Anna Bhagya: ಅನ್ನಭಾಗ್ಯ ಯೋಜನೆಯ ಬಗ್ಗೆ ಇನ್ನೊಂದು ಘೋಷಣೆ ಮಾಡಿದ ಸರ್ಕಾರ, BPL ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.
ಅನ್ನಭಾಗ್ಯ ಯೋಜನೆಯ ಬಗ್ಗೆ ರಾಜ್ಯ ಸರ್ಕಾರದ ಇನ್ನೊಂದು ದೊಡ್ಡ ನಿರ್ಧಾರ.
Anna Bhagya Amount: ಸದ್ಯ ರಾಜ್ಯದಲ್ಲಿ Anna Bhagya ಯೋಜನೆ ಅನುಷ್ಠಾನಗೊಂಡು ಹೆಚ್ಚಿನ ಜನರಿಗೆ ಅನುಕೂಲವನ್ನು ಮಾಡಿಕೊಟ್ಟಿದೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಘೋಷಣೆ ಹೊರಡಿಸಿತ್ತು. ಆದರೆ ರಾಜ್ಯದಲ್ಲಿ ಅಕ್ಕಿ ಸರಬರಾಜಿನ ಕೊರತೆ ಉಂಟಾದ ಕಾರಣ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯ ಬದಲಾಗಿ ಅದಕ್ಕೆ ಸರಿಹೊಂದುವ ಹಣವನ್ನು ನೀಡಲು ತೀರ್ಮಾನಿಸಿತ್ತು.
ಇನ್ನು ಕಳೆದ ಬಾರಿ ಮುಂದಿನ ತಿಂಗಳಿಂದ ಅಕ್ಕಿಯ ಬದಲಾಗಿ ನೀಡುವ ಹಣದ ಬದಲು ಬೇರೆ ವ್ಯಸ್ಥೆಯನ್ನು ಜಾರಿಗೆ ತರಲಾಗುತ್ತದೆ. October ನಿಂದ ರಾಜ್ಯದ ಜನತೆ ಅಕ್ಕಿಯ ಬದಲಾಗಿ ಹಣ ಪಡೆಯುವುದಿಲ್ಲ ಎನ್ನುವ ಬಗ್ಗೆ ಸುದ್ದಿಯಾಗಿತ್ತು. ಇದೀಗ ರಾಜ್ಯ ಸರ್ಕಾರ ಈ ತಿಂಗಳು ಹೆಚ್ಚುವರಿ ಅಕ್ಕಿ ಹಣ ಜಮಾ ಮಾಡುವ ಬಗ್ಗೆ ಮಹತ್ವದ ನಿರ್ಧಾರವನ್ನು ಹೊರಡಿಸಿದೆ. ಈ ಮೂಲಕ ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ.
5KG ಅಕ್ಕಿಯ ಬದಲಾಗಿ ಹಣ ಪಡೆಯುತ್ತಿರುವ ರಾಜ್ಯದ ಜನತೆ
ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಮಾಸಿಕ ತಲಾ 170 ರೂಪಾಯಿ ನೀಡುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿತ್ತು. ರಾಜ್ಯದ BPL Card ದಾರರು ಅಕ್ಕಿಯ ಬದಲಾಗಿ ಹಣವನ್ನು ಪಡೆಯುತ್ತಿದ್ದರು. ಇನ್ನು ರಾಜ್ಯ ಸರ್ಕಾರ ಪಡಿತರದ ಹಣದ ಬದಲು ಪೌಷ್ಟಿಕ ಆಹಾರ ವಿತರಣೆ ಮಾಡಲು ನಿರ್ಧರಿಸಿದೆ ಎಂದು ಕೃಷಿ ಸಚಿವ ಏನ್. ಚಲುವರಾಯಸ್ವಾಮಿ ಅವರು ಈ ಹಿಂದೆ ಮಾಹಿತಿ ನೀಡಿದ್ದರು.
ಪಡಿತರ ವ್ಯವಸ್ಥೆಯಲ್ಲಿ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣ ನೀಡುವ ಬದಲು ಪೂರಕ ಪೌಷ್ಟಿಕ ಆಹಾರ ನೀಡುವಂತೆ ಚಿಂತನೆ ನಡೆಸಲಾಗಿತ್ತು. ಸದ್ಯ 5 ಕೆಜಿ ಅಕ್ಕಿಯ ಹೊರತಾಗಿ ರಾಗಿ ಅಥವಾ ಜೋಳ, ಕಡಲೆಕಾಯಿ ಎಣ್ಣೆ ವಿತರಿಸುವುದಾಗಿ ಹೇಳಿದ್ದರು. ಮುಂದಿನ ತಿಂಗಳಿಂದ ರಾಜ್ಯದ ಜನತೆ 5 ಕೆಜಿ ಅಕ್ಕಿ ಹಣದ ಬದಲಾಗಿ ಪೌಷ್ಟಿಕ ಆಹಾರವನ್ನು ಪಡೆಯಲಿದ್ದಾರೆ ಎನ್ನುವ ಬಗ್ಗೆ ವರದಿಯಾಗಿತ್ತು. ಸದ್ಯ ರಾಜ್ಯ ಸರ್ಕಾರ ಹೆಚ್ಚುವರಿ ಅಕ್ಕಿ ಹಣ ಜಮಾ ಮಾಡುವ ಬಗ್ಗೆ ಮಾಹಿತಿ ನೀಡಿದೆ.
ಈ ತಿಂಗಳು ಜಮಾ ಆಗಲಿದೆ ಹೆಚ್ಚುವರಿ ಅಕ್ಕಿಯ ಹಣ
ಸದ್ಯ ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಯ ಹಣ ಜಮಾ ಆಗುತ್ತದೆಯೋ ಇಲ್ಲವೋ ಎನ್ನುವ ಬಗ್ಗೆ ಅರ್ಹ ಫಲಾನುಭವಿಗಳು ಚಿಂತಿಸುತ್ತಿದ್ದರು. ಸದ್ಯ ರಾಜ್ಯ ಸರ್ಕಾರ ಈ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ. ಈ ತಿಂಗಳಿನಲ್ಲಿ ಕೂಡ 5KG ಅಕ್ಕಿ ಹಾಗೂ 5KG ಅಕ್ಕಿಯ ಬದಲಾಗಿ ಕೆಜಿಗೆ 34 ರೂ. ಗಳಂತೆ 170 ರೂ. ಗಳನ್ನೂ ಅರ್ಹ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಜಮಾ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ತಿಂಗಳು ಕೂಡ ರಾಜ್ಯದ ಜನತೆಗೆ ಹೆಚ್ಚುವರಿ ಅಕ್ಕಿಯ ಹಣವನ್ನು ಪಡೆಯಬಹುದಾಗಿದೆ.