Actress Amulya Gowda In Modern Dress: ಜೀ ಕನ್ನಡದಲ್ಲಿ (Zee Kannada)ಪ್ರಸಾರವಾಗ್ತಿದ್ದ ಕಮಲಿ ಧಾರಾವಾಹಿ ಮೂಲಕ ಅಮೂಲ್ಯ ಗೌಡ (Amulya Gowda)ಖ್ಯಾತಿ ಪಡೆದಿದ್ದಾರೆ. ಹಳ್ಳಿ ಹುಡುಗಿಯ ರೀತಿ ಅದ್ಭುತವಾಗಿ ನಟಿಸಿ ಎಲ್ಲರ ಮನಸ್ಸು ಗೆದ್ದಿದ್ದಾರೆ.
ನಂತರ ಬಿಗ್ ಬಾಸ್ ಸೀಸನ್ 9 ರಲ್ಲಿ ಭಾಗವಹಿಸಿ ಮತ್ತಷ್ಟು ಜನರ ಮನಸ್ಸನ್ನು ಗೆದ್ದಿದ್ದಾರೆ. ಅಮೂಲ್ಯ ಗೌಡ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಮಾಡರ್ನ್ ಡ್ರೆಸ್ ನಲ್ಲಿ ಮಿಂಚಿದ ನಟಿ ಅಮೂಲ್ಯ ಗೌಡ
ಮಾಡರ್ನ್ ಡ್ರೆಸ್ ನಲ್ಲಿ ನಟಿ ಅಮೂಲ್ಯ ಗೌಡ ಮಿಂಚಿದ್ದಾರೆ. ಮಾರ್ಡನ್ ಡ್ರೆಸ್‍ನಲ್ಲಿ ಎಲ್ಲೋ ನೋಡುತ್ತಾ, ಫೋನ್ ನೋಡುತ್ತಾ ನಟಿ ಅಮೂಲ್ಯ ಗೌಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಡ್ರೆಸ್‍ಗೆ ತಕ್ಕಂತೆ ಹೇರ್ ಸ್ಟೈಲ್ ಮಾಡಿದ್ದಾರೆ.
ಧಾರಾವಾಹಿಯಲ್ಲಿ ಸದಾ ಲಂಗಾ ದಾವಣಿ ಸೀರೆ ಧರಿಸುತ್ತಿದ್ದ ನಟಿ ಅಮೂಲ್ಯ ಗೌಡರ ಅವರನ್ನು ಬಿಗ್ ಬಾಸ್ ಶೋನಲ್ಲಿ ಮಾರ್ಡನ್ ಡ್ರೆಸ್‍ನಲ್ಲಿ ನೋಡಿ ಜನ ಮೆಚ್ಚಿಕೊಂಡಿದ್ದರು.
ಅಮೂಲ್ಯ ಗೌಡ ಬಿಗ್ ಬಾಸ್ ಮನೆಯಲ್ಲಿ ಆಟ ನೋಟಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದರು. ಆದರೆ ಎಲ್ಲರ ಜೊತೆ ಜಗಳ ಮಾಡಿಕೊಳ್ಳುತ್ತಾ ಇದ್ದಿದ್ದರು. ಬಿಗ್ ಬಾಸ್ ವಿನ್ ಆಗುವ ಲಕ್ ಇವರದ್ದು ಆಗಲಿಲ್ಲ.
ಬಿಗ್ ಬಾಸ್ ಖ್ಯಾತಿಯ ನಟಿ ಅಮೂಲ್ಯ ಗೌಡ
ನಟಿ ಅಮೂಲ್ಯ ಗೌಡ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತ ಇದ್ದಾರೆ. ಅದಕ್ಕೆ ನಟಿ ಅಮೂಲ್ಯ ಅವರೇ ಉತ್ತರ ಹೇಳಬೇಕಿದೆ.
ಬಿಗ್ ಓಸ್ ನಂತರ ನಟಿ ಅಮೂಲ್ಯ ಗೌಡ ಮಾಲ್ಡೀವ್ಸ್ ಪ್ರವಾಸವನ್ನು ಮುಗಿಸಿದ್ದಾರೆ. ನಟಿ ಅಮೂಲ್ಯ ಗೌಡ ತಮ್ಮ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇದೀಗ ನಟಿ ಅಮೂಲ್ಯ ಮಾಡರ್ನ್ ಡ್ರೆಸ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ.