ಸದ್ಯದ ದಿನಗಳಲ್ಲಿ ಬಹಳ ಟ್ರೆಂಡಿಂಗ್ ನಲ್ಲಿ ಇರುವ ಸಿಮ್ ಗಳಲ್ಲಿ ಜಿಯೋ ಸಿಮ್ ಕೂಡ ಒಂದು ಎಂದು ಹೇಳಬಹುದು. ಭಾರತದಲ್ಲಿ ಉಚಿತ ಇಂಟರ್ನೆಟ್ ಒದಗಿಸಿದ ಸಿಮ್ ಅಂದರೆ ಜಿಯೋ ಸಿಮ್ ಎಂದು ಹೇಳಬಹುದು. ಇತರೆ ಸಿಮ್ ಕಂಪನಿಗಳಿಗೆ ಸಡ್ಡು ಹೊಡೆದು ತನ್ನದೇ ಆದ ಹೊಸ ದಾಖಲೆ ಮತ್ತು ಇತಿಹಾಸವನ್ನ ನಿರ್ಮಾಣದ ಜಿಯೋ ಸಿಮ್ ಅನ್ನು ದೇಶದಲ್ಲಿ ಅತೀ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಮುಕೇಶ್ ಅಂಬಾನಿ ಕಂಪನಿಯ ಸಿಮ್ ಇದಾಗಿದ್ದು ಬಹಳ ಸೇವೆಯನ್ನ ಜನರಿಗೆ ಒದಗಿಸುತ್ತಿದೆ ಎಂದು ಹೇಳಬಹುದು. ಇನ್ನು ಜಿಯೋ ಬರಿ ಸಿಮ್ ಗಳನ್ನ ಮಾತ್ರ ಜಾರಿಗೆ ತರುವುದಲ್ಲದೆ ಒಳ್ಳೆ ಒಳ್ಳೆಯ ಮೊಬೈಲ್ ಗಳನ್ನ ಜಾರಿಗೆ ತಂದಿತು ಎಂದು ಹೇಳಬಹುದು. ಇನ್ನು ದೇಶದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಮೊಬೈಲ್ ಫೋನ್ ಬಿಡುಗಡೆ ಮಾಡಿದ ಕಂಪನಿ ಅಂದರೆ ಜಿಯೋ ಎಂದು ಹೇಳಬಹುದು.
ಇನ್ನು ಈಗ ಜಿಯೋ ಕಂಪನಿ ಜನರಿಗೆ ಇನ್ನೊಂದು ಬಂಪರ್ ಸಿಹಿಸುದ್ದಿ ನೀಡಿದ್ದು ಇದು ಜನರ ಖುಷಿಗೆ ಕಾರಣವಾಗಿದೆ ಎಂದು ಹೇಳಬಹುದು. ದೇಶದಲ್ಲಿ ಅತೀ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಜಿಯೋ ಕಂಪನಿ ಈಗ ಮುಂದಾಗಿದ್ದು ಅದರ ಬೆಲೆಯನ್ನ ಕೇಳಿದರೆ ನಿಮಗೆ ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ಆ ಫೋನ್ ಯಾವುದು ಮತ್ತು ಅದರ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹೌದು ಸ್ನೇಹಿತರೆ ಕಡಿಮೆ ಬೆಲೆಗೆ ಮೊಬೈಲ್ ಡೇಟಾ ನೀಡಿ ದೊಡ್ಡ ಸಂಚಲನ ಸೃಷ್ಠಿ ಮಾಡಿದ ಜಿಯೋ ಕಂಪನಿ ಈಗ ಬಹಳ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಬಿಡುಗಡೆ ಮಾಡಲು ಮುಂದಾಗಿದೆ ಎಂದು ಹೇಳಬಹುದು.
44 ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಖ್ಯಸ್ಥ ಮುಕೇಶ್ ಅಂಬಾನಿಯವರು “ಜಿಯೋ ನೆಕ್ಸ್ಟ್’ ಎಂಬ ಹೆಸರಿನ ಸ್ಮಾರ್ಟ್ ಫೋನ್ ಅನ್ನು ಜಿಯೋ ಮತ್ತು ಗೂಗಲ್ ತಂಡಗಳು ಜಂಟಿಯಾಗಿ ರಚನೆ ಮಾಡಿದ್ದು ಸೆಪ್ಟೆಂಬರ್ 10 ರ ಗಣೇಶ ಹಬ್ಬದ ದಿನ ಮಾರುಕಟ್ಟೆಯಲ್ಲಿ ಆ ಸ್ಮಾರ್ಟ್ ಫೋನ್ ಲಭ್ಯ ಇದೆ ಎಂದು ಹೇಳಿದ್ದಾರೆ. ಭಾರತದ ಜನರು ಕಡಿಮೆ ಬೆಲೆಯ ಫೋನ್ ಗಳನ್ನ ಹೆಚ್ಚಾಗಿ ಖರೀದಿ ಮಾಡುತ್ತಿರುವ ಕಾರಣ ಜಿಯೋ ಕಡಿಮೆ ಬೆಲೆಯ ಸ್ಮಾರ್ಟ್ ಬಿಡುಗಡೆ ಮಾಡಲು ತೀರ್ಮಾನವನ್ನ ಮಾಡಿದೆ ಎಂದು ಹೇಳಬಹುದು. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಇದಾಗಲಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಇದು ಗೂಗಲ್ ಮತ್ತು ಜಿಯೋ ಕಂಪನಿ ಸೇರಿ ತಯಾರು ಮಾಡಿದ ಸ್ಮಾರ್ಟ್ ಫೋನ್ ಆದಕಾರಣ ಇದರ ಬೆಲೆ ಭಾರತದಲ್ಲಿ 5000 ರೂಪಾಯಿಯ ಒಳಗೆ ಆಗಿರುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ ವಾಯ್ಸ್ ಅಸಿಸ್ಟೆಂಟ್, ಪರದೆಯ ಮೇಲಿನ ಪಠ್ಯವನ್ನ ಓದಿ ಹೇಳುವ ಸೌಲಭ್ಯ ಮತ್ತು ಹತ್ತು ಹಲವು ಸೇವೆಗಳು ಇರಲಿದೆ ಮತ್ತು ಗೂಗಲ್ ಜಿಯೋ ಅಪ್ಲಿಕೇಶನ್ ಮಾತ್ರವಲ್ಲದೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಶನ್ ಗಳನ್ನ ಕೂಡ ಈ ಫೋನ್ ನಲ್ಲಿ ಬಳಕೆ ಮಾಡಬಹುದಾಗಿದೆ. ಇನ್ನು ಈ ಫೋನ್ ಕ್ಯಾಮೆರಾ ಹೈ ಕ್ವಾಲಿಟಿ ಆಗಿರಲಿದೆ ಎಂದು ಗೂಗಲ್ ತಿಳಿಸಿದೆ. ನ್ನು ಈ ಫೋನ್ ನಲ್ಲಿ ಯಾವ ಆಂಡ್ರಾಯ್ಡ್ ಆವೃತ್ತಿ ಇರಲಿದೆ ಎಂದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಸ್ನೇಹಿತರೆ ಈ ಸ್ಮಾರ್ಟ್ ಫೋನ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.