Ads By Google

Ananth Ambani: ಅಪ್ಪನ ಹಾಗೆ ಮಗ ಕೂಡ ದೊಡ್ಡ ಶ್ರೀಮಂತ, ಅನಂತ್ ಅಂಬಾನಿ ಬಳಿ ಇರುವ ಒಟ್ಟು ಆಸ್ತಿ ಎಷ್ಟು ಗೊತ್ತಾ…?

Ananth Ambani

Image Source: India Today

Ads By Google

Ananth Ambani Net Worth: ಸದ್ಯ ಮುಕೇಶ್ ಅಂಬಾನಿ (Mukesh ambani) ಪುತ್ರನ ಮದುವೆಯ ದಿನಾಂಕ ಹತ್ತಿರವಾಗುತ್ತಿದೆ. ಅದೆಷ್ಟೋ ಕೋಟಿ ಹಣ ಖರ್ಚು ಮಾಡಿ ಅಂಬಾನಿ ತಮ್ಮ ಪುತ್ರದ ಮದುವೆಯನ್ನು ನೆರವಿರಿಸಲಿದ್ದಾರೆ. ಇನ್ನು July 12 ರಂದು Ananth Ambani ಹಾಗೂ Radhika Merchant ಅವರ ವಿವಾಹ ನೆರವರೆಯಲಿದೆ.

ಅಂಬಾನಿ ಕುಟುಂಬವು ಮದುವೆಯ ಸಿದ್ದತೆಯಲ್ಲಿ ತೊಡಗಿಕೊಂಡಿದೆ. ಮದುವೆಯ ಪೂರ್ವ ಕಾರ್ಯಕ್ರಮಕ್ಕೆ ಬಾಲಿವುಡ್, ರಾಜಕೀಯ, ಕ್ರಿಕೆಟ್, ಉದ್ಯಮ ವಲಯದ ಗಣ್ಯರು ಈಗಾಗಲೇ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಐಷಾರಾಮಿ ಕಾರು, ವಸತಿ ಸೇರಿದಂತೆ ಎಲ್ಲವನ್ನೂ ಅಂಬಾನಿ ಕುಟುಂಬ ವ್ಯವಸ್ಥೆ ಮಾಡಿದೆ.

Image Credit: Peopleplaces

ಮಗನ ಮದುವೆಗಾಗಿ 1000 ಕೋಟಿ ಖರ್ಚು ಮಾಡಲಿದ್ದಾರೆ ಅಂಬಾನಿ
ಅಂಬಾನಿ ಅವರು ತಮ್ಮ ಮಗನ ಮದುವೆಗೆ ಸರಿಸುಮಾರು 1000 ಕೋಟಿ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಈಗಾಗಲೇ ಮದುವೆಯ ಪೂರ್ವ ಕಾರ್ಯಕ್ರಮಗಳಿಗೆ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿರುವ ಅಂಬಾನಿ ಮಗನ ಮದುವೆಯನ್ನು ಭರ್ಜರಿಯಾಗಿಯೇ ಮಾಡಲಿದ್ದಾರೆ. ಇನ್ನು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರ ಪುರ ಅನಂತ್ ಅಂಬಾನಿ ಅವರ ಬಳಿ ಒಟ್ಟು ಎಷ್ಟು ಆಸ್ತಿ ಇದೆ ಎನ್ನುವುದರ ಬಗ್ಗೆ ನಿಮಗೆ ತಿಳಿದಿದೆಯೇ..? ಅನಂತ್ ಅಂಬಾನಿ ಅವರ ಆಸ್ತಿಯ ಸಂಪೂರ್ಣ ವಿವರ ಇಲ್ಲಿದೆ.

ಅನಂತ್ ಅಂಬಾನಿ ಬಳಿ ಇರುವ ಒಟ್ಟು ಆಸ್ತಿ ಎಷ್ಟು ಗೊತ್ತಾ…?
ಮುಕೇಶ್ ಅಂಬಾನಿಯವರ ಕಿರಿಯ ಪುತ್ರ Ananth ಮುಂಬೈನಲ್ಲಿ ಶಾಲಾ ಶಿಕ್ಷಣ ಪಡೆದರು. ಅನಂತ್ ತಮ್ಮ ಶಾಲಾ ಶಿಕ್ಷಣವನ್ನು ಧೀರೂಭಾಯಿ ಅಂಬಾನಿ ಇಂಟರ್‌ ನ್ಯಾಶನಲ್ ಸ್ಕೂಲ್‌ ನಲ್ಲಿ ಪೂರ್ಣಗೊಳಿಸಿದರು. ಇದಾದ ನಂತರ ಉನ್ನತ ಶಿಕ್ಷಣಕ್ಕಾಗಿ ರೋಡ್ ಐಲೆಂಡ್ ಗೆ ಹೋದರು. ಅನಂತ್ ತಮ್ಮ ಕಾಲೇಜು ಶಿಕ್ಷಣವನ್ನು ಅಮೇರಿಕದ ಬ್ರೌನ್ ವಿಶ್ವವಿದ್ಯಾಲಯದಿಂದ ಮುಗಿಸಿದರು. ಭಾರತಕ್ಕೆ ಮರಳಿದ ನಂತರ ಕುಟುಂಬದ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ.

Image Credit: Thestatesman

ಅನಂತ್ ಎಂ ಅಂಬಾನಿ ಅವರು ಮಾರ್ಚ್ 2020 ರಿಂದ Jio Platforms Ltd, ಮೇ 2022 ರಿಂದ Reliance Retail Ventures Limited, ಜೂನ್ 2021 ರಿಂದ Reliance New Energy Limited ಮತ್ತು Reliance New Solar Energy Ltd ನ ನಿರ್ದೇಶಕರ ಮಂಡಳಿಯಲ್ಲಿದ್ದಾರೆ. Reliance Foundation ಮಂಡಳಿಯ ಸದಸ್ಯರು ಆಗಿದ್ದಾರೆ. ಮುಕೇಶ್ ಅಂಬಾನಿಯ ಆಸ್ತಿಯ ಮೌಲ್ಯ ಭಾರತೀಯ ಲೆಕ್ಕದಲ್ಲಿ 91 ಸಾವಿರ ಕೋಟಿಗೂ ಹೆಚ್ಚು ಎಂದು ಹೇಳಲಾಗುತ್ತದೆ. ಹಾಗೆಯೆ ಮುಕೇಶ್ ಅಂಬಾನಿಯ ಪುತ್ರ ಅಂನತ್ ಅಂಬಾನಿ ಅವರು ಬರೋಬ್ಬರಿ 33 ಸಾವಿರ ಕೋಟಿಗೂ ಹೆಚ್ಚು ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in