Amruthadhare: ನಿಂತು ಹೋಗುತ್ತ ಗೌತಮ್ ಮತ್ತು ಭೂಮಿಕಾ ಮದುವೆ, ಭೂಮಿಕಾ ಮದುವೆಯ ದಿನವೇ ಅಪಶಕುನ.
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಮದುವೆಗೆ ವಿಘ್ನ ಉಂಟಾಗಿದೆ.
Amruthadhare Kannada Serial: ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಧಾರಾವಾಹಿಗಳಲ್ಲಿ ಅಮೃತಧಾರೆ ಕೊಡ ಒಂದಾಗಿರುತ್ತದೆ. ಅಮೃತಾರೆ (Amruthadhare) ಧಾರಾವಾಹಿ ಇತ್ತೀಚಿಗಷ್ಟೇ ಪ್ರಾರಂಭವಾಗಿದ್ಧು ಜನ ಮೆಚ್ಚಿದ ಕಥೆಯಾಗಿರುತ್ತದೆ. ದಿನಕ್ಕೊಂದು ತಿರುವಿನೊಂದಿಗೆ ಆರಂಭವಾಗಿ ಕಥಾನಾಯಕರನ್ನು ಜನ ಇಷ್ಟಪಟ್ಟು ನೋಡುತಿದ್ಧಾರೆ.
ಗೌತಮ್ ಹಾಗು ಭೂಮಿಕಾ ಪಾತ್ರ ತಮ್ಮಕುಟುಂಬದ ಸಂತೋಷಕ್ಕಾಗಿ ಎನ್ನೆಲ್ಲ ಮಾಡಬಹುದು ಎಂಬುದನ್ನು ತೋರಿಸಿಕೊಡುತ್ತದೆ. ಗೌತಮ್ ಹಾಗು ಭೂಮಿಕಾ ಪಾತ್ರಧಾರಿಗಳು ಕಥೆ ಆರಂಭದಲ್ಲಿ ಒಬ್ಬರನೊಬ್ಬರು ದ್ವೇಷಸುತಿರುತ್ತಾರೆ. ಜಗಳದಿಂದಲೇ ಆರಂಭವಾದ ಕಥೆ ಈಗ ಮದುವೆಗೆ ಬಂದು ನಿಂತಿದೆ.
ಗೌತಮ್ ಹಾಗು ಭೂಮಿಕಾಳ ಮದುವೆ ಮಾತುಕತೆ
ಗೌತಮ್ ಗೆ ವರ್ಷ 45 ಆಗಿದ್ದರೂ ಹಾಗು ಭೂಮಿಕಾಳಿಗೆ ವರ್ಷ 35 ಆಗಿದ್ದರೂ ಕುಟುಂಬದ ಏಳಿಗೆ ಹಾಗು ತಮಗೆ ಸೆಟ್ ಆಗದ ಸಂಗತಿ ಸಿಗದ ಕಾರಣ ಇಬ್ಬರು ವಿವಾಹ ಆಗಿರುವುದಿಲ್ಲ. ಆದ್ರೆ ಗೌತಮ್ ತಂಗಿ ಮಹಿಮಾ ಹಾಗು ಭೂಮಿಕಾ ತಮ್ಮ ಜೀವನ್ ಇಬ್ಬರು ಪ್ರೀತಿಸುತಿದ್ದು, ಇವರಿಬ್ಬರ ಮದುವೆ ನಡೆಯಬೇಕಿದ್ದರೆ ಗೌತಮ್ ಮತ್ತು ಭೂಮಿಕಾ ರಾಜಿ ಆಗಲೇ ಬೇಕಿತ್ತು, ಹಾಗಾಗಿ ಗೌತಮ್ ತನ್ನ ತಂಗಿಗಾಗಿ ಹಾಗು ಭೂಮಿಕಾ ತನ್ನ ತಮ್ಮನಿಗಾಗಿ ಮದುವೆ ಆಗುವುದಾಗಿ ಒಪ್ಪಿಗೆ ಸೂಚಿಸುತ್ತಾರೆ ಅದರಂತೆ ಇಬ್ಬರ ಮದುವೆಗೆ ಸಿದ್ಧತೆ ಆಗಿರುತ್ತದೆ.
