Amitabh Bachchan: ನಟ ಅಮಿತಾಭ್ ಬಚ್ಚನ್ ಅವರ ಒಟ್ಟು ಆಸ್ತಿ ಎಷ್ಟು…? ಅಮಿತಾಭ್ ಬಚ್ಚನ್ ಅವರ ಆಸ್ತಿಯ ವಾರಸುದಾರ ಯಾರು ಗೊತ್ತಾ…?
ಶತಕೋಟಿ ಆಸ್ತಿ ಒಡೆಯ ನಟ ಅಮಿತಾಬ್ ಬಚ್ಚನ್ ತನ್ನೆಲ್ಲಾ ಆಸ್ತಿ ಯಾರ ಹೆಸರಿಗೆ ಬರೆದಿದ್ದಾರೆ ಗೊತ್ತಾ?
Amitabh Bachchan Net Worth: ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ Amitabh Bachchan) ಅವರು ನೂರಾರು ಸಿನಿಮಾಗಳಲ್ಲಿ ನಟಿಸಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ಅವರು ತಮ್ಮ ಜೀವನದ 80ನೇ ಮೈಲಿಗಲ್ಲನ್ನು ದಾಟಿದ್ದಾರೆ. ಅಮಿತಾಬ್ ಬಚ್ಚನ್ ಅವರನ್ನು , ಆಂಗ್ರಿ ಯಂಗ್ ಮ್ಯಾನ್ ಮತ್ತು ಬಾಲಿವುಡ್ ಶಾಹೆನ್’ ಶಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಅಮಿತಾಭ್ ಬಚ್ಚನ್ ಅವರ ಪೂರ್ಣ ಹೆಸರು ಅಮಿತಾಬ್ ಹರಿವಂಶ ರೈ ಶ್ರೀವಾಸ್ತವ ಬಚ್ಚನ್. ಒಂದು ಕಾಲದಲ್ಲಿ 500 ರೂಪಾಯಿ ಆದಾಯ ಪಡೆಯುತ್ತಿದ್ದ ಬಚ್ಚನ್, ಇಂದು ಶತಕೋಟಿ ಮೌಲ್ಯದ ಸಂಪತ್ತಿನ ಒಡೆಯನಾಗಿದ್ದಾರೆ.ಐದು ದಶಕಗಳಿಗೂ ಹೆಚ್ಚು ಕಾಲ ಜಗತ್ತಿನಾದ್ಯಂತ ಸಿನಿಮಾ ತೆರೆಗಳ ಜೊತೆಗೆ ಜನರ ಹೃದಯವನ್ನೂ ಆಳುತ್ತಿರುವ ಅಮಿತಾಬ್ ಬಚ್ಚನ್ ತನ್ನೆಲ್ಲಾ ಆಸ್ತಿಗೆ ವಾರಸುದಾರರನ್ನು ಘೋಷಿಸಿದ್ದಾರಂತೆ.
ಕೋಟಿ ಕೋಟಿ ಹಣದ ಒಡೆಯ ನಟ ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್ 80 ರ ಹರೆಯದಲ್ಲೂ ಕೆಲಸ ಮಾಡುತ್ತಿರುವ ರೀತಿ, ಒಂದರ ಹಿಂದೆ ಒಂದರಂತೆ ಚಿತ್ರಗಳಿಗೆ ಸಹಿ ಹಾಕುತ್ತಿರುವುದು ನಿಜಕ್ಕೂ ಸ್ಪೂರ್ತಿದಾಯಕ. 2021 ರಲ್ಲಿ ಅಮಿತಾಬ್ ಅವರ ‘ಬ್ರಹ್ಮಾಸ್ತ್ರ ಭಾಗ 1’, ‘ಚುಪ್: ರಿವೆಂಜ್ ಆಫ್ ದಿ ಆರ್ಟಿಸ್ಟ್’ ಮತ್ತು ‘ಗುಡ್ ಬೈ’ ಚಿತ್ರಗಳು ಬಿಡುಗಡೆಯಾಗಿವೆ. ಈ ವಯಸ್ಸಿನಲ್ಲೂ ಅಮಿತಾಭ್ ಆಸ್ತಿಯಲ್ಲಿ ಸಾಕಷ್ಟು ಹೂಡಿಕೆ ಮಾಡುತ್ತಿದ್ದಾರೆ.
