iPhone New: 40 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಹೊಸ ಐಫೋನ್, ಅಮೆಜಾನ್ ನಲ್ಲಿ ಭರ್ಜರಿ ಆಫರ್ ಘೋಷಣೆ.
ಐಫೋನ್ ಮೇಲೆ ಅಮೆಜಾನ್ ನಲ್ಲಿ ಭರ್ಜರಿ ಆಫರ್ ಘೋಷಣೆ.
Amazon Offer On iPhone 13: ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ (iPhone) ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಐಫೋನ್ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ಇತ್ತೀಚಿಗೆ ಐಫೋನ್ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ.
ಇನ್ನು ದೇಶದ ಜನಪ್ರಿಯ ಇ- ಕಾಮರ್ಸ್ ವೆಬ್ ಸೈಟ್ ಆದ Amazon ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ. ಹೌದು ಇದೀಗ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ನಲ್ಲಿ ಐಫೋನ್ 13 ಅನ್ನು 40,000 ರೂ. ಗೂ ಕಡಿಮೆ ದರದಲ್ಲಿ ಖರೀದಿಸಬಹುದು.
Amazon ನಲ್ಲಿ iPhone 13 ಮೇಲೆ ಭರ್ಜರಿ ಆಫರ್
Amazon Great Indian Festival 2023 ಅಕ್ಟೋಬರ್ 8 ರಂದು ಪ್ರಾರಂಭವಾಗುತ್ತದೆ. ಈ ಫೆಸ್ಟಿವಲ್ ಸೇಲ್ ಆರಂಭವಾಗುವ ಮುನ್ನ Amazon ಗ್ರಾಹಕರಿಗೆ ಕೆಲವು ಉತ್ತಮ ಆಫರ್ ಗಳ ಬಗ್ಗೆ ಮಾಹಿತಿ ನೀಡುತ್ತದೆ. Amazon ನಲ್ಲಿ iPhone 13 ಮೇಲೆ ಭರ್ಜರಿ ಆಫರ್ ಘೋಷಣೆಯಾಗಿದೆ. ನೀವು ಐಫೋನ್ ಖರೀದಿ ಮಾಡುವ ಯೋಚನೆಯಲ್ಲಿದ್ದರೆ ಅಮೆಜಾನ್ ನೀಡುವ ಈ ಆಫರ್ ಬಗ್ಗೆ ತಿಳಿದುಕೊಳ್ಳುದು ಉತ್ತಮ.
40 ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿಸಿ iPhone 13
ಇದೀಗ Amazon ನಲ್ಲಿ 40 ಸಾವಿರಕ್ಕೂ ಕಡಿಮೆ ದರದಲ್ಲಿ iPhone 13 ಲಭ್ಯವಾಗುತ್ತಿದೆ. ಆದರೆ ನೀವು ಇದಕ್ಕಾಗಿ ಹಳೆಯ ಫೋನ್ ಅನ್ನು ಎಕ್ಸ್ ಚೇಂಜ್ ಮಾಡಿಕೊಳ್ಳಬೇಕಾಗುತ್ತದೆ. ನೀವು ಎಕ್ಸ್ ಚೇಂಜ್ ಮಾಡಿಕೊಳ್ಳಲು ಬಯಸದಿದ್ದರೆ ಸ್ವಲ್ಪ ಹೆಚ್ಚಿನ ಹಣವನ್ನು ಖರ್ಚು ಮಾಡಿ ಖರೀದಿಸಬೇಕಾಗುತ್ತದೆ.
2021 ರಲ್ಲಿ ಬಿಡುಗಡೆಯಾದ iPhone 13 ಪ್ರಸ್ತುತ 128GB ಸ್ಟೋರೇಜ್ ಮಾಡೆಲ್ ಗೆ ರೂಪಾಯಿ 59 ,900 , 256GB ಮಾಡೆಲ್ ಗೆ 69,900 ರೂಪಾಯಿ ಹಾಗೂ 512GB ಮಾಡೆಲ್ ಗೆ 89,900 ರೂಪಾಯಿ ಇದೆ. ಹಾಗಾಗಿ ನೀವು ಈ ಫೆಸ್ಟಿವಲ್ ಸೇಲ್ ನಲ್ಲಿ iPhone 13 ಖರೀದಿಸಿದರೆ 20 ಸಾವಿರಕ್ಕೂ ಹೆಚ್ಚು ರಿಯಾಯಿತಿಯನ್ನ ಪಡೆಯಬಹುದು.
iPhone 13 ವಿಶೇಷತೆ
iPhone 13 6.1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು ಡ್ಯುಯೆಲ್ ಕ್ಯಾಮರವನ್ನು ಒಳಗೊಂಡಿದೆ. ಫೋನ್ ನಲ್ಲಿ ಪ್ರಾಥಮಿಕ ಕ್ಯಾಮರಾವನ್ನು 12MP ಮತ್ತು ಮುಂಭಾಗದ ಸೆಲ್ಫಿ ಕ್ಯಾಮರಾದಲ್ಲಿ 12MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. A15 ಬಯೋನಿಕ್ ಚಿಪ್ಸೆಟ್ನ ಪ್ರೊಸೆಸರ್ ಅನ್ನು ಪಡೆಯಬಹುದು. ನೀವು ಐಫೋನ್ 13 ಖರೀದಿಸುವ ಯೋಜನೆಯಲ್ಲಿದ್ದರೆ Amezon ನ ಈ ಆಫರ್ ಅನ್ನು ಬಳಸಿಕೊಂಡು ಕೇವಲ 40 ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿಸಬಹುದು.