Anganwadi Children: ಮಕ್ಕಳನ್ನ ಅಂಗನವಾಡಿಗೆ ಕಳುಹಿಸುವ ಪೋಷಕರಿಗೆ ಗುಡ್ ನ್ಯೂಸ್, ಇನ್ಮುಂದೆ ಮಕ್ಕಳಿಗೆ ಸಿಗಲಿದೆ ಈ ಆಹಾರ ಮತ್ತು ತಿಂಡಿ
ಅಂಗನವಾಡಿ ಮಕ್ಕಳ ಆಹಾರ ನಿಯಮದಲ್ಲಿ ಬದಲಾವಣೆ, ಸರ್ಕಾರದ ಇನ್ನೊಂದು ಯೋಜನೆ
Anganwadi Children Midday Meal: ಪ್ರತಿದಿನ 4 ರಿಂದ 5 ವರ್ಷದ ಮಕ್ಕಳು ಅಂಗನವಾಡಿಗೆ ಹೋಗುವುದನ್ನು ನಾವು ನೋಡಿದ್ದೇವೆ. ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಬಿಡುವ ಉದ್ದೇಶವೇ ಅವರು ಶಾಲೆಗೆ ಹೋಗುವುದನ್ನು ಈವಾಗಲೇ ಕಲಿಯಲಿ ಎನ್ನುವುದಾಗಿದೆ.
ಸರ್ಕಾರ ಅಂಗನವಾಡಿಗೆ ಬರುವ ಮಕ್ಕಳಿಗಾಗಿ ಈಗಾಗಲೇ ಹಲವು ಸೌಲತ್ತುಗಳನ್ನೂ ನೀಡಿದ್ದು, ಮಕ್ಕಳಿಗಾಗಿ ಅಲ್ಲಿ ಕಲಿಕೆಗೆ ಸಂಬಂಧಿಸಿದ ಹಾಗು ಆಟಿಕೆಗೆ ಸಂಬಂಧಿಸಿದ ವ್ಯವಸ್ಥೆಯನ್ನು ಮಾಡಲಾಗಿದೆ, ಅಷ್ಟೇ ಅಲ್ಲದೆ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರವನ್ನು ಸಹ ಒದಗಿಸಲಾಗುತ್ತಿದೆ. ಹಾಗೆಯೆ ಇನ್ನು ಮುಂದೆ ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಮಕ್ಕಳಿಗೆ ಹೊಸ ಆಹಾರ ಮೆನುವನ್ನು ಆರಂಭಿಸಲಾಗುತ್ತದೆ.
ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಪೌಷ್ಟಿಕ ಆಹಾರ ನೀಡಲಾಗುತ್ತಿದೆ
ಅಂಗನವಾಡಿ ಮಕ್ಕಳಲ್ಲಿ ಅಪೌಷ್ಟಿಕತೆ ನೀಗಿಸಲು ಮಕ್ಕಳಿಗೆ ನೀಡುತ್ತಿದ್ದ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದೆ. ಹೆಚ್ಚುವರಿ ಗೋಧಿ, ಸಿರಿಧಾನ್ಯ ಲಾಡು, ಹೊಸ ತಿಂಡಿ ನೀಡಲಾಗುವುದು. ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕಳೆದ ವರ್ಷವೇ ಮೆನು ಬದಲಾವಣೆ ಮಾಡಿ ಪೌಷ್ಟಿಕ ಆಹಾರ ನೀಡುವಂತೆ ಹೈಕೋರ್ಟ್ ನೀಡಿದ ಆದೇಶ ಎತ್ತಿ ಹಿಡಿದಿತ್ತು.
ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಮಕ್ಕಳಿಗೆ ಹೊಸ ಮೆನು ಪ್ರಾರಂಭ
ಅಂಗನವಾಡಿಗಳಲ್ಲಿ ಅನ್ನ ಸಾಂಬಾರ್, ಅನ್ನ ಕಿಚಿಡಿ, ಉಪ್ಪಿಟ್ಟು ನೀಡುತ್ತಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ 25 ಗ್ರಾಂ ತೂಕದ ಗೋಧಿ ಲಾಡು, ಸಿರಿ ಧಾನ್ಯದ ಲಾಡು ವಿತರಣೆ ಮಾಡಲಾಗುವುದು, ಪ್ರತಿ ಮಾನ್ಯ ಮಗುವಿಗೆ 8 ರೂಪಾಯಿ, ಅಪೌಷ್ಟಿಕ ಮಗುವಿಗೆ 12 ರೂಪಾಯಿ ವೆಚ್ಚವಾಗಲಿದೆ. ಆರು ತಿಂಗಳಿಂದ ಮೂರು ವರ್ಷದ ಮಗುವಿಗೆ ಮನೆಯಲ್ಲಿಯೇ ತಿನ್ನಿಸಲು ಅನುಕೂಲವಾಗುವಂತೆ ಬೆಲ್ಲ ರಹಿತ ಮತ್ತು ಬೆಲ್ಲ ಸಹಿತವಾಗಿ ಸಿಹಿ ತಿಂಡಿ ನೀಡಲಾಗುವುದು ಎಂದು ಹೇಳಲಾಗಿದೆ. ಈ ರೀತಿಯಾಗಿ ಇನ್ನು ಮುಂದೆ ಉತ್ತಮ ಪೌಷ್ಟಿಕ ಆಹಾರವನ್ನು ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡಲಾಗುತ್ತದೆ.