Amendment of 1956: ಯಾವಾಗ ಹೆಣ್ಣು ತಂದೆಯ ಆಸ್ತಿಯಲ್ಲಿ ಪಾಲು ಪಡೆಯಲು ಸಾಧ್ಯವಿಲ್ಲ…? ಎಲ್ಲಾ ಹೆಣ್ಣಿಗೂ ಅನ್ವಯ.

ಈ ಸಮಯದಲ್ಲಿ ಹೆಣ್ಣಿಗೆ ತಂದೆಯ ಆಸ್ತಿಯಲ್ಲಿ ಯಾವುದೇ ಪಾಲು ಸಿಗಲ್ಲ.

Daughter Property Right In India: ಆಸ್ತಿ ಅಂದರೆ ಯಾರಿಗೆ ತಾನೇ ಬೇಡ, ಹೌದು ನಮ್ಮ ದೇಶದಲ್ಲಿ ಆಸ್ತಿ ವಿಭಜನೆಯ ವಿಷಯವಾಗಿ ಸಾಕಷ್ಟು ದೂರುಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ ಎಂದು ಹೇಳಬಹುದು. ಹೌದು ಆಸ್ತಿ ತಕರಾರುಗಳು ನಮ್ಮ ದೇಶದಲ್ಲಿ ಸಾಮಾನ್ಯವಾದ ಸಮಸ್ಯೆಯಾಗಿ ಹೋಗಿದೆ.

ಸದ್ಯ ಆಸ್ತಿ ವಿಭಜನೆಯ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಹೊಸ ಹೊಸ ಕಾನೂನುಗಳು (Indian Law) ಜಾರಿಗೆ ಬರುತ್ತಿದ್ದು ಜನರು ಈ ಎಲ್ಲಾ ಕಾನೂನುಗಳನ್ನ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ನಮ್ಮ ದೇಶದಲ್ಲಿ ಹೆಣ್ಣು ಮತ್ತು ಗಂಡು ಅನ್ನುವ ತಾರತಮ್ಯ ಇಲ್ಲದೆ ಸಮಾನವಾಗಿ ಆಸ್ತಿ ವಿಭಜನೆ ಮಾಡುತ್ತಿದ್ದರೂ ಕೂಡ ಅನೇಕ ತಕರಾರುಗಳು ಕೇಳಿಬರುತ್ತಿದೆ ಎಂದು ಹೇಳಬಹುದು.

Daughter Property Rights
Image Credit: Original Source

ಗಂಡಿನ ಹಾಗೆ ಹೆಣ್ಣಿಗೂ ಸಮನಾದ ಹಕ್ಕಿದೆ
ಹೌದು ನಮ್ಮ ದೇಶದ ಕಾನೂನಿನ ಪ್ರಕಾರ ತಂದೆ ತಾಯಿಯ ಆಸ್ತಿಯಲ್ಲಿ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡಿಗೆ ಎಷ್ಟು ಹಕ್ಕಿದೆಯೋ ಅದೇ ರೀತಿಯಲ್ಲಿ ಹೆಣ್ಣಿಗೂ ಕೂಡ ಸಮನಾದ ಹಕ್ಕಿದೆ ಎಂದು ಹೇಳಬಹುದು. ಎಲ್ಲಾ ಆಸ್ತಿಯಲ್ಲಿ ಹೆಣ್ಣಿಗೆ ಸಮನಾದ ಪಾಲು ಕೊಡಬೇಕು ಎಂದು ನಮ್ಮ ದೇಶದಲ್ಲಿ ಕಾನೂನನ್ನ ಜಾರಿಗೆ ತರಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ದೇಶದಲ್ಲಿ ಈ ಕಾನೂನು ಇದ್ದರೂ ಕೂಡ ಕೆಲವು ಜಾಗದಲ್ಲಿ ಹೆಣ್ಣಿಗೆ ಮೋಸ ಆಗುತ್ತಿದೆ ಎಂದು ಹೇಳಬಹುದು.

1956 ರ ತಿದ್ದುಪಡಿಯಲ್ಲಿ ಹೆಣ್ಣಿಗೆ ಸಮಾನ ಹಕ್ಕು
1956 ತಿದ್ದುಪಡಿಯ ಪ್ರಕಾರ ಹೆಣ್ಣಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮನಾದ ಪಾಲು ಕೊಡಲಾಗಿದೆ ಎಂದು ಹೇಳಬಹುದು. ಈ ತಿದ್ದುಪಡಿಯ ಪ್ರಕಾರ ಮಗನಿಗೆ ಆಸ್ತಿಯಲ್ಲಿ ಎಷ್ಟು ಪಾಲಿದೆಯೋ ಅಷ್ಟೇ ಪಾಲು ಹೆಣ್ಣಿಗೂ ಕೂಡ ಇದೆ. ಹೆಣ್ಣಿಗೆ ಆಗುತ್ತಿರುವ ಮೋಸವನ್ನ ತಡೆಯುವ ಉದ್ದೇಶದಿಂದ ದೇಶದಲ್ಲಿ ಈ ಹೊಸ ಕಾನೂನನ್ನು ಜಾರಿಗೆ ತರಲಾಗಿದ್ದು ಈ ನಿಯಮಗಳ ಅಡಿಯಲ್ಲಿ ಆಸ್ತಿ ವಿಭಜನೆ ಆಗುತ್ತದೆ ಎಂದು ಹೇಳಬಹುದು.

