Ads By Google

ಅಂದು ತೀರಾ ಕಷ್ಟದಲ್ಲಿದ್ದ ಧೋನಿಗೆ ಅಂಬರೀಷ್ ಕೊಟ್ಟ ಹಣ ಎಷ್ಟು ಗೊತ್ತಾ, ಇಲ್ಲಿದೆ ಯಾರಿಗೂ ತಿಳಿದಿರದ ಸತ್ಯ

ambi and dhoni
Ads By Google

ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಮಳವಳ್ಳಿ ಹುಚ್ಚೇಗೌಡ ಅಮರನಾಥ್ (ಅಂಬರೀಶ್) ಅವರು ಭಾರತೀಯ ಚಿತ್ರರಂಗದ ನಟರು ಹಾಗೂ ರಾಜಕಾರಣಿಯು ಆಗಿದ್ದಾರೆ. ಇವರು ಜನಿಸಿದ್ದು 29 ಮೇ 1952 ಮಂಡ್ಯ ಜಿಲ್ಲೆಯ ದೊಡ್ದರೆಸಿಕೆರೆ ಗ್ರಾಮದಲ್ಲಿ. ತಂದೆ ಹುಚ್ಚೇಗೌಡ ತಾಯಿ ಪದ್ಮಮ್ಮ. ಇವರ ಬಾಲ್ಯ ವಿದ್ಯಾಬ್ಯಾಸ ಮುಗಿಸಿದ್ದು ಮಂಡ್ಯದಲ್ಲಿ. ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದುಕೊಂಡಿದ್ದಾರೆ. ಅಂಬರೀಶ್ ಅವರು 1991 ರಲ್ಲಿ ಕನ್ನಡದಖ್ಯಾತ ನಟಿ ಸುಮಲತಾ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದರು.

ಅಂಬರೀಶ್ ಇದುವರೆಗೂ ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳನ್ನ ಮಾಡಿದ್ದಾರೆ. ಆದ್ರೆ, ಅವರ ಮೊದಲ ಚಿತ್ರ, ಮೊದಲ ಡೈಲಾಗ್ ಎಂದೆಂದಿಗೂ ಮೆರಯಲು ಸಾಧ್ಯವಿಲ್ಲ. ‘ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್ ಚೊಚ್ಚಲ ಬಾರಿಗೆ ನಾಯಕನಾಗಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ನಾಯಕಿಯನ್ನ ಚುಡಾಯಿಸುವ ‘ಜಲೀಲ’ ಎಂಬ ಯುವಕನ ಪಾತ್ರದಲ್ಲಿ ಅಂಬರೀಶ್ ಮಿಂಚಿದ್ದರು. ‘ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ ಎಂದು ಅಂಬಿ ಹೇಳಿದ ಡೈಲಾಗ್ ಈಗಲೂ ಎವರ್ ಗ್ರೀನ್ ಆಗಿಯೇ ಉಳಿದುಕೊಂಡಿದೆ.

ಆದರೆ ಇಂದು ನಾವು ಹೇಳಹೊರಡುತ್ತಿರುವ ವಿಷಯ ಅಂಬಿ ಬಗ್ಗೆ ನಿಮಗೆ ಗೊತ್ತೇ ಇರದ ಕೆಲವು ಸಂಗತಿ. ಇದನ್ನು ಸ್ವತಃ ಬಯಲು ಮಾಡಿದ್ದಾರೆ ನಟಿ ಸುಮಲತಾ. ಹೌದು ಒಂದು ಕೈಯಲ್ಲಿ ದಾನ ಮಾಡಿದರೆ ಮತ್ತೊಂದು ಕೈಯಾಗೆ ಗೊತ್ತಾಗದ ರೀತಿಯಲ್ಲಿ ಇದ್ದರು ಅಂಬರೀಷ್. ಇದಕ್ಕೆ ಪುಷ್ಟಿ ನೀಡುವಂತೆ ಇಲ್ಲೊಂದು ಸ್ಟೋರಿ ಇದೆ ನೋಡಿ ಒಮ್ಮೆ.

ಹೌದು ನಟ ಅಂಬರೀಶ್ ಅವರು ಬಹಳ ವರ್ಷಗಳ ಹಿಂದೆ ಕ್ರಿಕೆಟರ್ ಎಂ.ಎಸ್.ಧೋನಿ ಅವರ ಆಟದ ವೈಖರಿ ಮೆಚ್ಚಿ ಅವರಿಗೆ 2 ಲಕ್ಷ ಹಣ ನೀಡಿ ಸಹಾಯ ಮಾಡಿದ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ. ಈ ಸತ್ಯ ಹೇಳಿದ್ದು ಬೇರೆ ಯಾರು ಅಲ್ಲ ಅಂಬರೀಶ್ ಅವರ ಪತ್ನಿ ಹಿರಿಯನಟಿ ಮತ್ತು ಸಂಸದೆ ಸುಮಲತಾ ಅವರು ಈ ಘಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಇಷ್ಟಕ್ಕೂ ಇದನ್ನು ನೀವು ನಂಬದೆ ಇರಬಹುದು ಆದರೆ ದೇಶದ ಪ್ರತಿಷ್ಠಿತ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಅಂಬರೀಶ್ ಅವರು ಎಂ.ಎಸ್.ಧೋನಿ ಅವರಿಗೆ 2 ಲಕ್ಷ ಚೆಕ್ ನೀಡಿ ಸಹಾಯ ಮಾಡಿದ್ದರು ಎನ್ನುವ ವಿಚಾರದ ಬಗ್ಗೆ ಒಂದು ಆರ್ಟಿಕಲ್ ಬಂದಿತ್ತು. ಆಗಿನ ಸಮಯದಲ್ಲಿ ಅದು ಸಾಕಷ್ಟು ವೈರಲ್ ಕೂಡ ಆಗಿತ್ತು. ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಸುಮಲತಾ ಅವರು ಆ ಘಟನೆಯ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಈ ಘಟನೆ ಇಂದ ರೆಬೆಲ್ ಸ್ಟಾರ್ ಬಗ್ಗೆ ಎಲ್ಲರಿಗೂ ಇದ್ದ ಅಭಿಮಾನ ಇನ್ನಷ್ಟು ಹೆಚ್ಚಾಗಿದೆ.

ಅಂಬರೀಶ್ ಅವರು ಮಾಡುತ್ತಿದ್ದ ಸಹಾಯ ಎಲ್ಲಿಯೂ ಹೊರಗಡೆ ಗೊತ್ತಾಗುತ್ತಿರಲಿಲ್ಲ. ಏಕೆಂದರೆ ಮಾಡುವ ಸಹಾಯದ ಬಗ್ಗೆ ಅವರು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಇಂತಹ ವಿಷಯಗಳನ್ನು ಅನಿರೀಕ್ಷಿತವಾಗಿ ನೋಡಿದಾಗ ನನಗೆ ಆಶ್ಚರ್ಯವಾಗುತ್ತದೆ. ಈ ವಿಚಾರದಲ್ಲೇ ಯಾವುದೇ ಅಚ್ಚರಿ ಇಲ್ಲ, ಅವರನ್ನು ಪ್ರೀತಿಸುವ ಜನ ಅವರನ್ನು ದಾನ ಕರ್ಣ ಎಂದು ಕರೆಯುತ್ತಿದ್ದರು..” ಎಂದು ಟ್ವೀಟ್ ಮಾಡಿದ್ದಾರೆ ಸುಮಲತಾ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field