Marriage Law: ಮದುವೆಯಲ್ಲಿ ಈ ಶಾಸ್ತ್ರ ಮಾಡದಿದ್ದರೆ ಅಂತಹ ಮದುವೆ ಅಮಾನ್ಯ, ಹೈಕೋರ್ಟ್ ಮಹತ್ವದ ತೀರ್ಪು.
ಅಲಹಾಬಾದ್ ನ್ಯಾಯಾಲಯ ಹಿಂದೂ ಧರ್ಮದ ಮದುವೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ನೀಡಿದೆ.
Marriage Law Latest Update: ಹಿಂದೂ ಧರ್ಮದಲ್ಲಿ ವಿವಾಹವು (Marriage) ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಹಿಂದೂ ಧರ್ಮದ ಪ್ರಕಾರ ಮದುವೆ ಎಂದರೆ ಎಲ್ಲ ಶಾಸ್ತ್ರಗಳೊಂದಿಗೆ ಶಾಸ್ತ್ರೋಸ್ತ್ರವಾಗಿ ನೆರವೇರುವುದು.
ಮದುವೆಯಲ್ಲಿ ಯಾವುದೇ ಶಾಸ್ತ್ರವನ್ನು ಮೀರಿದರು ಏನೋ ಅಶುಭ ಆಗುತ್ತದೆ ಎನ್ನುವುದು ಎಲ್ಲರ ನಂಬಿಕೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ಹಿಂದೂ ಧರ್ಮದಲ್ಲಿರುವ ಎಲ್ಲ ಶಾಸ್ತ್ರವನ್ನು ಮಾಡುವ ಮೂಲಕ ತಮ್ಮ ಮದುವೆಯನ್ನು ಸಂಪೂರ್ಣ ಮಾಡಿಕೊಳ್ಳುತ್ತಾರೆ.
ಹಿಂದೂ ಧರ್ಮದ ಮದುವೆಯ ಕುರಿತು ನ್ಯಾಯಾಲಯದ ಮಹತ್ವದ ಆದೇಶ
ಇನ್ನು ಭಾರತೀಯ ಕಾನೂನಿನಲ್ಲಿ ಎಲ್ಲದಕ್ಕೂ ನಿಯಮಗಳ ಇದ್ದೆ ಇರುತ್ತದೆ. ಅದೇ ರೀತಿ ಭಾರತೀಯ ಕಾನೂನಿನಲ್ಲಿ ಮದುವೆಗೂ ಕೂಡ ಅನೇಕ ನಿಯಮಗಳಿವೆ. ಮದುವೆ ಎಂದರೆ ಸುಲಭದ ಮಾತಲ್ಲ. ಗುರುಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಸ್ತ್ರವಾಗಿ ಆದ ಮದುವೆಗೆ ಕಾನೂನು ಹೆಚ್ಚು ಮಹತ್ವವನ್ನು ನೀಡುತ್ತದೆ. ಸದ್ಯ ಹಿಂದೂ ವಿವಾಹದಲ್ಲಿ ಈ ಶಾಸ್ತ್ರ ನೆರವೇರದಿದ್ದರೆ ಅಂತಹ ಮದುವೆ ಮಾನ್ಯವಲ್ಲ ಎಂದು ಭಾರತೀಯ ನ್ಯಾಯಾಲಯ ಆದೇಶ ಹೊರಡಿಸಿದೆ.
ಇಂತಹ ವಿವಾಹವನ್ನು ಮದುವೆಯೆಂದು ಪರಿಗಣಿಸಲಾಗುವುದಿಲ್ಲ
ಸಧ್ಯ ಅಲಹಾಬಾದ್ ನ್ಯಾಯಾಲಯ ಹಿಂದೂ ಧರ್ಮದ ಮದುವೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ನೀಡಿದೆ. ಪತಿ ಪತ್ನಿಯ ದಾಂಪತ್ಯ ಜೀವನಕ್ಕೆ ಸಂಬಂದಿಸಿದ ಪ್ರಕರಣವೊಂದು ಕೋರ್ಟ್ ಮೆಟ್ಟಿಲೇರಿದೆ. ಈ ವೇಳೆ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯ ಹಿಂದೂ ಧರ್ಮದ ಮದುವೆಯಲ್ಲಿ ಇಂತಹ ಶಾಸ್ತ್ರ ಇಲ್ಲದಿದ್ದರೆ ಆ ಮದುವೆ ಮಾನ್ಯ ಎಂದು ಪರಿಗಣಿಸುವುದಿಲ್ಲ ಎಂದು ಆದೇಶವನ್ನು ಹೊರಡಿಸಿದೆ.
ಮದುವೆಯಲ್ಲಿ ಸಪ್ತಪದಿ ಇಲ್ಲದಿದ್ದರೆ ಅಂತಹ ಮದುವೆ ಮಾನ್ಯವಲ್ಲ
ವಾರಾಣಸಿಯಲ್ಲಿ ಪತಿಯು ಎರಡನೇ ಮದುವೆ ಮಾಡಿಕೊಂಡಿರುವವುದಾಗಿ ಪತ್ನಿ ಹಾಗೂ ಆತನ ಅತ್ತೆ ನ್ಯಾಯಾಲಯಕ್ಕೆ ವ್ಯಕ್ತಿಯ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಮದುವೆಯ ಸಮಾರಂಭ ನಡೆದಿರುವ ಬಗ್ಗೆ ದೂರಿನಲ್ಲಿ ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ವಿವಾಹದ ಅಗತ್ಯದ ಆಚರಣೆಯಾದ ಸಪ್ತಪದಿ ತುಳಿದಿರುವ ಬಗ್ಗೆ ಯಾವುದೇ ಪುರಾವೆಯಿಲ್ಲ. ಹುಡುಗಿಯ ಮುಖ ಕೂಡ ಸ್ಪಷ್ಟವಾಗಿಲ್ಲ.
ಪತಿಯ ವಿರುದ್ಧ ಸಲ್ಲಿಸಿರುವ ದೂರಿನಲ್ಲಿ ಮದುವೆ ಸಮಾರಂಭ ನಡೆದಿರುವ ಯಾವುದೇ ಸಾಕ್ಷಾಧಾರ ನೀಡಿಲ್ಲ ಎನ್ನುವುದು ನ್ಯಾಯಾಲದ ಗಮನಕ್ಕೆ ಬಂದಿದೆ. ಹಿಂದೂ ಧರ್ಮದ ಮಹತ್ವದ ಆಚರಣೆಯ ಸಪ್ತಪದಿ ಶಾಸ್ತ್ರ ಮದುವೆಯಲ್ಲಿ ನೆರವೇರದೇ ಇರುವ ಕಾರಣ ಅಂತಹ ಮದುವೆಯನ್ನು ಮಾನ್ಯವೆಂದು ಪರಿಗಣಿಸಲಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಮೂಲಕ ಮದುವೆಯಲ್ಲಿ ಸಪ್ತಪದಿ ಶಸ್ತ್ರಾ ಎಷ್ಟು ಮುಖ್ಯ ಎನ್ನುವ ಬಗ್ಗೆ ತಿಳಿಸಿದೆ.