Ambareesh: ಅಂದು ಧೋನಿಗೆ ಅಂಬರೀಷ್ ಕೊಟ್ಟ ಹಣ ಎಷ್ಟು…? ಧೋನಿ ಕೈಗೆ ಚೆಕ್ ಕೊಟ್ಟ ಅಂಬರೀಷ್.

ಇದೀಗ ನಟಿ ಸುಮಲತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಅಪರೂಪದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

Ambareesh And M.S Dhoni Photo: ಕನ್ನಡದ ಖ್ಯಾತ ನಟಿ, ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ಆಗಾಗ ರಾಜಕೀಯ ವಿಚಾರವಾಗಿ ಸುದ್ದಿಯಾಗುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಸುಮಲತಾ ಅವರು ಹೆಚ್ಚಿನ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಸುಮಲತಾ ಅಂಬರೀಷ್ ಅವರು 80 ರ ದಶಕದಲ್ಲಿ ನಂಬರ್ ಒನ್ ಹೀರೋಯಿನ್ ಆಗಿದ್ದರು.

ಈಗಲೂ ಕೂಡ ಸಿನಿಮಾಗಳಲ್ಲಿ ಪೋಷಕ ಪಾತ್ರವನು ಅಭಿನಯಿಸುವ ಮೂಲಕ ಕನ್ನಡಿಗರನ್ನು ರಂಜಿಸುತ್ತಿರುತ್ತಾರೆ. ಸಿನಿಮಾದ ಜೊತೆಗೆ ರಾಜಕೀಯದಲ್ಲೂ ನಟಿ ಸಕ್ರಿಯರಾಗಿದ್ದಾರೆ. ಇನ್ನು ನಟಿ ಸುಮಲತಾ ಅವರು ಕನ್ನಡದ ಹಿರಿಯ ನಟ ಅಂಬರೀಷ್ ಅವರ ಪತ್ನಿಯಾಗಿರುವ ಬಗ್ಗೆ ಎಲ್ಲರಿಗು ತಿಳಿದಿರುವ ವಿಚಾರ. ಇದೀಗ ನಟಿ ಸುಮಲತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ.

Ambareesh And M.S Dhoni Photo
Image Credit: TV9kannada

ಅಪರೂಪದ ಫೋಟೋ ಹಂಚಿಕೊಂಡ ನಟಿ ಸುಮಲತಾ
ನಟಿ ಸುಮಲತಾ ಅವರು ನಟ ಅಂಬರೀಷ್ (Ambareesh) ಅವರು ಖ್ಯಾತ ಕ್ರಿಕೆಟಿಗ ಎಮ್. ಎಸ್ ದೋನಿ (M.S Dhoni) ಅವರಿಗೆ ಬಹಳ ಹಿಂದೆ ಚೆಕ್ ವಿತರಿಸಿದ್ದ ಫೋಟೋವನ್ನು ಎಕ್ಸ್ (X) ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಫೋಟೋ ಜೊತೆಗೆ ಸಾಕಷ್ಟು ವಿಚಾರಗಳನ್ನು ಬರೆದುಕೊಂಡಿದ್ದಾರೆ. “2006 ರಲ್ಲಿ ಖ್ಯಾತ ಕ್ರಿಕೆಟಿಗ ಎಂ.ಎಸ್.ಧೋನಿಅವರಿಗೆ KSCA ಕ್ರೀಡಾಂಗಣದಲ್ಲಿ ಅಂಬರೀಷ್ 2 ಲಕ್ಷ ರೂ. ಚೆಕ್ ನೀಡುತ್ತಿದ್ದಾಗ ತೆಗೆದ ಚಿತ್ರವಿದು.

ಧೋನಿ ಈಗ ಜನಪ್ರಿಯರಾಗುತ್ತಿದ್ದಾರೆ, ಮನೆಗೆ ಸಾಕಷ್ಟು ಸಂದರ್ಶಕರು ಬರುತ್ತಿದ್ದಾರೆ, ಆದರೆ ಅವರಿಗೆ ನೀಡಲು ಸಾಕಷ್ಟು ಆಸನಗಳಿಲ್ಲ ಎಂದು ದೋನಿ ಅವರ ತಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದು ದೊಡ್ಡ ಕ್ರೀಡಾ ಮತ್ತು ಕ್ರಿಕೆಟ್ ಅಭಿಮಾನಿಯಾಗಿದ್ದ ಅಂಬರೀಷ್ ಅವರನ್ನು ಸಂಪೂರ್ಣವಾಗಿ ಪ್ರೇರೇಪಿಸಿದೆ” ಎಂದು ಸುಮಲತಾ ಅಂಬರೀಷ್ ಬರೆದುಕೊಂಡಿದ್ದಾರೆ.

Join Nadunudi News WhatsApp Group

ನಾನು ಈ ಫೋಟೋವನ್ನು ಕಳೆದುಕೊಂಡಿದ್ದೆ ಆಂದುಕೊಂಡಿದ್ದೆ. ಇದಕೊಸ್ಕರ ಕೆಲವು ವರ್ಷಗಳಿಂದ ಹುಡುಕಾಡುತ್ತಿದ್ದೆ. ಇಂದು ಇದ್ದಕ್ಕಿದ್ದಂತೆ ಈ ಪೋಟಿ ಸಿಕ್ಕಿದೆ. ತುಂಬಾ ನೆನಪುಗಳು ಮರುಕಳಿಸಿದವು ಎಂದು ಧೋನಿ ಅವರನ್ನು ಟ್ಯಾಗ್ ಮಾಡಿ ನಿಮಗಿದು ನೆನಪಿರುವುದು ಅನುಮಾನ, ಆದ್ರೆ ನಿಮ್ಮ ಪ್ರಯಾಣದ ಕುರಿತು ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

Join Nadunudi News WhatsApp Group