Ancestral Property: ಪಿತ್ರಾರ್ಜಿತವಾಗಿ ಪಡೆದ ಆಸ್ತಿಗೆ ತೆರಿಗೆ ಪಾವತಿಸಬೇಕಾ?, ಎಷ್ಟು ತೆರಿಗೆ ಪಾವತಿಸಬೇಕು.
ಪೂರ್ವಜರ ಆಸ್ತಿಗೆ ತೆರಿಗೆ ಕಟ್ಟಬೇಕಾ ಹಾಗೂ ಎಷ್ಟು ತೆರಿಗೆ ಪಾವತಿಸಬೇಕಾಗುತ್ತದೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯಿರಿ.
Ancestral Property Tax: ಭಾರತೀಯ ಕಾನೂನಿನಲ್ಲಿ ಆಸ್ತಿಯ (Property) ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಕಾನೂನು ತಿದ್ದುಪಡಿಗಳಿವೆ. ಆಸ್ತಿಯ ಹಂಚಿಕೆಯ ಕುರಿತಾಗಿ ಕಾನೂನಿನಲ್ಲಿ ವಿವಿಧ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ಕುರಿತಾಗಿ ಕಾನೂನಿನ ನ್ಯಾಯಾಲಯದಲ್ಲಿ ಸಾಕಷ್ಟು ಪ್ರಕರಣಗಳಿಗೆ ತೀರ್ಪನ್ನು ನೀಡಲಾಗಿದೆ.
ಇನ್ನು ಆಸ್ತಿಯ ಹಂಚಿಕೆಯ ಅರ್ಹತೆಯ ಬಗ್ಗೆ ಜನರಿಗೆ ವಿವಿಧ ರೀತಿಯ ಗೊಂದಲಗಳಿರುತ್ತದೆ. ಇನ್ನು ಭಾರತೀಯ ನ್ಯಾಯಾಲಯ ಈಗಾಗಲೇ ಆಸ್ತಿ ಹಂಚಿಕೆಯಲ್ಲಿ ಗಂಡು ಹೆಣ್ಣಿಗೆ ಸಮಾನ ಅಧಿಕಾರವಿದೆ ಎನ್ನುವ ಬಗ್ಗೆ ವಿವಿಧ ರೀತಿಯ ತಿದ್ದುಪಡಿಯನ್ನು ಜಾರಿಗೊಳಿಸಿದೆ.
2005 ರ ತಿದ್ದುಪಡಿಗೂ ಮುನ್ನ ಪೂರ್ವಜರ ಆಸ್ತಿಯಲ್ಲಿ (Ancestral Property) ಗಂಡು ಮಕ್ಕಳಿಗೆ ಮಾತ್ರ ಅಧಿಕಾರವಿತ್ತು. ಇನ್ನು 2005 ರ ತಿದ್ದುಪಡಿಯ ನಂತರ ಹೆಣ್ಣುಮಕ್ಕಳು ಪೂರ್ವಜರ ಆಸ್ತಿಯ ಅಧಿಕಾರವನ್ನು ಕೂಡ ಪಡೆದುಕೊಂಡಿದ್ದರು. ಇನ್ನು ಪೂರ್ವಜರ ಆಸ್ತಿಗೆ ತೆರಿಗೆ ಕಟ್ಟಬೇಕಾ ಹಾಗೂ ಎಷ್ಟು ತೆರಿಗೆ ಪಾವತಿಸಬೇಕಾಗುತ್ತದೆ ಎನ್ನುವ ಬಗ್ಗೆ ಒಂದಿಷ್ಟು ವಿವರಣೆ ತಿಳಿಯೋಣ.
ಪೂರ್ವಜರ ಆಸ್ತಿ ಎಂದರೇನು
ನಾಲ್ಕು ತಲೆಮಾರಿನ ಪುರುಷರು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಪೂರ್ವಜರ ಆಸ್ತಿ ಎನ್ನಲಾಗುತ್ತದೆ. ಆಸ್ತಿಯನ್ನು ಮುಖ್ಯವಾಗಿ ಎರಡು ರೀತಿಯಾಗಿ ವಿಂಗಡಿಸಲಾಗುತ್ತದೆ. ಸ್ವ- ಸ್ವಾದೀನ ಆಸ್ತಿ ಮತ್ತು ಪೂರ್ವಜರ ಆಸ್ತಿಯಾಗಿ ವಿಂಗಡಿಸಲಾಗುತ್ತದೆ. ನೀವೇ ಸಂಪಾದಿಸಿದ ಆಸ್ತಿಯನ್ನು ಸ್ವ- ಸ್ವಾದೀನ ಆಸ್ತಿ ಎನ್ನಲಾಗುತ್ತದೆ. ಇನ್ನು ಹಲವಾರು ತಲೆಮಾರುಗಳಿಂದ ಪಡೆದ ಆಸ್ತಿ ಪೂರ್ವಜರ ಆಸ್ತಿ ಆಗಿರುತ್ತದೆ.
