Ads By Google

Property Sale: ಮಾರಾಟವಾದ ತಂದೆಯ ಆಸ್ತಿ ಬಗ್ಗೆ ಕೋರ್ಟ್ ಹೊಸ ನಿಯಮ, ಮಹತ್ವದ ನಿಯಮಾವಳಿ

court new rules
Ads By Google

Ancestral Property Sale: ಸಾಮಾನ್ಯವಾಗಿ ನಾಲ್ಕು ತಲೆಮಾರಿನ ಪುರುಷರು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಪೂರ್ವಜರ ಆಸ್ತಿ (Ancestral Property) ಎನ್ನಲಾಗುತ್ತದೆ. ಆಸ್ತಿಯನ್ನು ಮುಖ್ಯವಾಗಿ ಎರಡು ರೀತಿಯಾಗಿ ವಿಂಗಡಿಸಲಾಗುತ್ತದೆ. ಸ್ವ- ಸ್ವಾದೀನ ಆಸ್ತಿ ಮತ್ತು ಪೂರ್ವಜರ ಆಸ್ತಿಯಾಗಿ ವಿಂಗಡಿಸಲಾಗುತ್ತದೆ. ನೀವೇ ಸಂಪಾದಿಸಿದ ಆಸ್ತಿಯನ್ನು ಸ್ವ- ಸ್ವಾದೀನ ಆಸ್ತಿ ಎನ್ನಲಾಗುತ್ತದೆ.

ಇನ್ನು ಹಲವಾರು ತಲೆಮಾರುಗಳಿಂದ ಪಡೆದ ಆಸ್ತಿ ಪೂರ್ವಜರ ಆಸ್ತಿ ಆಗಿರುತ್ತದೆ. ಇನ್ನು ಮಕ್ಕಳಿಗೆ ಪೂರ್ವಜರ ಆಸ್ತಿಯ ಮೇಲೆ ಸಂಪೂರ್ಣ ಅಧಿಕಾರವಿರುತ್ತದೆ. ಇದೀಗ ತಂದೆಯು ಆಸ್ತಿಯನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದರೆ ಅದನ್ನು ಮರಳಿ ಹೇಗೆ ಪಡೆಯುವುದು ಎನ್ನುವ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

Image Credit: Guardian

ಪೂರ್ವಜರ ಆಸ್ತಿ
ಪೂರ್ವಜರ ಆಸ್ತಿಯ ಹಂಚಿಕೆಯ ಹಕ್ಕನ್ನು ಮಕ್ಕಳು ಹುಟ್ಟಿನಿಂದಲೇ ಪಡೆಯುತ್ತಾರೆ. ಆಸ್ತಿಯ ಮಾಲೀಕರ ಮರಣದ ನಂತರ ಉತ್ತರಾಧಿಕಾರಿಗಳು ಪೂರ್ವಜರ ಆಸ್ತಿಯನ್ನು ಹಂಚಿಕೊಳ್ಳುತ್ತಾರೆ. ಆಸ್ತಿಯ ಮುಖ್ಯ ಮಾಲೀಕರ ಮಕ್ಕಳನ್ನು ಮೊದಲು ಎಣಿಸಲಾಗುತ್ತದೆ ಮತ್ತು ಅದರ ಆಧಾರದ ಮೇಲೆ ಆಸ್ತಿಯನ್ನು ವಿಂಗಡಿಸಲಾಗುತ್ತದೆ. ಪೂರ್ವಜರ ಆಸ್ತಿಯಲ್ಲಿ ವಿಂಗಡಣೆಯಾದರೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಸಮಾನ ಹಂಚಿಕೆ ಆಗಬೇಕು ಎಂದು ಕಾನೂನು ತೀರ್ಪನ್ನು ನೀಡಿದೆ.

ತಂದೆ ಅನ್ಯ ವ್ಯಕ್ತಿಗೆ ಆಸ್ತಿ ಮಾರಾಟ ಮಾಡಿದರೆ ಅದನ್ನ ಮರಳಿ ಪಡೆಯುವುದು ಹೇಗೆ
ಈ ಪೂರ್ವಜರ ಆಸ್ತಿಯನ್ನು ತಂದೆಯು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದರೆ ಅದನ್ನು ಮಕ್ಕಳು ಮರಳಿ ಪಡೆಯಲು ಅವಕಾಶ ಇರುತ್ತದೆ. ತಂದೆಯು ಪೂರ್ವಜರ ಆಸ್ತಿಯನ್ನು ಉತ್ತರಾಧಿಕಾರಿಗಳ ಅನುಮತಿ ಇಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ.

Image Credit: Cpomagazine

ತಂದೆ ಅನ್ಯ ವ್ಯಕ್ತಿಗೆ ಆಸ್ತಿ ಮಾರಾಟ ಮಾಡಿದರೆ ಕಾನೂನು ಮೊಕದ್ದಮೆಯನ್ನು ಹೂಡುವ ಮೂಲಕ ಮಕ್ಕಳು ಮಾರಾಟ ಮಾಡಿರುವ ಪೂರ್ವಜರ ಆಸ್ತಿಯನ್ನು ಮರಳಿ ಪಡೆಯಬಹುದು. ಆದರೆ ತಂದೆಯು ತನ್ನ ಸ್ವಯಾರ್ಜಿತ ಆಸ್ತಿ ಅಂದರೆ ತಾನು ಸಂಪಾದಿಸಿರುವ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿದರೆ ಆ ಆಸ್ತಿಯನ್ನು ಮರಳಿ ಪಡೆಯಲು ಯಾವುದೇ ಅಧಿಕಾರ ಮಕ್ಕಳಿಗೆ ಇರುವುದಿಲ್ಲ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in