ಅಷ್ಟೇ ಅಲ್ಲದೆ ನಿನ್ನೆಯ ಸಂಚಿಕೆಯಲ್ಲಿ ಭೂಮಿಕಾ ಮಾಜಿ ಪ್ರೇಮಿ ನಾನು ನಿನ್ನನ್ನು ಇನ್ನು ಪ್ರೀತಿ ಮಾಡುವುದಾಗಿ ಹೇಳಿ ತೊಂದರೆ ಕೊಡುತ್ತಾನೆ. ಆತ ಈಗಾಗಲೇ ಬೇರೆ ಮದುವೆ ಆಗಿದ್ದರು ಪದೇ ಪದೇ ಭೂಮಿಕಾಳಿಗೆ ತೊಂದರೆ ಕೊಡುತ್ತಿರುತ್ತಾನೆ.
ಗೌತಮ್ ಹಾಗು ಭೂಮಿಕಾಳ ಮದುವೆ ಸಂಭ್ರಮ
ಪ್ರೀತಿಯ ಮಗಳಾದ ಭೂಮಿಕಾಳನ್ನು ಮದುವೆ ಸಿಂಗಾರದಲ್ಲಿ ನೋಡಿದ ತಂದೆ ತಾಯಿ ತುಂಬ ಸಂತೋಷ ಪಡುತ್ತಾರೆ. ಭೂಮಿಕಾ ಹಾಗು ಮನೆಯವರೆಲ್ಲ ಚೌಟರಿಗೆ ಹೋಗಲು ಸಿದ್ಧರಾದಾಗ ಭೂಮಿಕಾ ತನ್ನ ಪ್ರೀತಿಯ ಕಾರಲ್ಲಿ ಹೋಗಬೇಕೆಂದು ಹಠ ಮಾಡುತ್ತಾಳೆ. ಅದರಂತೆ ಕಾರಲ್ಲಿ ಹೊರಡುತ್ತಾರೆ. ಅರ್ಧ ದಾರಿಯಲ್ಲಿ ಕಾರು ಕೆಟ್ಟು ಹೋಗಿ ತೊಂದರೆಗೆ ಒಳಗಾಗುತ್ತಾರೆ. ಈಗಾಗಲೇ ತುಂಬ ತಡ ಆಗಿರುವುದರಿಂದ ಆಟೋದಲ್ಲಿ ಚೌಟರಿಗೆ ಹೊರಡುತ್ತಾರೆ. ಹಾಗೇ ಗೌತಮ್ ಮನೆಯವರು ಕೊಡ ಸಂಭ್ರಮದಿಂದ ಸಿದ್ದರಾಗಿ ಹೊರಡುತ್ತಾರೆ.
ಮದುವೆ ಚೌಟರಿಯಲ್ಲಿ ಇನ್ನೊಂದು ಸಮಸ್ಯೆ
ಭೂಮಿಕಾ ತಂದೆ ಬುಕ್ ಮಾಡಿದ ಚೌಟರಿಯಲ್ಲಿ ಅದೇ ದಿನ ಬೇರೆ ಮದುವೆ ಕೊಡ ಬುಕ್ ಆಗಿದ್ದು, ಅಲ್ಲಿ ದೊಡ್ಡ ಗಲಾಟೆಯೇ ನಡೆದುಬಿಡುತ್ತದೆ. ಒಂದೇ ಚೌಟರಿಯನ್ನು ಇಬ್ಬರು ಬುಕ್ ಮಾಡಿದ ಕುರಿತು ತುಂಬ ವಾದವಾಗುತ್ತದೆ. ಇದನ್ನೆಲ್ಲಾ ಗಮನಿಸುತ್ತಾ ಏನಿದು ಒಂದು ಆದ ನಂತರ ಒಂದು ಅಪಶಕುನ ಎಂದು ಮನೆಯವರು ಚಿಂತಿಸುತ್ತಾರೆ. ಇಷ್ಟೆಲಾ ಆದ ಮೇಲು ಗೌತಮ್ ಮತ್ತು ಭೂಮಿಕಾ ಮದುವೆ ನಡೆಯುತ್ತಾ ಎಂದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.