Kabzaa Hindi Trailer: ಕನ್ನಡಿಗರ ಬೇಸರಕ್ಕೆ ಕಾರಣರಾದ ನಟ ಅಮಿತಾಬ್ ಬಚ್ಚನ್, ವೈರಲ್ ಆಗಿದೆ ಕಬ್ಜ ಟ್ರೈಲರ್.

Amitabh Bachchan Launch Kabzaa Hindi Trailer: ಸಿನಿಪ್ರಿಯರ ಬಹುನಿರೀಕ್ಷಿತ ಕಬ್ಜ (Kabzaa) ಚಿತ್ರದ ಟ್ರೈಲರ್ (Kabza Trailer) ನಿನ್ನೆ ಬಿಡುಗಡೆಗೊಂಡಿದೆ. ಕಬ್ಜ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಪ್ರಿಯರಲಿ ಕಬ್ಜ ಚಿತ್ರದ ಮೇಲಿನ ನಿರೀಕ್ಷೆ ಇದೀಗ ಹೆಚ್ಚಾಗಿದೆ.

ಬಾಲಿವುಡ್ ನಟ ಅಮಿತಾಬ್ ಬಚ್ಚನ್ (Amitabh Bachchan) ಕಬ್ಜ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು ಕಬ್ಜ ಚಿತ್ರ ತಂಡಕ್ಕೆ ಅಮಿತಾಬ್ ಸಾಥ್ ನೀಡಿದ್ದಾರೆ.

Actor Amitabh Bachchan released the Hindi trailer of kabzaa
Image Credit: instagram

ಕಬ್ಜ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಅಮಿತಾಬ್ ಬಚ್ಚನ್
ಆರ್. ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ ಕಬ್ಜ ಚಿತ್ರದ ಝಲಕ್ ಬಿಡುಗಡೆ ಮಾಡಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಕಬ್ಜ ಚಿತ್ರದ ಟ್ರೇಲರ್ ಅನ್ನು ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ಬಿಡುಗಡೆ ಮಾಡಿದ್ದು ಚಿತ್ರತಂಡಕ್ಕೆ ಅಮಿತಾಬ್ ಶುಭ ಹಾರೈಸಿದ್ದಾರೆ.

ನಟ ಅಮೋತಾಬ್ ಬಚ್ಚನ್ ಅವರು ತಡವಾಗಿ ಹಿಂದಿ ಟ್ರೈಲರ್ ಬಿಡುಗಡೆ ಮಾಡಿದ ಯುಟ್ಯೂಬ್ ನಲ್ಲಿ ಕಬ್ಜ ಚಿತ್ರದ ಟ್ರೈಲರ್ ಬಹಳ ತಡವಾಗಿ ಬಿಡುಗಡೆ ಆಯಿತು ಎಂದು ಕನ್ನಡಿಗರು ನಟ ಅಮಿತಾಬ್ ಬಚ್ಚನ್ ಮೇಲೆ ಬೇಸರವನ್ನ ಹೊರಹಾಕಿದ್ದಾರೆ.

The trailer of kabzaa has gone viral on YouTube
Image Credit: instagram

ಕಬ್ಜ ಚಿತ್ರದ ಟ್ರೈಲರ್ ಹೇಗಿದೆ
ಕಬ್ಜ ಚಿತ್ರದಲ್ಲಿ ಬ್ರಿಟಿಷ್ ಕಾಲದ ಕಥೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯದ ನಂತರದ ಕಥೆ ಇರುವ ಸುಳಿವನ್ನು ಟ್ರೈಲರ್ ನೀಡಿದೆ. ದೇಶ ಪ್ರೇಮ, ವ್ಯವಸ್ಥೆಯ ವಿರುದ್ಧ ಹೋರಾಟ, ಪಾತಕ ಲೋಕ, ತಾಯಿ ಸೆಂಟಿಮೆಂಟ್ , ಬ್ರದರ್ ಸೆಂಟಿಮೆಂಟ್ ಎಲ್ಲವನ್ನು ಕಬ್ಜದಲ್ಲಿ ಆರ್. ಚಂದ್ರು ತೋರಿಸಿದ್ದಾರೆ.

Join Nadunudi News WhatsApp Group

The trailer of kabzaa movie has been released on YouTube and people have appreciated the trailer of the movie. Hindi trailer of kabzaa released by famous Hindi actor Amitan Bachchan.
Image Credit: instagram

ಪೊಲೀಸ್ ಡ್ರೆಸ್ ನಲ್ಲಿ ರಿಯಲ್ ಸ್ಟಾರ್

ಟ್ರೈಲರ್ ನಲ್ಲಿ ಉಪೇಂದ್ರ ಪೊಲೀಸ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಕಬ್ಜ ಚಿತ್ರದ ಪೋಸ್ಟರ್, ಟೀಸರ್ ನಲ್ಲಿ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮಚ್ಚು ಹಿಡಿದು ವೈರಿಗಳ ರುಂಡವನ್ನು ಚೆಂಡಾಡುತ್ತಾರೆ.

ಇನ್ನು ಕಿಚ್ಚ ಸುದೀಪ್ ಕೂಡ ಪೊಲೀಸ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನ ಆರಂಭದಲ್ಲಿ ವ್ಯಕ್ತಿಯೊಬ್ಬ ಗನ್  ಹಿಡಿದು ನಡೆಯುವ  ದ್ರಶ್ಯವಿದೆ. ಆ ನಡಿಗೆ ನೋಡಿದರೆ ಶಿವಣ್ಣ ಇರಬಹುದು ಎಂದು ನೋಡುಗರು ಊಹಿಸಿದ್ದಾರೆ. ಆದರೆ ಟ್ರೈಲರ್ ನಲ್ಲಿ ಶಿವಣ್ಣನ ಮುಖ ಕಾಣಿಸಲಿಲ್ಲ.

Join Nadunudi News WhatsApp Group