Anant Ambani Watch: ಅನಂತ್ ಅಂಬಾನಿ ಧರಿಸುವ ವಾಚ್ ಬೆಲೆ ಎಷ್ಟು ಗೊತ್ತಾ…? ವಿಶ್ವದ ಅಂತ್ಯಂತ ದುಬಾರಿ ವಾಚ್.

ಅನಂತ್ ಅಂಬಾನಿ ಧರಿಸುವ ವಾಚ್ ಬೆಲೆ ಎಷ್ಟು...? ವಿಶ್ವದ ಅತೀ ದುಬಾರಿ ವಾಚ್

Anant Ambani Expensive Watch: ಸದ್ಯ ಎಲ್ಲೆಡೆ ದೇಶದ ಶ್ರೀಮಂತ ವ್ಯಕ್ತಿಯಾಗಿರುವ Mukesh Ambani ಅವರ ಕಿರಿಯ ಪುತ್ರನ ಮದುವೆಯ ಸುದ್ದಿ ವೈರಲ್ ಆಗುತ್ತಿದೆ. ಮುಕೇಶ್ ಅಂಬಾನಿ ಅವರ ಪುತ್ರ Anant Ambani ಅವರ ಬಹುಕಾಲದ ಗೆಳತಿಯ ಕೈಹಿಡಿಯಲಿದ್ದಾರೆ. ಇನ್ನು ಮಾರ್ಚ್ 1 ರಿಂದ ಮಾರ್ಚ್ 3 ರವರೆಗೆ ಅನಂತ್ ಹಾಗು ರಾಧಿಕಾ ಅವರ ಮದುವೆಯ ಪೂರ್ವ ಕಾರ್ಯಕ್ರಮಗಳು ಜೋರಾಗಿಯೇ ನಡೆದಿದೆ.

ಸಾವಿರಾರು ಕೋಟಿ ವೆಚ್ಚದಲ್ಲಿ ಈ ಅದ್ದೂರಿ ಕಾರ್ಯಕ್ರಮ ನೆರವೇರಿದೆ. ಇನ್ನು ಐಷಾರಾಮಿ ಜೀವನ ನಡೆಸುತ್ತಿರುವ ಅಂಬಾನಿ ಕುಟುಂಬದವರು ಮದುವೆಯ ಕಾರ್ಯಕ್ರಮದಲ್ಲಿ ದುಬಾರಿ ಬೆಲೆ ಬಾಳುವ ವಸ್ತ್ರ, ಆಭರಣ ಸೇರಿದಂತೆ ಇನಿತರ ದುಬಾರಿ ವಸ್ತುಗಳನ್ನು ತೊಡ್ಡಿರುವುದು ಈಗಾಗಲೇ ಸುದ್ದಿಯಾಗಿದೆ. ಸದ್ಯ ಅನಂತ್ ಅಂಬಾನಿ ಧರಿಸಿರುವ ವಾಚ್ ಇದೀಗ ಸದ್ಯದ ಹಾಟ್ ಟಾಪಿಕ್ ಆಗಿದೆ ಎನ್ನಬಹುದು. ಅನಂತ್ ಅಂಬಾನಿ ಧರಿಸುವ ವಾಚ್ ಬೆಲೆ ಎಷ್ಟು ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Anant Ambani Expensive Watch
Image Credit: Scoopwhoop

ದುಬಾರಿ ಬ್ರಾಂಡೆಡ್ ವಾಚ್ ಧರಿಸಿದ ಅನಂತ್ ಅಂಬಾನಿ
ಅನಂತ್ ಹಾಗು ರಾಧಿಕಾ ಅವರ ಮದುವೆಯ ಪೂರ್ವ ಕಾರ್ಯಕ್ರಮಕ್ಕೆ ಸಿನಿಮಾ, ಕ್ರೀಡೆ, ರಾಜಕೀಯ ಸೇರಿದಂತೆ ನಾನಾ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಕೂಡ ಭಾಗವಹಿಸಿದ್ದರು. ಈ ಸಮಯದಲ್ಲಿ, ಜುಕರ್‌ ಬರ್ಗ್ ಮತ್ತು ಅನಂತ್ ಅಂಬಾನಿ ನಡುವಿನ ಸಂಭಾಷಣೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಮಾರ್ಕ್ ಜುಕರ್‌ ಬರ್ಗ್ ಪತ್ನಿ ಅನಂತ್ ಅಂಬಾನಿ ಧರಿಸಿದ್ದ ವಾಚ್ ಅನ್ನು ಗಮನಿಸಿ ಹೊಗಳಿದ್ದಾರೆ. ಈ ಸಮಯದಲ್ಲಿ ಜುಕರ್‌ ಬರ್ಗ್ ವಾಚ್‌ ನ ಬಗ್ಗೆಯೂ ವಿಚಾರಿಸುತ್ತಾರೆ.

Anant Ambani And Radhika Merchant
Image Credit: Tatler

ಅನಂತ್ ಅಂಬಾನಿ ಧರಿಸುವ ವಾಚ್ ಬೆಲೆ ಎಷ್ಟು ಗೊತ್ತಾ…?
ರಿಚರ್ಡ್ ಮಿಲ್ಲೆ ಬ್ರಾಂಡ್‌ ನ (Richard Milley RM 56-02) ಬೆಲೆ 18.2 ಕೋಟಿ ರೂ. ಆಗಿದೆ. ರಿಚರ್ಡ್ ಮಿಲ್ಲೆ ಬ್ರ್ಯಾಂಡ್ ಅನ್ನು 1999 ರಲ್ಲಿ ಫ್ರೆಂಚ್ ಉದ್ಯಮಿ ಸ್ಥಾಪಿಸಿದರು. ವಿಶ್ವದ ಅನೇಕ ಸೆಲೆಬ್ರಿಟಿಗಳು ಈ ಬ್ರಾಂಡ್ ವಾಚ್‌ ಗಳನ್ನು ಧರಿಸುತ್ತಾರೆ. ಸ್ಪ್ಯಾನಿಷ್ ಲೆಜೆಂಡರಿ ಟೆನಿಸ್ ಆಟಗಾರ ರಾಫೆಲ್ ನಡಾಲ್ ಕೂಡ ಈ ವಾಚ್ ಧರಿಸಿದ್ದಾರೆ. ವಿವಾಹ ಪೂರ್ವದ ಎರಡನೇ ದಿನದ ಸಂಭ್ರಮಾಚರಣೆಯಲ್ಲಿ ಅನಂತ್ ಅಂಬಾನಿ ಧರಿಸಿರುವ ವಾಚ್‌ ನಲ್ಲಿ ಅಮೂಲ್ಯ ಹರಳುಗಳು, ವಜ್ರಗಳು ಮತ್ತು ಪಚ್ಚೆಗಳನ್ನು ಹೊಂದಿಸಲಾಗಿದೆ. ಹೀಗಾಗಿ ಈ ವಾಚ್ ಅಷ್ಟೊಂದು ಬೆಲೆ ಹೊಂದಿದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group