Ads By Google

Amrutha Iyengar: ಡಾಲಿ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ ಅಮೃತ, ಮದುವೆಗೆ ಗ್ರೀನ್ ಸಿಗ್ನಲ್ ಕೊಡ್ತಾರಾ.

Actress Amrita Iyengar shares her experience of acting with Dolly Dhananjay.
Ads By Google

Daali Dhananjay And Amrutha Iyengar: ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ (Daali Dhananjay) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಗೆ (Weekend With Ramesh) ನಟ ಡಾಲಿ ಧನಂಜಯ್ ಅವರು 5 ನೇ ಅತಿಥಿಯಾಗಿ ಬಂದಿದ್ದಾರೆ.

ಇವರು ಬಂದಿರುವ ಎಪಿಸೋಡ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದೆ. ಸಾಧಕರ ಕುರ್ಚಿಯಲ್ಲಿ ಕುಳಿತು ಡಾಲಿ ಧನಂಜಯ್ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್ನು ನಟ ಧನಂಜಯ್ ಅವರಿಗೆ ಈ ಶೋ ನಲ್ಲಿ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗಿದೆ.

Image Credit: publictv

ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಧನಂಜಯ್
ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಧನಂಜಯ್ ಅವರಿಗೆ ಮದುವೆ ಯಾವಾಗ ಎಂದು ಎಂದು ಕೇಳಿದ್ದಾರೆ. ಅದಕ್ಕೆ ಧನಂಜಯ್ ಅವರು ಏನು ಉತ್ತರಿಸದೆ ಸುಮ್ಮನೆ ನಕ್ಕು ಬಿಟ್ಟಿದ್ದಾರೆ. ಈಗಾಗಲೇ ನಟಿ ಅಮೃತ ಅಯ್ಯರ್ (Amrutha Iyengar) ಹಾಗು ಧನಂಜಯ್ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಆಗಿತ್ತು. ಮದುವೆ ಕೂಡ ಆಗಲಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ ಈ ಬಗ್ಗೆ ನಟ ಧನಂಜಯ್ ಅವರಾಗಲಿ ಅಮೃತ ಆಗಲಿ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.

Image Credit: vijaykarnataka

ನನ್ನ ಉಸಿರು ಇರುವವರೆಗೂ ನಾನು ಡಾಲಿಯನ್ನು ಮರೆಯುವುದಿಲ್ಲ ಎಂದ ನಟಿ ಅಮೃತ ಅಯ್ಯಂಗಾರ್
ಇದೀಗ ಈ ಸುದ್ದಿ ನಿಜ ಎನ್ನುವಂತೆ ನಟಿ ಅಮೃತ ಅಯ್ಯಂಗಾರ್ ಅವರು ಧನಂಜಯ್ ಅವರ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ. ನಾನು ಅವರ ಜೊತೆ ಮೂರೂ ಸಿನಿಮಾಗಳನ್ನು ಮಾಡಿದ್ದೇನೆ. ನಮ್ಮವರು ನಮ್ಮ ಜೊತೆಯೇ ಬೆಳೆಯಬೇಕು ಎನ್ನುವ ಆಸೆ ಅವರಿಗಿದೆ ಎಂದು ನಟಿ ಅಮೃತ ಅಯ್ಯಂಗಾರ್ ಅವರು ಹೇಳಿದ್ದಾರೆ.

ನನ್ನ ಉಸಿರು ಇರುವವರೆಗೂ ನಾನು ಅವರನ್ನು ಮರೆಯಲು ಸಾಧ್ಯವಿಲ್ಲ. ನಾನು ನಟಿಯಾಗಿ ಬೆಳೆಯಲು ನಟ ಧನಂಜಯ್ ಕೂಡ ಕಾರಣ. ಹೀಗೆ ಉತ್ತಮ ಸಿನಿಮಾ ಮಾಡಲಿ. ನಾನು ಅವರೊಂದಿಗೆ 3 ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ನಟಿ ಅಮೃತ ಅಯ್ಯಂಗಾರ್ ಹೇಳಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field