Amazfit: ಒಮ್ಮೆ ಚಾರ್ಜ್ ಮಾಡಿದರೆ 10 ದಿನ ಬ್ಯಾಟರಿ ಲೈಫ್, ಸಂಪೂರ್ಣ ಆರೋಗ್ಯದ ಮಾಹಿತಿ ನೀಡುವ ವಾಚ್ ಅಗ್ಗದ ಬೆಲೆಗೆ.
ಸಂಪೂರ್ಣ ಆರೋಗ್ಯ ಮಾಹಿತಿ ನೀಡುವ ಈ ವಾಚ್ ಗೆ ಭರ್ಜರಿ ಬೇಡಿಕೆ.
Amazfit Bip 5 Smartwatch: ಪ್ರಸ್ತುತ ಡಿಜಿಟಲ್ ಯುಗದಲ್ಲಿ ಇದೀಗ ಎಲೆಕ್ಟ್ರಾನಿಕ್ ವಸ್ತುಗಳು ಬಾರಿ ಟ್ರೆಂಡಿಂಗ್ ನಲ್ಲಿವೆ. ಹೊಸ ಹೊಸ ಬ್ರಾಂಡ್ ಗಳು ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್ ಗಳನ್ನೂ ಮಾರುಕಟ್ಟೆಯಲ್ಲಿ ಪ್ರತಿ ನಿತ್ಯ ಪರಿಚಯಿಸುತ್ತಿವೆ. ಇತ್ತೀಚೆಗಂತೂ ಸ್ಮಾರ್ಟ್ ವಾಚ್ (Smartwatch) ಬಳಸುವು ಟ್ರೆಂಡ್ ಆಗಿ ಬಿಟ್ಟಿದೆ.
ಎಲ್ಲರ ಕೈಯಲ್ಲೂ ಇದೀಗ ಸ್ಮಾರ್ಟ್ ವಾಚ್ ಹೊಳೆಯುತ್ತಿದೆ. ವಿವಿಧ ಬ್ರಾಂಡ್ ನ ಸ್ಮಾರ್ಟ್ ವಾಚ್ ಗಳು ಗ್ರಾಹಕರನ್ನು ಸೆಳೆಯುತ್ತಿದೆ. ಇನ್ನು ಕಂಪನಿಗೂ ಬೇರೆ ಸ್ಮಾರ್ಟ್ ವಾಚ್ ಗಳಿಗೆ ಪೈಪೋಟಿ ನೀಡಲು ಒಂದಕ್ಕಿಂತ ಇನ್ನೊಂದು ಹೊಸ ಹೊಸ ಫೀಚರ್ ನಲಿ ವಾಚ್ ಗಳನ್ನೂ ಬಿಡುಗಡೆ ಗೊಳಿಸುತ್ತಿವೆ. ಇದೀಗ Amazfit ಕಂಪನಿ ನೂತನ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸಿದೆ.
Amazfit Bip 5 ಸ್ಮಾರ್ಟ್ ವಾಚ್
ನೂತನ Amazfit Bip 5 ಸ್ಮಾರ್ಟ್ ವಾಚ್ 1.91 ಇಂಚಿನ LCD ಡಿಸ್ ಪ್ಲೇ ಹೊಂದಿದ್ದು ಫಿಂಗರ್ ಫ್ರಿನ್ಟ್ ವಿರೋಧಿ ಲೇಪನದೊಂದಿಗೆ 2.5 D ಟೆಂಪರ್ಡ್ ಗ್ಲಾಸ್ ಅನ್ನು ನೀಡಿದೆ. ಈ ಸ್ಮಾರ್ಟ್ ವಾಚ್ ಗೆ ಒಮ್ಮೆ ಚಾರ್ಜ್ ಮಾಡಿ 10 ದಿನಗಳ ವರೆಗೆ ಬಳಸಬಹುದಾಗಿದೆ. Amazfit Bip 5 ಸ್ಮಾರ್ಟ್ ವಾಚ್ 300mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಈ ವಾಚ್ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 7499 ರೂ. ಗಳಲ್ಲಿ ಖರೀದಿಸಬಹುದಾಗಿದೆ.
Amazfit Bip 5 ಸ್ಮಾರ್ಟ್ ವಾಚ್ ವಿಶೇಷತೆ
Amazfit Bip 5 ಸ್ಮಾರ್ಟ್ ವಾಚ್ ನಲ್ಲಿ ಬ್ಲೂಟೂತ್ ಮೂಲಕ ಕರೆ ಮಾಡಲು ಅವಕಾಶವನ್ನು ನೀಡಲಾಗಿದ್ದು, ಸಮಯದ GPS ಟ್ರಾಕಿಂಗ್ ಮತ್ತು ಮಾರ್ಗ ಸಂಚಾರಣೆ ಸೇವೆಯನ್ನು ನೀಡಿದೆ. ಈ ಸ್ಮಾರ್ಟ್ ವಾಚ್ ನಲ್ಲಿ 120 ಕ್ಕೋ ಹೆಚ್ಚು ಸ್ಪೋರ್ಟ್ಸ್ ಮೋಡ್ ಗಳನ್ನೂ ನೀಡಲಾಗಿದೆ. ಸೈಕಲಿಂಗ್, ರನ್ನಿಂಗ್, ವಾಕಿಂಗ್, ಈಜು ಮುಂತಾದ ಕ್ರೀಡೆಗಳ ಬಗ್ಗೆ ಟ್ರ್ಯಾಕ್ ಮಾಡಿಕೊಳ್ಳಬಹುದು.
ಆರೋಗ್ಯ ಮೊನಿಟರ್ ವೈಶಿಷ್ಟ್ಯಗಳಿರುವ ಸ್ಮಾರ್ಟ್ ವಾಚ್ ಮಾರುಕಟ್ಟೆಗೆ ಎಂಟ್ರೀ
ಬ್ರಿಥಿಂಗ್ ಸೆನ್ಸಾರ್, ಹಾರ್ಟ್ ಬೀಟ್ ಟ್ರಾಕರ್, ಬಯೋಟ್ರಾಕರ್ ನಂತಹ ಆರೋಗ್ಯ ಮೊನಿಟರ್ ಅನ್ನು ನೀಡಲಾಗಿದ್ದು ಬ್ಯಾಟರಿ ಸೇವೆರ್ ಆಯ್ಕೆಯ ಮೂಲಕ ಈ ವಾಚ್ ಅನ್ನು 10 ದಿನಗಳ ವರೆಗೆ ಒಂದೇ ಚಾರ್ಜ್ ನಲ್ಲಿ ಬಳಸಬಹುದಾಗಿದೆ. ಇನ್ನು ಈ ನೂತನ Amazfit Bip 5 ಸ್ಮಾರ್ಟ್ ವಾಚ್ ಅಮೆಜಾನ್ ನಲ್ಲಿ ಲಭ್ಯವಿದೆ. ಅಮಾಜೆನ್ ಈ ಸ್ಮಾರ್ಟ್ ವಾಚ್ ಖರೀದಿಗೆ ಒಂದಿಷ್ಟು ಕೊಡುಗೆಯನ್ನು ನೀಡಿದ್ದು ನೀವು ಕಡಿಮೆ ಬೆಲೆ ಸ್ಮಾರ್ಟ್ ವಾಚ್ ಅನ್ನು ಖರೀದಿಸಬಹುದಾಗಿದೆ.