Anant Ambani: 108 Kg ತೂಕ ಇಳಿಸಿಕೊಂಡಿದ್ದ ಅನಂತ್ ಅಂಬಾನಿ ದಿಡೀರ್ ದಪ್ಪಗಾಗಿದ್ದು ಯಾಕೆ…? ಇಲ್ಲಿದೆ ಅಸಲಿ ಕಾರಣ

ಅನಂತ್ ಅಂಬಾನಿ ಅವರ ತೂಕ ಮತ್ತೆ ಹೆಚ್ಚಾಗುವುದರ ಹಿಂದಿನ ಕಾರಣವೇನು...?

Anant Ambani Weight Gain Reason: ದೇಶದ ಶ್ರೀಮಂತ ವ್ಯಕ್ತಿ Mukesh Ambani ಅವರ ಬಗ್ಗೆ ಎಲ್ಲರಿಗು ತಿಳಿದೇ. ತಮ್ಮ ವ್ಯವಹಾರ ಹಾಗೂ ಐಷಾರಾಮಿ ಜೀವನದ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಅವರ ಕಿರಿಯ ಮಗ Anant Ambani ಅವರ ಮದುವೆ ನಿಶ್ಚಯವಾಗಿದ್ದು, ಈಗಾಗಲೇ ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.

ಮದುವೆಯ ಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿದ್ದು, ಅನಂತ್ ಮತ್ತು ರಾಧಿಕಾ ಮದುವೆಗೆ ಅಂಬಾನಿ ಕುಟುಂಬ ಸಿದ್ಧತೆ ಮಾಡುತ್ತಿದೆ. ಜುಲೈ ನಲ್ಲಿ ಹಸೆಮಣೆ ಏರುತ್ತಿರುವ ಅನಂತ್ ಅಂಬಾನಿ ಅವರ ವೈಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Anant Ambani Weight Gain Reason
Image Credit: Indianeagle

ಮುಕೇಶ್ ಅಂಬಾನಿ ಅವರ ಪುತ್ರ Anant Ambani
2023 ರ ಜನವರಿಯಲ್ಲಿ Mukesh Ambani ಅವರ ಪುತ್ರ Anant Ambani ಅವರ ನಿಶ್ಚಿತಾರ್ಥ ಬಹಳ ಅದ್ದೂರಿಯಾಗಿ ನೆರವೇರಿತ್ತು. Mukesh Ambani ತಮ್ಮ ಮಗನ ನಿಶ್ಚಿತಾರ್ಥದವನ್ನು ಬಹಳ ಅದ್ದೂರಿಯಾಗಿ ಮಾಡಿದ್ದು, ಇನ್ನು ಮದುವೆ ಕೂಡ 1,000 ಕೋಟಿ ವೆಚ್ಚದಲ್ಲಿ ನೆರವೇರಲಿದೆ ಎನ್ನುವ ಬಗ್ಗೆ ವರದಿಯಾಗಿದೆ.

ಇನ್ನು ನಿಶ್ಚಿತಾರ್ಥಕ್ಕೂ ಮುನ್ನ Mukesh Ambani ಹಾಗೂ Nita Ambani ಅವರ ಪುತ್ರ Anant Ambani ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು ಎನ್ನುವ ಬಗ್ಗೆ ಸುದ್ದಿ ಹರಿದಾಡಿದ್ದವು. ನಂತರ ನಿಶ್ಚಿತಾರ್ಥದ ಸಮಯದಲ್ಲಿ ಮತ್ತೆ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಇನ್ನು Anant Ambani ಅವರ ತೂಕ ಮತ್ತೆ ಹೆಚ್ಚಾಗುವುದರ ಹಿಂದಿನ ಕಾರಣದ ತಿಳಿಯೋಣ.