ಪೂರ್ವಜರ ಆಸ್ತಿಯ ಹಂಚಿಕೆಗೆ ಯಾರು ಅರ್ಹರು
ಒಮ್ಮೆ ಪೂರ್ವಜರ ಆಸ್ತಿಯನ್ನು ವಿಭಜಿಸಿದರೆ ಅದು ಪೂರ್ವಜರ ಆಸ್ತಿಯ ಲಕ್ಷಣವನ್ನು ಹೊಂದುವುದನ್ನು ನಿಲ್ಲಿಸುತ್ತದೆ ಮತ್ತು ಅದನ್ನು ಸ್ವೀಕರಿಸಿದ ಕುಟುಂಬದ ಸದಸ್ಯರ ಕೈಯಲ್ಲಿ ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿ ಆಗುತ್ತದೆ. ಇದು ಅಂತಹ ಕುಟುಂಬದ ಸದಸ್ಯರಿಗೆ ವ್ಯವಹರಿಸಲು ಅನಿಯಂತ್ರಿತ ಹಕ್ಕನ್ನು ನೀಡುತ್ತದೆ ಮತ್ತು ಅಂತಹ ಆಸ್ತಿಯನ್ನು ವಿಲೇವಾರಿ ಮಾಡಲಾಗುತ್ತದೆ.
ಪೂರ್ವಜರ ಆಸ್ತಿಯ ಹಂಚಿಕೆಯ ಹಕ್ಕನ್ನು ಎಲ್ಲರು ಹುಟ್ಟಿನಿಂದಲೇ ಪಡೆಯುತ್ತಾರೆ. ಆಸ್ತಿಯ ಮಾಲೀಕರ ಮರಣದ ನಂತರ ಉತ್ತರಾಧಿಕಾರಿಗಳು ಪೂರ್ವಜರ ಆಸ್ತಿಯನ್ನು ಹಂಚಿಕೊಳ್ಳುತ್ತಾರೆ. ಆಸ್ತಿಯ ಮುಖ್ಯ ಮಾಲೀಕರ ಮಕ್ಕಳನ್ನು ಮೊದಲು ಎಣಿಸಲಾಗುತ್ತದೆ ಮತ್ತು ಅದರ ಆಧಾರದ ಮೇಲೆ ಆಸ್ತಿಯನ್ನು ವಿಂಗಡಿಸಲಾಗುತ್ತದೆ.
ಪಿತ್ರಾರ್ಜಿತವಾಗಿ ಪಡೆದ ಆಸ್ತಿಗೆ ತೆರಿಗೆ ಪಾವತಿಸಬೇಕಾ
ಅನುವಂಶಿಕ ತೆರಿಗೆ ಭಾರತದಲ್ಲಿ ಅನ್ವಯವಾಗುವುದಿಲ್ಲ. ಪಿತ್ರಾರ್ಜಿತವಾಗಿ ಪಡೆಯುವ ಆಸ್ತಿಗೆ, ಮಾರಾಟ ಮಾಡಲು ನಿರ್ಧಾರ ಮಾಡುವವರೆಗೂ ತೆರಿಗೆ ಪಾವತಿಸಬೇಕಿರುವುದಿಲ್ಲ. ನೀವು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯಿಂದ ಗಳಿಸಿದ ಆದಾಯ ಕ್ಯಾಪಿಟಲ್ ಗೇನ್ಸ್ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಪಿತ್ರರಹಿತವಾಗಿ ಪಡೆದ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ ನೀವು ತೆರಿಗೆ ಪಾವತಿಸಬೇಕು.
ಪಿತ್ರಾರ್ಜಿತವಾಗಿ ಪಡೆದ ಆಸ್ತಿಗೆ ಎಷ್ಟು ತೆರಿಗೆ ಪಾವತಿಸಬೇಕು
ಪಿತ್ರಾರ್ಜಿತ ಆಸ್ತಿಯ ಮೇಲೆ ನೀವು ಎಷ್ಟು ಕಾಲ ಮಾಲೀಕತ್ವವನ್ನು ಹೊಂದಿದ್ದೀರಿ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ. ಇನ್ನು 2 ವರ್ಷಕ್ಕೂ ಅಧಿಕ ಕಾಲ ಪಿತ್ರಾರ್ಜಿತ ಆಸ್ತಿ ನಿಮ್ಮ ಒಡೆತನದಲ್ಲಿದ್ದರೆ ಶೇ. 20.8 ರಷ್ಟು ತೆರಿಗೆ ಅಂದರೆ ದೀರ್ಘಕಾಲೀನ ಕ್ಯಾಪಿಟಲ್ ಗೇನ್ಸ್ ಪಾವತಿಸಬೇಕು. ಇನ್ನು 2 ವರ್ಷಕ್ಕೂ ಕಡಿಮೆ ಕಾಲ ಪಿತ್ರಾರ್ಜಿತ ಆಸ್ತಿ ನಿಮ್ಮ ಒಡೆತನದಲ್ಲಿದ್ದರೆ ಅಲ್ಪಾವಧಿ ಕ್ಯಾಪಿಟಲ್ ಗೇನ್ಸ್ ಪಾವತಿಸಬೇಕು.