2021 ರಲ್ಲಿಯೇ, ಅಮಿತಾಬ್ ಬಚ್ಚನ್ 31 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಿದರು. ಸೆಪ್ಟೆಂಬರ್ 2022 ರಲ್ಲಿ 12 ಸಾವಿರ ಚದರ ಅಡಿ ವಿಸ್ತೀರ್ಣದ ಫೋರ್ ಬಂಗಲೆಯ ಪಾರ್ಥೆನಾನ್ ಕಟ್ಟಡದ 31 ನೇ ಮಹಡಿಯಲ್ಲಿರುವ ಮನೆಯನ್ನು ಅಮಿತಾಬ್ ಬಚ್ಚನ್ ಖರೀದಿಸಿದ್ದಾರೆ. ಅಮಿತಾಬ್ ಬಚ್ಚನ್ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ‘ಜಲ್ಸಾ’ದಲ್ಲಿ ವಾಸಿಸುತ್ತಿದ್ದಾರೆ. ಅವರು ಕೋಟ್ಯಂತರ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿದ್ದಾರೆ.
ಕೋಟಿ ಸಂಭಾವನೆ ಪಡೆಯುವ ನಟ
ಕಳೆದ 53 ವರ್ಷಗಳಲ್ಲಿ ಅಮಿತಾಬ್ ಬಚ್ಚನ್ ಅವರ ಚಿತ್ರಗಳ ಗಳಿಕೆಯಲ್ಲಿ ಭಾರಿ ಏರಿಕೆಯಾಗಿದೆ. ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ 70-80ರ ದಶಕದಲ್ಲಿ ಅಮಿತಾಭ್ ಚಿತ್ರವೊಂದಕ್ಕೆ 50 ಸಾವಿರದಿಂದ 20 ಲಕ್ಷ ರೂ. ಪಡೆಯುತ್ತಿದ್ದರು. ಅಂದರೆ ಇಂದಿನ ಲೆಕ್ಕಾಚಾರದಲ್ಲಿ ನೋಡುವುದಾದರೆ ಪ್ರತಿ ಚಿತ್ರಕ್ಕೆ 5-7 ಕೋಟಿ ರೂ. ವರದಿಗಳ ಪ್ರಕಾರ, ಅಮಿತಾಬ್ ಬಚ್ಚನ್ ‘ಆನಂದ್’ ಮತ್ತು ‘ಚುಪ್ಕೆ ಚುಪ್ಕೆ’ ಚಿತ್ರಗಳಿಗೆ 50 ಸಾವಿರ ರೂ. ಪಡೆದಿದ್ದರೆ.
‘ಡಾನ್’ ಚಿತ್ರಕ್ಕೆ 2.5 ಲಕ್ಷ ಹಾಗೂ ‘ಮರ್ದ್’ ಮತ್ತು ‘ಕೂಲಿ’ ಚಿತ್ರಕ್ಕೆ 8 ರಿಂದ 10 ಲಕ್ಷ ಚಾರ್ಜ್ ಮಾಡಿದ್ದರು. ಆ ಬಳಿಕ ಕೊಂಚ ಏರಿಕೆ ಕಂಡ ಅಮಿತಾಬ್ ಬಚ್ಚನ್ ನಟನಾ ಶುಲ್ಕಾ, ‘ಖುದಾ ಗವಾ’ ಚಿತ್ರಕ್ಕೆ 30 ಲಕ್ಷ, ‘ಪಿಂಕ್’ ಗೆ 8 ಕೋಟಿ, ‘ಪಾ’ ಚಿತ್ರಕ್ಕೆ 4 ಕೋಟಿ ಪಡೆದಿದ್ದಾರೆ. ಆದರೆ ಅಮಿತಾಬ್ ಬಚ್ಚನ್ ಒಂದು ರೂಪಾಯಿಯೂ ತೆಗೆದುಕೊಳ್ಳದೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ನಟ ಅಮಿತಾಬ್ ಬಚ್ಚನ್ ಅವರ ನಿವ್ವಳ ಮೌಲ್ಯ
ಅಮಿತಾಬ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್ಪತಿ’ ಪ್ರತಿ ಸೀಸನ್‌ಗೆ ಪ್ರತಿ ಸಂಚಿಕೆಗೆ 4-5 ಕೋಟಿ ರೂ. ಪಡೆಯುತ್ತಾರೆ. ವರದಿಗಳ ಪ್ರಕಾರ, ಆರಂಭಿಕ ಸೀಸನ್’ನಲ್ಲಿ, ಅಮಿತಾಬ್ ಅವರ ಪ್ರತಿ ಸಂಚಿಕೆಗೆ 1 ರಿಂದ 1.5 ಕೋಟಿ ರೂ. ಪಡೆಯುತ್ತಿದ್ದರು. ಕ್ಯಾಕ್ನಾಲೆಡ್ಜ್ ವರದಿಯ ಪ್ರಕಾರ, 2022 ರಲ್ಲಿ ಅಮಿತಾಬ್ ಬಚ್ಚನ್ ಅವರ ನಿವ್ವಳ ಮೌಲ್ಯ 3,190 ಕೋಟಿ ರೂ. ವಾರ್ಷಿಕ 60 ಕೋಟಿ ರೂ.ವರೆಗೆ ಗಳಿಸುತ್ತಾರೆ.