Daughter Property Right In India
Image Credit: Ipleaders

ಈ ಸಮಯದಲ್ಲಿ ಹೆಣ್ಣಿಗೆ ಸಿಗಲ್ಲ ತಂದೆಯ ಆಸ್ತಿಯಲ್ಲಿ ಪಾಲು
ತಂದೆ ಪಿತ್ರಾರ್ಜಿತವಾದ ಆಸ್ತಿಯನ್ನ ಬಿಟ್ಟು ಸ್ವಂತ ಹಣದಲ್ಲಿ ಆಸ್ತಿಯನ್ನು ಖರೀದಿ ಮಾಡಿದ್ದರೆ ಆತ ತಾನು ಖರೀದಿ ಮಾಡಿದ ಆಸ್ತಿಯನ್ನು ತನ್ನ ಜೀವಿತ ಅವಧಿಯಲ್ಲಿ ಯಾರಿಗೆ ಬೇಕಾದರೂ ಮಾರಬಹುದು ಮತ್ತು ಅದನ್ನ ಕೇಳುವ ಹಕ್ಕು ಯಾರಿಗೂ ಇರುವುದಿಲ್ಲ. ಇದೆ ಸಮಯದಲ್ಲಿ ತನ್ನ ಆಸ್ತಿಯಲ್ಲಿ ಮಗಳಿಗೆ ಪಾಲು ನೀಡಲು ತಂದೆ ನಿರಾಕರಿಸಿದರೆ ಅದನ್ನ ಪ್ರಶ್ನೆ ಮಾಡುವ ಹಕ್ಕು ಹೆಣ್ಣಿಗೆ ಇರುವುದಿಲ್ಲ. ಸ್ವಂತ ಆಸ್ತಿ ಅಲ್ಲದೆ ಪಿತ್ರಾರ್ಜಿತವಾದ ಆಸ್ತಿಯಾಗಿದ್ದರೆ ಹೆಣ್ಣಿಗೆ ಪ್ರಶ್ನೆ ಮಾಡುವ ಹಕ್ಕು ಇರುತ್ತದೆ.

Join Nadunudi News WhatsApp Group

ಮಗಳು ಮದುವೆಯಾದ ಸಮಯದಲ್ಲಿ ಕಾನೂನು ಏನು ಹೇಳುತ್ತದೆ
ಕೆಲವು ಕಡೆಗಳಲ್ಲಿ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನುವ ಮಾತಿದೆ, ಆದರೆ ಇದು ಕಾನೂನಿಗೆ ಸೀಮಿತವಾಗಿಲ್ಲ ಎಂದು ಹೇಳಬಹುದು. ಮಗಳನ್ನ ಮದುವೆ ಮಾಡಿಕೊಟ್ಟ ಅವಳಿಗೆ ಆಸ್ತಿಯಲ್ಲಿ ಪಾಲು ಇಲ್ಲ ಎಂದು ಹೇಳುವಂತಿಲ್ಲ. ಮದುವೆ ಆಗಲಿ ಅಥವಾ ಆಗದೆ ಇರಲಿ ಆಕೆಗೆ ತಂದೆಯ ಆಸ್ತಿಯಲ್ಲಿ ಸಮನಾದ ಪಾಲಿದೆ ಎಂದು ಭಾರತದ ಕಾನೂನು ಹೇಳುತ್ತದೆ. ಹೆಣ್ಣು ಮೇಲಿನ ದೌರ್ಜನ್ಯವನ್ನ ತಡೆಯುವ ಉದ್ದೇಶದಿಂದ ಭಾರತದಲ್ಲಿ ಅನೇಕ ತಿದ್ದುಪಡಿಗಳನ್ನ ಜಾರಿಗೆ ತರಲಾಗಿದ್ದು ಹೆಣ್ಣು ಕಾನೂನನ್ನು ತಿಳಿದುಕೊಳ್ಳುವುದು ಅತೀ ಮುಖ್ಯ ಕೂಡ ಆಗಿರುತ್ತದೆ.

Join Nadunudi News WhatsApp Group