AMO EV: 100 Km ಮೈಲೇಜ್ ಕೊಡುವ ಇನ್ನೊಂದು Ev ಸ್ಕೂಟರ್ ಅಗ್ಗದ ಬೆಲೆ, ದಸರಾ ಹಬ್ಬದ ಭರ್ಜರಿ ಬುಕಿಂಗ್.

AMO ಕಂಪನಿ ಬಜೆಟ್ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.

AMO Jaunty Pro Electric Scooter: ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳ ಅನೇಕ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಾವು ನೋಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ತೈಲಗಳ ಬೆಲೆ ಏರಿಕೆಯಿಂದ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ AMO ಕಂಪನಿ ಬಜೆಟ್ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

AMO Jaunty Pro Electric Scooter
Image Credit: Timesnownews

AMO Jaunty Pro Electric Scooter Mileage
ಬಜೆಟ್ ವಿಭಾಗದ ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಸ್ಕೂಟರ್ ಅನ್ನು ಸಂಪೂರ್ಣವಾಗಿ ವಿನ್ಯಾಸಗೊಳಿಸಿದೆ. AMO Jaunty Pro Electric Scooter ಸಂಪೂರ್ಣ ಚಾರ್ಜ್ ನಲ್ಲಿ 100 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹಾಗೆ ಈ ಸ್ಕೂಟರ್ ಅನ್ನು ಗಂಟೆಗೆ 25 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದಾಗಿದೆ.

AMO Jaunty Pro Electric Battery Capacity
AMO Jaunty Pro ನಲ್ಲಿ 2.4 Kwh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. 249 ವ್ಯಾಟ್ ಶಕ್ತಿಯೊಂದಿಗೆ ಬ್ರಷ್‌ ಲೆಸ್ DC ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಈ ಮೋಟಾರ್ ಹೆಚ್ಚು ಶಕ್ತಿ ಮತ್ತು ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟರಿ ಪ್ಯಾಕ್ ಅನ್ನು 6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

AMO Jaunty Pro Electric Scooter Mileage
Image Credit: Bikedekho

AMO Jaunty Pro Electric Scooter Feature
AMO Jaunty Pro Electric Scooter ನಲ್ಲಿ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಸ್ಪೀಡ್ ಕಂಟ್ರೋಲ್ ಸ್ವಿಚ್, ಡಿಜಿಟಲ್ ಇನ್ಫೋಟೈನೆಮೆಂಟ್ ಸಿಸ್ಟಮ್, LED ಹೆಡ್‌ಲೈಟ್, DRL ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group