Snake Venom: ಈ 9 ಪ್ರಾಣಿಗಳು ಹಾವು ಕಚ್ಚಿದರೂ ಸಾಯುವುದಿಲ್ಲ, ಈ ಪ್ರಾಣಿಗಳಿಗೆ ಇದೆ ವಿಶೇಷ ಶಕ್ತಿ.

ಯಾವ ಯಾವ ಪ್ರಾಣಿಗಳು ಹಾವು ಕಡಿತದಿಂದ ಸಾಯುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.

Animals That Do Not Die From Snake Venom: ಹೆಚ್ಚು ವಿಷವನ್ನು ಹೊಂದಿರುವ ಪ್ರಾಣಿಯೆಂದರೆ ಅವು ಹಾವುಗಳು. ಹಾವುಗಳಲ್ಲಿ ಅನೇಕ ರೀತಿಯ ಹಾವುಗಳಿರುತ್ತದೆ. ಕೆಲ ಹಾವುಗಳಲ್ಲಿ ಮಾತ್ರ ವಿಷದ ಅಂಶ ಇರುವುದಿಲ್ಲ. ಆದರೆ ಅನೇಕ ಹಾವುಗಳು ಅತ್ಯಂತ ವಿಷಕಾರಿಯಾಗಿರುತ್ತದೆ. ಹಾವು ಕಡಿತದಿಂದ ಸಾಕಷ್ಟು ಜನರು ಸಾವನ್ನಪ್ಪುತ್ತಾರೆ. ಕೆಲವೊಂದು ಹಾವುಗಳು ಕಚ್ಚಿದರೆ ಅದಕ್ಕೆ ಔಷದಿಯ ಪರಿಹಾರವೇ ಇರುವುದಿಲ್ಲ.

ಇನ್ನು ಹಾವುಗಳು ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳ ಮೇಲು ವಿಷವನ್ನು ಕಾರುತ್ತವೆ. ಮನುಷ್ಯರು ಹಾವು ಕಚ್ಚಿದ್ದು ತಿಳಿದರೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಚೇತರಿಸಿಕೊಳ್ಳಬಹುದು. ಆದರೆ ಮೂಕ ಪ್ರಾಣಿಗಳಿಗೆ ಹಾವು ಕಚ್ಚಿದರೆ ಅವು ಬದುಕಿರುವ ಉದಾಹರಣೆಗಳೇ ಇಲ್ಲ ಎನ್ನಬಹುದು.

Sneak Venom
Image Credit: Quora

ಪ್ರಾಣಿಗಳಿಗೆ ಹಾವು ಕಚ್ಚಿದರೆ ಏನಾಗುತ್ತದೆ..?
ಹಾವು ಎಷ್ಟೊಂದು ವಿಷಕಾರಿ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ ಹೀಗಾಗಿ ಎಲ್ಲರು ಹಾವುಗಳಿಂದ ದೂರ ಇರಲು ಬಯಸುತ್ತಾರೆ. ಆದರೆ ಪ್ರಾಣಿಗಳಿಗೆ ಯಾವುದೇ ವಿಷಕಾರಿ ಯಾವುದು ವಿಷಕಾರಿ ಅಲ್ಲ ಎನ್ನುವುದರ ಬಗ್ಗೆ ಅರಿವು ಕಡಿಮೆ ಇರುತ್ತದೆ. ಕೆಲ ಪ್ರಾಣಿಗಳು ಹಾವನ್ನು ಕಂಡರೆ ಅವುಗಳ ಜೊತೆ ಹೊಡೆದಾಡಲು ಹೋಗುತ್ತದೆ.

ಹಾವುಗಳ ಜೊತೆ ಹೊಡೆದಾಡುವ ಸಮಯದಲ್ಲಿ ಹಾವುಗಳು ಯಾವುದೇ ಪ್ರಾಣಿಗಳನ್ನು ಕಚ್ಚಿದರೂ ಕೂಡ ಅವು ಪ್ರಾಣ ಕಳೆದುಕೊಳ್ಳುತ್ತದೆ. ಆದರೆ ಜಗತ್ತಿನಲ್ಲಿ ಹಾವಿನ ವಿಷಕ್ಕೂ ಸಾಯದೆ ಇರುವ ಪ್ರಾಣಿಗಳು ಕೆಲವು ಇದೆ. ಈ ಪ್ರಾಣಿಗಳು ಹಾವುಗಳ ಕಡಿತಕ್ಕೆ ಒಳಗಾದರು ಪ್ರಾಣವನ್ನು ಕಳೆದುಕೊಳ್ಳುವುದಿಲ್ಲ. ಯಾವ ಯಾವ ಪ್ರಾಣಿಗಳು ಹಾವು ಕಡಿತದಿಂದ ಸಾಯುವುದಿಲ್ಲ ಎನ್ನುವ ಬಗ್ಗೆ ವಿವರಣೆ ಇಲ್ಲಿದೆ.

Animals That Do Not Die From Snake Venom
Image Credit:A-Z-animals

ಹಾವಿನ ವಿಷಕ್ಕೆ ಸಾಯದೆ ಇರುವ 9 ಪ್ರಾಣಿಗಳಿವು
*Honey badger
*Wood rat
*California ground squirrel
*Pig
*Hedgehog
*Mongoose
*Opossums
*Skunks
*Snakes

Join Nadunudi News WhatsApp Group

Join Nadunudi News WhatsApp Group