Amitabh Injured: ಬಾಲಿವುಡ್ ನಟ ಅಮಿತಾಬ್ ಗೆ ಅಪಘಾತ, ಭಯಪಡುವ ಅಗತ್ಯ ಇಲ್ಲ ಅಂದ ಚಿತ್ರತಂಡ.

Actor Amitabh Bachchan Injury: ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ (Amitabh Bachchan) ಇದೀಗ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ಇದೀಗ ಅಮಿತಾಬ್ ಅವರ ಹೊಸ ಚಿತ್ರದ ಚಿತ್ರೀಕರಣದ ವೇಳೆ ಅವಘಡ ನಡೆದಿದೆ. ಅಮಿತಾಬ್ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಅಮಿತಾಬ್ ಅಭಿಮಾನಿಗಳು ಆತಂಕ ಪಡುತ್ತಿದ್ದಾರೆ.

Actor Amitabh Bachchan got injured during shooting.
Image Credit: instagram

ಬಾಲಿವುಡ್ ನಟ ಅಮಿತಾಬ್ ಗೆ ಶೂಟಿಂಗ್ ವೇಳೆ ಗಾಯ
ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಇದೀಗ ತಮ್ಮ ಹೊಸ ಚಿತ್ರ ಪ್ರಾಜೆಕ್ಟ್ ಕೆ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದರು. ಹೈದರಾಬಾದ್ ನಲ್ಲಿ ಪ್ರಾಜೆಕ್ಟ್ ಕೆ ಶೂಟಿಂಗ್ ಮಾಡುತ್ತಿದ್ದ ವೇಳೆ ಬಾಲಿವುಡ್ ನ ಬಿಗ್ ಬಿ ಗೆ ಅವಘಡ ಸಂಭವಿಸಿದೆ. ಚಿತ್ರೀಕರಣದ ವೇಳೆ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದಾರೆ.

Actor Amitabh Bachchan got injured while shooting an action scene
Image Credit: instagram

ನಟ ತಮ್ಮ ಬ್ಲಾಗ್ ನಲ್ಲಿ ಆರೋಗ್ಯ ಸ್ಥಿತಿಯ ಬಗ್ಗೆ ಬರೆದುಕೊಂಡಿದ್ದಾರೆ. ತಾವು ಸದ್ಯ ಮುಂಬೈ ನಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ನಟ ಆಕ್ಷನ್ ಸೀನ್ ಶೂಟಿಂಗ್ ಮಾಡುವಾಗ ಅವರ ಪಕ್ಕೆಲುಬಿಗೆ ಗಾಯವಾಗಿದೆ. ನಟ ಗಾಯದಿಂದ ರಿಕವರಿಯಾಗಲು ಸ್ವಲ್ಪ ಸಮಯ ಬೇಕಾಗಿರುವುದರಿಂದ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ನಟ ತಿಳಿಸಿದ್ದಾರೆ.

Actor Amitabh Bachchan got injured during shooting and the doctor advised him to rest
Image Credit: instagram

ಅಮಿತಾಬ್ ಬಚ್ಚನ್ ಅವರು ವೈದ್ಯರ ಬಳಿ ಹೋಗಿದ್ದಾರೆ. ಸಿಟಿ ಸ್ಕಾನ್ ಕೂಡ ಮಾಡಲಾಗಿದೆ. ಎಐಜಿ ಹಾಸ್ಪಿಟಲ್ ಹೈದರಾಬಾದ್ ನಲ್ಲಿ ಚಿಕಿತ್ಸೆ ಪಡೆದು ಮುಂಬೈಗೆ ಬಂದಿದ್ದಾರೆ. ಕೆಲವು ವಾರಗಳ ಕಾಲ ರೆಸ್ಟ್ ತೆಗೆದುಕೊಳ್ಳಬೇಕಾಗಿ ವೈದ್ಯರು ಸೂಚನೆ ಕೊಟ್ಟಿದ್ದಾರೆ.

Join Nadunudi News WhatsApp Group

ಉಸಿರಾಡುವಾಗ ಮತ್ತು ಮೋವ್ಮೆಂಟ್ ಮಾಡುವಾಗ ಸ್ವಲ್ಪ ನೋವಾಗುತ್ತದೆ, ನೋವು ನಿವಾರಣೆಗೆ ಔಷದಿ ತೆಗೆದುಕೊಳ್ಳುತ್ತಿರುವುದಾಗಿ ನಟ ತಿಳಿಸಿದ್ದಾರೆ. ಇಂದು ಸಂಜೆ ಜೆಲ್ಸಾ ಗೆಟ್ ನಲ್ಲಿ ನನ್ನ ಹಿತೈಷಿಗಳನ್ನು ಭೇಟಿ ಮಾಡಲು ಸಾದ್ಯವಾಗುದಿಲ್ಲ ಎಂದು ತಮ್ಮ ಬ್ಲಾಗ್ ನಲ್ಲಿ ನಟ ತಿಳಿಸಿದ್ದಾರೆ.

Join Nadunudi News WhatsApp Group