾಗೆ ಚಿತ್ರರಂಗದಲ್ಲಿ ಬಹಳ ದೊಡ್ಡ ಮಟ್ಟದ ಸಾಧನೆಯನ್ನ ಮಾಡಲಿದ್ದಾಳೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.
ತಾಯಿಯಂತೆ ಬಿಸಿನೆಸ್ ಮಾಡಲಿದ್ದಾಳೆ
ನಟಿ ಆಲಿಯಾ ಭಟ್ ಅವರು ಕೇವಲ ಚಿತ್ರರಂಗದಲ್ಲಿ ಮಾತ್ರ ನಟನೆಯನ್ನ ಮಾಡದೇ ಕೆಲವು ಬಿಸಿನೆಸ್ ಅಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಆಲಿಯಾ ಭಟ್ ಮಗಳು ಕೂಡ ಕೆಲವು ಬಿಸಿನೆಸ್ ನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲಿದ್ದಾಳೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.
ಅದೇ ರೀತಿಯಲ್ಲಿ ಆಲಿಯಾ ಭಟ್ ಮಗಳು ಪ್ರೇಮ ಪ್ರಕರಣದಲ್ಲಿ ಚರ್ಚೆಯಾಗಲಿದ್ದಾಳೆ ಎಂದು ಕೂಡ ಜ್ಯೋತಿಷಿಗಳು ಹೇಳಿದ್ದಾರೆ.