Amul Franchise: ಕೇವಲ 2 ಲಕ್ಷ ರೂ ನಲ್ಲಿ ಆರಂಭಿಸಿ ಈ ಅಮುಲ್ ಬಿಸಿನೆಸ್, ಪ್ರತಿ ತಿಂಗಳು ಭರ್ಜರಿ ಸಂಪಾದನೆ.

ಕೇವಲ 2 ಲಕ್ಷ ರೂ. ನಲ್ಲಿ ಆರಂಭಿಸಿ ಈ ಅಮುಲ್ ಬಿಸಿನೆಸ್

Amul Franchise Business Details: ಸ್ವಂತ ಉದ್ಯೋಗದ ಕನಸು ಎಲ್ಲರಲ್ಲೂ ಇರುವುದು ಸಹಜ. ಆದರೆ ಸ್ವಂತ ಉದ್ಯೋಗ ಮಾಡುವುದು ಕನಸು ಕಂಡಷ್ಟು ಸುಲಭವಲ್ಲ. ಇದಕಾಗಿ ಸಾಕಷ್ಟು ಪೂರ್ವ ಯೋಜನೆಗಳು ಇರಬೇಕಾಗುತ್ತದೆ. ಉದ್ಯೋಗಕ್ಕೆ ಬೇಕಾದ ಪ್ಲಾನ್, ಬಂಡವಾಳ, ಉದ್ಯೋಗದ ಬಗ್ಗೆ ಮಾಹಿತಿ ಇರುವುದು ಮುಖ್ಯ. ಉದ್ಯೋಗದ ಬಗ್ಗೆ ಹೆಚ್ಚು ಮಾಹಿತಿ ತಿಳಿಯದೆ ಸ್ವಂತ ಉದ್ಯೋಗ ಮಾಡಿಕೊಂಡು ನಷ್ಟ ಅನುಭವಿಸಿರುವ ಸಾಕಷ್ಟು ಜನರಿದ್ದಾರೆ.

ಹೀಗಾಗಿ ಉದ್ಯೋಗವನ್ನು ಮಾಡುವ ಮುನ್ನ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುವುದು ಮುಖ್ಯ. ನೀವು ಸ್ವಂತ ಉದ್ಯೋಗದ ಕನಸು ಕಂಡಿದ್ದಾರೆ ನಾವೀಗ ನಿಮಗಾಗಿ ಒಳ್ಳೆಯ ಉದ್ಯೋಗದ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಈ ಉದ್ಯೋಗವನ್ನು ಆರಿಸಿಕೊಂಡರೆ ಕಡಿಮೆ ಬಜೆಟ್ ನಲ್ಲಿ ಹೆಚ್ಚು ಲಾಭವನ್ನು ಪಡೆಯಬಹುದು.

Amul Franchise Business Profit
Image Credit: Bhaskar

ಪ್ರತಿ ತಿಂಗಳು ಭರ್ಜರಿ ಸಂಪಾದನೆ ಮಾಡುವ ಬೆಸ್ಟ್ ಬಿಸಿನೆಸ್ ಐಡಿಯಾ ಇಲ್ಲಿದೆ
ದೇಶದಲ್ಲಿ ದೊಡ್ಡ ಹೆಸರು ಮಾಡಿದ ಸಂಸ್ಥೆಗಳಲ್ಲಿ Amul ಕೂಡ ಒಂದಾಗಿದೆ. ಅಮುಲ್ ಬ್ರಾಂಡ್ ನ ಬಗ್ಗೆ ತಿಳಿದಿರದವರ ಸಂಖ್ಯೆ ಕಡಿಮೆ ಎಂದರೆ ತಪ್ಪಾಗಲಾರದು. ಹೆಚ್ಚಿನ ಜನರು Amul ಬ್ರಾಂಡ್ ನ ಉತ್ಪನ್ನಗಳನ್ನು ಬಳಸುತ್ತಾರೆ. ಮಾರುಕಟ್ಟೆಯಲ್ಲೂ ಮೌಲ್ ಬ್ರಾಂಡ್ ಗೆ ಬಾರಿ ಬೇಡಿಕೆ ಇದೆ. ಈ ಬ್ರಾಂಡ್‌ ನ ಗುಣಮಟ್ಟದ ಬಗ್ಗೆ ಹೇಳಬೇಕಾಗಿಲ್ಲ.

