Amitabh Bachchan: ಅರೆಸ್ಟ್ ಆದ ಅಮಿತಾಬ್ ಬಚ್ಚನ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅಮಿತಾಬ್ ಪೋಸ್ಟ್.
ನಾನು ಅರೆಸ್ಟ್ ಆದೆ ಎಂದು ಪೋಸ್ಟ್ ಮಾಡಿದ ಅಮಿತಾಭ್ ಬಚ್ಚನ್, ವೈರಲ್ ಆಗಿದೆ ಅಮಿತಾಭ್ ಬಚ್ಚನ್ ಪೋಸ್ಟ್.
Amitabh Bachchan Posted I Got Arrested: ಖ್ಯಾತ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಇದೀಗ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ಹೆಲ್ಮೆಟ್ ಧರಿಸದೇ ಬೈಕ್ ಹಿಂದೆ ಕೂತು ಸವಾರಿ ಮಾಡಿ ಟ್ರೊಲ್ ಆಗಿದ್ದ ಅಮಿತಾಭ್ ಬಚ್ಚನ್ ಇದೀಗ ವ್ಯಾನ್ ಸಮೇತ ಮತ್ತೊಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಾಕಷ್ಟು ಸುದ್ದಿ ಆಗುತ್ತಿದೆ.
ಪೊಲೀಸ್ ವ್ಯಾನ್ ಜೊತೆ ನಿಂತ ಫೋಟೋ ಹಂಚಿಕೊಂಡ ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್ ಹಂಚಿಕೊಂಡ ಫೋಟೋಗೆ ಅರೆಸ್ಟ್ ಎಂದು ಬರೆದಿದ್ದಾರೆ. ಈ ರೀತಿ ಬರೆದುಕೊಂಡಿದ್ದು ಅಮಿತಾಭ್ ಅಭಿಮಾನಿಗಳಿಗೆ ಶಾಕ್ ಆಗಿದೆ. ಜೊತೆಗೆ ಇದೇನಾದರೂ ಗಿಮಿಕ್ ಇರಬಹುದಾ ಎನ್ನುವ ಅನುಮಾನವೂ ಸಹ ಹುಟ್ಟು ಹಾಕಿದೆ.
ಫೋಟೋ ಹಂಚಿಕೊಂಡು ಅರೆಸ್ಟ್ ಎಂದು ಬರೆದ ಅಮಿತಾಭ್ ಬಚ್ಚನ್
ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ ವಿಚಾರಕ್ಕೆ ಸಂಬಂದ್ಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದ ಬಿಗ್ ಬಾಸ್ ಅದು ರಸ್ತೆ ಮೇಲೆ ಸವಾರಿ ಮಾಡಿದ ಫೋಟೋ ಅಲ್ಲ, ಶೂಟಿಂಗ್ ಸಂದರ್ಭದ್ದು ಎಂದು ಹೇಳಿಕೆ ನೀಡಿದ್ದರು. ರಸ್ತೆ ನಿಯಮವನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಿಲ್ಲ ಎಂದು ಹೇಳಿಕೆ ನೀಡಿದ್ದರು.
ಆದರೂ, ಪೊಲೀಸ್ ವ್ಯಾನ್ ಜೊತೆ ನಿಂತು ಫೋಟೋ ತಗೆಸಿಕೊಂಡು ಅರೆಸ್ಟ್ ಎಂದು ಬರೆದದ್ದು ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ. ಅಮಿತಾಭ್ ಬಚ್ಚನ್ ಅಭಿಮಾನಿಗಳು ಈ ಫೋಟೋ ನೋಡಿ ಇದು ಶೂಟಿಂಗ್ ಇರಬಹುದಾ ಎಂದು ಕಾಮೆಂಟ್ ಮಾಡಿದ್ದಾರೆ.
ಅಮಿತಾಭ್ ಬಚ್ಚನ್ ಕೋಟ್ಯಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಎಲ್ಲ ಅಭಿಮಾನಿಗಳು ಸಹ ಈ ಫೋಟೋ ನೋಡಿ ಅಚ್ಚರಿ ಪಟ್ಟು ಕಮೆಂಟ್ ಮಾಡುತ್ತಿದ್ದಾರೆ.