Allu Arha: ದೇವರ ಚಿತ್ರಕ್ಕೆ ಅಲ್ಲೂ ಅರ್ಜುನ್ ಮಗಳು ಪಡೆದ ಸಂಭಾವನೆ ಎಷ್ಟು, ಅಪ್ಪನಷ್ಟೇ ದುಬಾರಿಯಾದ ಮಗಳು.
ದೇವರ ಸಿನಿಮಾದಲ್ಲಿ ನಟಿಸಿದ ಅಲ್ಲೂ ಅರ್ಜುನ್ ಪುತ್ರಿ ಅರ್ಹ ಪಡೆದ ಸಂಭಾವನೆ ಬಗ್ಗೆ ಮಾಹಿತಿ.
Allu Arha Devara Movie: ತೆಲುಗಿನ ಖ್ಯಾತ ನಟರಾದ ಜೂನಿಯರ್ ಏನ್ ಟಿ ಆರ್ (Jr. NTR) ಇದೀಗ ದೇವರ (Devara) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟ ಜೂನಿಯರ್ ಏನ್ ಟಿ ಆರ್ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.
ಇದೀಗ ಜೂನಿಯರ್ ಏನ್ ಟಿ ಆರ್ ದೇವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಇದೀಗ ಇದೀಗ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಸ್ಟಾರ್ ನಟರ ದಂಡೇ ಇದೆ ಎನ್ನಲಾಗುತ್ತದೆ. ಇನ್ನು ಈ ಸಿನಿಮಾದಲ್ಲಿ ನಟ ಅಲ್ಲೂ ಅರ್ಜುನ್ ಮಗಳು ಅರ್ಹ (Arha) ನಟಿಸಲಿದ್ದಾರೆ ಎಂಬ ಸುದ್ದಿ ಹರಡಿದೆ.
ಜೂನಿಯರ್ ಏನ್ ಟಿ ಆರ್ ಅವರ ದೇವರ ಸಿನಿಮಾದಲ್ಲಿ ಅಲ್ಲೂ ಅರ್ಜುನ್ ಪುತ್ರಿ
ಜೂನಿಯರ್ ಏನ್ ಟಿ ಆರ್ ಅವರ ದೇವರ ಸಿನಿಮಾದಲ್ಲಿ ತೆಲುಗಿನ ಮತ್ತೊಬ್ಬ ಸ್ಟಾರ್ ನಟ ಅಲ್ಲೂ ಅರ್ಜುನ್ ಅವರ ಪುತ್ರಿ ಅರ್ಹ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಸ್ಟಾರ್ ನಟರು ನಟಿಸುತ್ತಿರುವ ದೇವರ ಸಿನಿಮಾದಲ್ಲಿ ಜೂನಿಯರ್ ಏನ್ ಟಿ ಆರ್ ಗೆ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ದೇವರ ಸಿನಿಮಾದಲ್ಲಿ ಅಲ್ಲೂ ಅರ್ಜುನ್ ಪುತ್ರಿ ಪಡೆದ ಸಂಭಾವನೆ ಎಷ್ಟು
ಇನ್ನು ದೇವರ ಸಿನಿಮಾದಲ್ಲಿ ಜೂನಿಯರ್ ಏನ್ ಟಿ ಆರ್ ಎರಡು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇವರಿಗೆ ಮಗಳ ಪಾತ್ರದಲ್ಲಿ ಅಲ್ಲೂ ಅರ್ಜುನ್ ಅವರ ಪುತ್ರಿ ಅಲ್ಲೂ ಅರ್ಹ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲೂ ಅರ್ಜುನ್ ಪುತ್ರಿ ಅಲ್ಲೂ ಅರ್ಹ ಅವರಿಗೆ ನಟನೆ ಕಮ್ಮಿ ಇದ್ದು, 2 ರಿಂದ 3 ದಿನಗಳ ಕಾಲ ನಡೆಯಲಿರುವ ಚಿತ್ರೀಕರಣಕ್ಕೆ 20 ಲಕ್ಷ ಸಂಭಾವನೆ ಕೊಡಲಾಗಿದೆ ಎಂದು ತಿಳಿದುಬಂದಿದೆ.
ಕೊರಟಾಳ ಶಿವ ನಿರ್ದೇಶನದಲ್ಲಿ ತಯಾರಾಗುತ್ತಿರುವ ದೇವರ ಸಿನಿಮಾದಲ್ಲಿ ಜಾನ್ವಿ ಕಪೂರ್ ಕೂಡ ನಟಿಸುತ್ತಿದ್ದಾರೆ. ಜಾನ್ವಿ ಕಪೂರ್ ಅವರ ಬಾಲ್ಯ ಜೀವನದ ಪಾತ್ರದಲ್ಲಿ ಅಲ್ಲೂ ಅರ್ಹ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ನಟಿ ಸಮಂತಾ ನಟನೆಯ ಶಾಕುಂತಲಂ ಸಿನಿಮಾದಲ್ಲಿ ಅಲ್ಲೂ ಅರ್ಜುನ್ ಪುತ್ರಿ ಅರ್ಹ ನಟಿಸಿದ್ದಳು. ಈ ಸಿನಿಮಾದ ನಟನೆಯಲ್ಲಿ ಪುತ್ರಿ ಅರ್ಹಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಮತ್ತೆ ದೇವರ ಸಿನಿಮಾದಲ್ಲಿ ಅಲ್ಲೂ ಅರ್ಹ ಕಾಣಿಸಿಕೊಳ್ಳಲಿದ್ದಾಳೆ.