ದೇಶದ ಜನತೆಗೆ ಹಾಲು, ಮೊಸರು, ತುಪ್ಪ, ಐಸ್ ಕ್ರೀಮ್ ಮುಂತಾದ ಹಲವು ಉತ್ತಮ ಉತ್ಪನ್ನಗಳನ್ನು ಅಮುಲ್ ನೀಡುತ್ತಿದೆ. ನೀವು ಕೂಡ ಅಮುಲ್ ಫ್ರಾಂಚೈಸ್ ಅನ್ನು ಪಡೆಯಬಹುದು ಮತ್ತು ನಿಮ್ಮ ಹತ್ತಿರದ ಸ್ಥಳದಲ್ಲಿ ವ್ಯಾಪಾರವನ್ನು ಪ್ರಾರಂಭಿಸಿ ಉತ್ತಮ ಲಾಭವನ್ನು ಗಳಿಸಬಹುದು. ಅಮುಲ್ ಹಾಲು, ಮೊಸರು, ಚೀಸ್ ಮುಂತಾದ ಅನೇಕ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಮತ್ತು ಅದರಿಂದ ಲಾಭ ಗಳಿಸಬಹುದು.

Amul Franchise Business
Image Credit: Businesstak

ಕೇವಲ 2 ಲಕ್ಷ ರೂ. ನಲ್ಲಿ ಆರಂಭಿಸಿ ಈ ಅಮುಲ್ ಬಿಸಿನೆಸ್
ಅಮುಲ್ ಫ್ರಾಂಚೈಸ್ ನಿಮಗೆ ಹೆಚ್ಚು ವೆಚ್ಚವಾಗುವುದಿಲ್ಲ. ನೀವು ಕೇವಲ 2 ಲಕ್ಷ ರೂಪಾಯಿಗೆ ಫ್ರಾಂಚೈಸಿಯನ್ನು ತೆಗೆದುಕೊಳ್ಳಬಹುದು. ಇದು ಅತ್ಯಂತ ಲಾಭದಾಯಕ ವ್ಯವಹಾರವಾಗಿದ್ದು, ನೀವು ಅಮುಲ್ ಉತ್ಪನ್ನಗಳ ಮೇಲೆ 2.5% ರಿಂದ 20% ಕಮಿಷನ್ ಪಡೆಯುತ್ತೀರಿ. ಉತ್ತಮ ಮಾರಾಟದ ಆಧಾರದ ಮೇಲೆ ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು.. ಅಮುಲ್ ಕಡೆಯಿಂದ ನಿಮಗೆ ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವೆಯ ಬಗ್ಗೆ ತರಬೇತಿ ನೀಡಲಾಗುತ್ತದೆ.

Join Nadunudi News WhatsApp Group

ಅಮುಲ್ ಈಗಾಗಲೇ ಹೆಚ್ಚಿನ ಜನರು ಇಷ್ಟಪಡುವ ಬ್ರ್ಯಾಂಡ್ ಆಗಿದ್ದು, ಜನರು ಅದರ ಉತ್ಪನ್ನಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಇನ್ನು ಮುಖ್ಯವಾಗಿ ಅಮುಲ್ ಫ್ರಾಂಚೈಸ್ ತೆರೆಯಲು FSSAI ಲೈಸೆನ್ ಹೊಂದುವುದು ಕಡ್ಡಾಯವಾಗಿದೆ. ನೀವು ಭಾರತೀಯ ಪ್ರಜೆಯಾಗಿದ್ದು, FSSAI ಲೈಸೆನ್ ಹೊಂದಿದ್ದರೆ ಹಾಗೆಯೆ ನಿಮ್ಮ ಬಳಿ 2 ಲಕ್ಷ ಬಜೆಟ್ ಇದ್ದರೆ ಸಾಕು ನೀವು ಅಮುಲ್ ಫ್ರಾಂಚೈಸ್ ಅನ್ನು ಆರಂಭಿಸಿ ಆದಾಯವನ್ನು ಗಳಿಸಬಹುದು.

Amul Franchise Business Details
Image Credit: Businesstak

Join Nadunudi News WhatsApp Group