ಕೊರೋನಾ ಆತಂಕದ ನಡುವೆ ಬಂತು ಶಾಕಿಂಗ್ ಸುದ್ದಿ, ದೇಶದಲ್ಲಿ ಕಾಣಿಸಿಕೊಂಡಿದೆ ಔಷಧವೇ ಇಲ್ಲದ ಸೋಂಕು, ಸಾಯುವ ಸಾಧ್ಯತೆ ಹೆಚ್ಚು.
ಕರೋನ ಮಹಾಮಾರಿಯ ಸೋಂಕಿನಿಂದ ಚೇತರಿಸಿಕೊಳ್ಳುವ ಮುನ್ನವೇ ದೇಶದಲ್ಲಿ ಹೊಸಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು ಜನರು ಪ್ರತಿನಿತ್ಯ ಭಯದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಹೆಚ್ಚಿನ ವಾಯುಮಾಲಿನ್ಯ ಮತ್ತು ಜನರ ಜೀವನ ಶೈಲಿಗಳು ವಾತಾವರಣದ ಕೋಪಕ್ಕೆ ಕಾರಣವಾಗುತ್ತಿದ್ದು ಈ ಭೂಮಿಯ ಮೇಲೆ ಹೊಸಹೊಸ ಸೋಂಕುಗಳು ಕಾಣಿಸಿಕೊಳ್ಳುವಂತೆ ಆಗಿದೆ ಎಂದು ಹೇಳಬಹುದು. ನಿಮಗೆಲ್ಲ ತಿಳಿದಿರುವ ಹಾಗೆ ದೇಶದಲ್ಲಿ ಕರೋನ ಸೋಂಕು ಕಾಣಿಸಿಕೊಂಡು ಲಕ್ಷಣತರ ಜನರು ತಮ್ಮ ಪ್ರಾಣವನ್ನ ಕಳೆದುಕೊಂಡರು ಮತ್ತು ಇಂದಿಗೂ ಕೂಡ ಅದೆಷ್ಟೋ ಜನರು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟವನ್ನ ಮಾಡುತ್ತಿದ್ದಾರೆ.
ಇನ್ನು ಕರೋನ ಆತಂಕ ಸ್ವಲ್ಪ ಕಡಿಮೆ ಆಗುತ್ತಿರುವ ಈ ಸಮಯದಲ್ಲಿ ದೇಶದಲ್ಲಿ ಇನ್ನೊಂದು ಮಹಾಮಾರಿ ಕಾಣಿಸಿಕೊಂಡಿದ್ದು ಸಂಶೋಧಕರು ಈ ಸೋಂಕು ಕರೋನ ಸೋಂಕಿಗಿಂತ ಬಹಳ ಅಪಾಯಕಾರಿ ಮತ್ತು ಈ ಸೋಂಕು ಮಾನವನ್ನ ಎಲ್ಲಾ ರೋಗ ನಿರೋಧಕ ಶಕ್ತಿಯನ್ನ ತಿಂದುಬಿಡುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಈ ಸೋಂಕು ಯಾವುದು ಮತ್ತು ಈ ಸೋಂಕಿನ ಲಕ್ಷಣಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಸೋಂಕಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ದೇಶದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ.
ಇನ್ನೇನು ಆತಂಕ ದೂರವಾಯಿತು ಎನ್ನುವಾಗಲೇ ಮತ್ತೊಂದು ಹೊಸ ಸೋಂಕು ಕಾಣಿಸಿಕೊಂಡಿದೆ ಮತ್ತಿ ಸೋಂಕು ಕರೋನ ಸೋಂಕಿಗಿಂತಲೂ ಅಪಾಯಕಾರಿ ಅನ್ನುವ ವಿಷಯ ಈಗ ಬೆಳಕಿಗೆ ಬಂದಿದೆ. ಇನ್ನು ಯಾವುದೇ ರೋಗ ನಿರೋಧಕ ಔಷಧಗಳಿಗೂ ಬಗ್ಗದ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್(AMR) ಸಮಸ್ಯೆಯ ಕುರಿತಂತೆ ವಿಶ್ವಸಂಸ್ಥೆ ಭಾರತದ ಗಮನ ಸೆಳೆದಿದ್ದು, ಈಗಾಗಲೇ ಕೇರಳ ಸರ್ಕಾರ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ವಿರುದ್ಧ ಸಮರ ಸಾರಿದೆ ಮತ್ತು ಉಳಿತಾ ರಾಜ್ಯಗಳು ಈ ನಿಟ್ಟಿನಲ್ಲಿ ಕ್ರಮವನ್ನ ಕೈಗೊಳ್ಳಬೇಕು ಎಂದು ಹೇಳಲಾಗಿದೆ. ಬ್ಯಾಕ್ಟೀರಿಯಾ, ವೈರಸ್ ಸೋಂಕಿತರಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೆಲಸ ಮಾಡುವುದಿಲ್ಲ. ಕೊರೋನಾ ನಂತರ ಈ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಭಾರತೀಯ ಅಧಿಕಾರಿ ಅನುಜ್ ಶರ್ಮಾ ತಿಳಿಸಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ದುರ್ಬಲ ಮಾಡುವುದು ಮಾತ್ರವಲ್ಲದೆ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಎನ್ನಲಾಗಿದೆ. ಯಾವುದೇ ವ್ಯಕ್ತಿಗಳಲ್ಲಿ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಕಾಣಿಸಿಕೊಂಡರೆ ಯಾವುದೇ ಔಷಧಗಳಿಗೆ ಪರಿಣಾಮ ಬೀರುವುದಿಲ್ಲ ಮತ್ತು ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಇನ್ನು ಕೊರೋನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ವೇಗವಾಗಿ ತಗಲುವ ಸಾಧ್ಯತೆ ಇದೆ ಎಂದು ಅಮೆರಿಕ ರೋಗ ನಿಯಂತ್ರಣ ಕೇಂದ್ರದ ತಜ್ಞರು ಹೇಳಿದ್ದಾರೆ. ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಆಗಾಗ ಕೈತೊಳೆದುಕೊಳ್ಳಬೇಕು. ಕಡ್ಡಾಯವಾಗಿ ಕೋವಿಡ್ ನಿರೋಧಕ ಲಸಿಕೆ ಪಡೆಯಬೇಕು. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.