Anant Ambani Weight
Image Credit: News9live

ಅನಂತ್ ಅಂಬಾನಿ ಅವರ ತೂಕ ಮತ್ತೆ ಹೆಚ್ಚಾಗುವುದರ ಹಿಂದಿನ ಕಾರಣವೇನು…?
2016 ರಲ್ಲಿ Anant Ambani 18 ತಿಂಗಳಲ್ಲಿ 108 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದರು. ಅನಂತ್ ಪ್ರತಿದಿನ 5 -6 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದರು. ಯೋಗ ಮತ್ತು ಹೆಚ್ಚಿನ ತೀವ್ರತೆಯ ಕಾರ್ಡಿಯೋ ವ್ಯಾಯಾಮಗಳ ನಂತರ ವಾಕಿಂಗ್ ಅನ್ನು ಮಾಡುವ ಮೂಲಕ ಅನಂತ್ ಅಂಬಾನಿ ಅವರು ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಪ್ರತಿ ದಿನ 21 ಕಿಲೋಮೀಟರ್ ನಡೆಯುತ್ತಿದ್ದರಂತೆ.

Join Nadunudi News WhatsApp Group

ತೂಕವನ್ನು ಕಡಿಮೆ ಮಾಡಿಕೊಳ್ಳಲು Ananth Ambani ಶುಗರ್ ಲೆಸ್ ಆಹಾರ, ಕೊಬ್ಬಿನಾಂಶ ಕಡಿಮೆ ಇರುವ ಆಹಾರ, ಕಾರ್ಬೋಹೈಡ್ರೇಟ್ ಕಡಿಮೆ ಇರುವ ಆಹಾರವನ್ನು ಸೇವಿಸುತ್ತಿದ್ದರು. ಜಂಕ್ ಫುಡ್ ಗಳನ್ನೂ ಸಂಪೂರ್ಣವಾಗಿ ತ್ಯಜಿಸಿ ಕೇವಲ 18 ತಿಂಗಳಲ್ಲಿ ಬರೋಬ್ಬರಿ 108 KG ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಆದರೆ ಒಂದೂವರೆ ವರ್ಷದಲ್ಲಿ ತೂಕ ಕಡಿಮೆ ಮಾಡಿಕೊಂಡ ಅನಂತ್ ಅಂಬಾನಿ ಮತ್ತೆ ಹೆಚ್ಚು ದಪ್ಪವಾಗಿದ್ದರು. ಅನಂತ್ ಅಂಬಾನಿ ಅವರ ಕೆಲವು ಹಾರ್ಮೋನುಗಳ ಅಸಮತೋಲನವೇ ತೂಕ ಹೆಚ್ಚಳಕ್ಕೆ ಕಾರಣ ಎಂದು ತಿಳಿದುಬಂದಿದೆ.

Anant Ambani And Radhika Merchant
Image Credit: Carbikenews

ಅನಂತ್ ಅಂಬಾನಿ ತೂಕ ಹೆಚ್ಚಳಕ್ಕೆ ಇದೆ ಕಾರಣ
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ Mukesh Ambani ಅವರ ಪತ್ನಿ Nita Ambani ತಮ್ಮ ಮಗ Ananth Ambani ತೂಕ ಹೆಚ್ಚಳದ ಕಾರಣವನ್ನು ರಿವೀಲ್ ಮಾಡಿದ್ದಾರೆ. ‘ತಮ್ಮ ಮಗ ತೀವ್ರವಾದ ಅಸ್ತಮಾದಿಂದ ಬಳಲುತ್ತಿದ್ದಾನೆ ಮತ್ತು ಅದಕ್ಕಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾನೆ. ಅನಂತ್ ಅಸ್ತಮಾ ರೋಗಿ. ಆದ್ದರಿಂದ ಅವರಿಗೆ ಸಾಕಷ್ಟು ಸ್ಟಿರಾಯ್ಡ್ ಗಳನ್ನೂ ನೀಡಬೇಕಾಯಿತು. ಅದು ಆತನ ತೂಕ ಮತ್ತೆ ಹೆಚ್ಚಾಗಲು ಕಾರಣವಾಯ್ತು’ ಎಂದು Nita Ambani ಅವರು ಹೇಳಿದ್ದಾರೆ.

Join Nadunudi News WhatsApp Group