ನಟ ಅಮಿತಾಬ್ ಬಚ್ಚನ್ ಅವರ ಬಂಗಲೆ ಹಾಗು ಕಾರು ಕಲೆಕ್ಷನ್
ಅಮಿತಾಬ್ ಬಚ್ಚನ್ ಜುಹುದಲ್ಲಿನ ತನ್ನ ಬಂಗಲೆ ‘ಜಲ್ಸಾ’ ಬಳಿಯೇ ಮತ್ತೊಂದು ಬಂಗಲೆಯನ್ನು ಖರೀದಿಸಿದ್ದರು, ಅದರ ಬೆಲೆ ಬರೋಬ್ಬರಿ 50 ಕೋಟಿ ರೂ. ಆಗಿದೆ. ವರದಿಗಳ ಪ್ರಕಾರ, ಪ್ರಸ್ತುತ ಅಮಿತಾಬ್ ಬಚ್ಚನ್ ಐದು ಬಂಗಲೆಗಳನ್ನು ಹೊಂದಿದ್ದಾರೆ, ಅವುಗಳಲ್ಲಿ ಪ್ರತೀಕ್ಷಾ, ಜಲ್ಸಾ, ಜನಕ್ ಮತ್ತು ವತ್ಸಾ ಸೇರಿವೆ. ಇದಲ್ಲದೇ ಅಮಿತಾಭ್’ಗೆ ಅಲಹಾಬಾದ್’ ನಲ್ಲಿ ಪೂರ್ವಜರ ಮನೆಯೂ ಇದೆ.
ಅಮಿತಾಬ್ ಬಚ್ಚನ್ ಇಂದು ಬಾಲಿವುಡ್’ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಅವರು ಲೆಕ್ಸಸ್, ರೋಲ್ಸ್ ರಾಯ್ಸ್, ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್’ನಂತಹ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಬ್ರಾಂಡ್’ಗಳ ಎಂಡಾರ್ಸ್‌ಮೆಂಟ್’ಗಳಿಂದಲೂ ಅಮಿತಾಬ್ ಕೋಟಿಗಟ್ಟಲೆ ಗಳಿಸುತ್ತಾರೆ. ವರದಿಗಳ ಪ್ರಕಾರ ಅವರು ಜಾಹೀರಾತಿಗೆ 5 ಕೋಟಿ ರೂ. ಪಡೆಯುತ್ತಾರೆ. ಅಮಿತಾಬ್ ಬಚ್ಚನ್ ಕೂಡ ರಿಯಲ್ ಎಸ್ಟೇಟ್ ನಲ್ಲಿ ಸಾಕಷ್ಟು ಹೂಡಿಕೆ ಮಾಡುತ್ತಾರೆ. ಕೆಲವು US ಟೆಕ್ ಕಂಪನಿಗಳ ಹೊರತಾಗಿ, ಅವರು ಕ್ಲೌಡ್ ಕಂಪ್ಯೂಟಿಂಗ್’ನಲ್ಲೂ ವ್ಯವಹರಿಸಿದ್ದಾರೆ.
ಆಸ್ತಿಯನ್ನು ಸಮಾನ ಹಂಚಿದ ನಟ ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್ ಅವರು ತಮ್ಮ ಆಸ್ತಿಯಲ್ಲಿ ಮಗ ಅಭಿಷೇಕ್ ಮತ್ತು ಮಗಳು ಶ್ವೇತಾಗೆ ಸಮಾನ ಪಾಲು ನೀಡಲಿದ್ದಾರೆ. ಮಾಧ್ಯಮ ವರದಿಯ ಪ್ರಕಾರ, ಅಮಿತಾಬ್ ಬಚ್ಚನ್ ಅವರು ತಮ್ಮ ಆಸ್ತಿ ಹಂಚಿಕೆಯ ಉಯಿಲನ್ನು ಬಹಿರಂಗಪಡಿಸಿದ್ದು, ಇದರ ಮೌಲ್ಯ ಸುಮಾರು 3,000 ಕೋಟಿ ರೂಗೂ ಹೆಚ್ಚಿದೆ. ತಮ್ಮ ಇಬ್ಬರೂ ಮಕ್ಕಳಿಗೆ ಆಸ್ತಿಯನ್ನು ಸಮಾನವಾಗಿ ಹಂಚಿದ್ದಾರೆ ಎನ್ನಲಾಗುತ್ತಿದೆ. ಅಮಿತಾಬ್ ಬಚ್ಚನ್ ಅವರು ಒಬ್ಬ ಉತ್ತಮ ನಟನಾಗಿದ್ದು, ಇಂದಿಗೂ ಕೂಡ ತನ್ನ ಅಭಿನಯದ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ.