Anna Bhagya Rice: ಅನ್ನಭಾಗ್ಯ ಯೋಜನೆಯಲ್ಲಿ ಬಹುದೊಡ್ಡ ಬದಲಾವಣೆ, ಇನ್ನೊಂದು ಘೋಷಣೆ ಮಾಡಿದ ಸಿದ್ದರಾಮಯ್ಯ.
ಇನ್ನುಮುಂದೆ ರಾಜ್ಯದ ಜನತೆಗೆ ಅನ್ನಭಾಗ್ಯ ಡೋರ್ ಡೆಲಿವರಿ ಸರ್ವಿಸ್.
Anna Bhagya Door Delivery Service: ಸದ್ಯ ರಾಜ್ಯದಲ್ಲಿ Anna Bhagya Scheme ಅನುಷ್ಠಾನಗೊಂಡು ಹೆಚ್ಚಿನ ಜನರಿಗೆ ಅನುಕೂಲವನ್ನು ಮಾಡಿಕೊಟ್ಟಿದೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಘೋಷಣೆ ಹೊರಡಿಸಿತ್ತು.
ಆದರೆ ರಾಜ್ಯದಲ್ಲಿ ಅಕ್ಕಿ ಸರಬರಾಜಿನ ಕೊರತೆ ಉಂಟಾದ ಕಾರಣ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯ ಬದಲಾಗಿ ಅದಕ್ಕೆ ಸರಿಹೊಂದುವ ಹಣವನ್ನು ನೀಡಲು ತೀರ್ಮಾನಿಸಿತ್ತು.
5KG ಅಕ್ಕಿಯ ಬದಲಾಗಿ ಹಣ ಪಡೆಯುತ್ತಿರುವ ರಾಜ್ಯದ ಜನತೆ
ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಮಾಸಿಕ ತಲಾ 170 ರೂಪಾಯಿ ನೀಡುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿತ್ತು. ರಾಜ್ಯದ BPL Card ದಾರರು ಅಕ್ಕಿಯ ಬದಲಾಗಿ ಹಣವನ್ನು ಪಡೆಯುತ್ತಿದ್ದರು. ರಾಜ್ಯದಲ್ಲಿ ಯಾರೋಬ್ಬರೂ ಹಸಿವಿನಿಂದ ಇರಬಾರದು ಎಂದು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ ಯೋಜನೆ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಮತ್ತೊಂದು ಅನುಕೂಲಕರವಾದ ವ್ಯವಸ್ಥೆಯನ್ನು ಜನರಿಗೆ ಪರಿಚಯಿಸಲು ಮುಂದಾಗಿದ್ದಾರೆ.
ಇನ್ನುಮುಂದೆ ರಾಜ್ಯದ ಜನತೆಗೆ ಅನ್ನಭಾಗ್ಯ ಡೋರ್ ಡೆಲಿವರಿ ಸರ್ವಿಸ್
5 ಕೆಜಿ ಅಕ್ಕಿ ಬದಲು ದುಡ್ಡು ಹಾಕುವ ಅನ್ನಭಾಗ್ಯ ಹಣದ ಯೋಜನೆ ಈ ತಿಂಗಳು ಮುಂದುವರೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಹೊಸ ಉಡುಗೊರೆ ನೀಡಲು ಮುಂದಾಗಿದೆ. ಅದೇನೆಂದರೆ ಅನ್ನಭಾಗ್ಯ ಡೋರ್ ಡೆಲಿವರಿ ಸರ್ವಿಸ್. ಅಂದರೆ ಪಡಿತರ ಚೀಟಿದಾರರಿಗೆ ಮನೆ ಬಾಗಿಲಿಗೆ ಅನ್ನಭಾಗ್ಯದ ಅಕ್ಕಿ ಹಾಗೂ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಇತರ ಸೌಲಭ್ಯವನ್ನು ತಲುಪಿಸುವ ಕೆಲಸ. ಇದನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ.
ಕೆಲವು ಜನರಿಗೆ ಮಾತ್ರ ಈ ಸೇವೆ ಲಭ್ಯವಾಗಲಿದೆ
ಅನ್ನಭಾಗ್ಯ ಡೋರ್ ಡೆಲಿವರಿ ಸೇವೆ ಎಲ್ಲರಿಗೂ ಲಭ್ಯವಾಗುದಿಲ್ಲ. ಬದಲಾಗಿ 60 ವರ್ಷ ಮೇಲ್ಪಟ್ಟ ಬಿಪಿಎಲ್ ಪಡಿತರ ಚೀಟಿ ಇರುವವರಿಗೆ ಹಾಗೂ ಒಂದು ಮನೆಯಲ್ಲಿ ಒಬ್ಬರೇ ಇದ್ದರೆ ಅಂದರೆ ಪಡಿತರ ಚೀಟಿ ಪ್ರಕಾರ ಒಬ್ಬರೇ ಸದಸ್ಯರಾಗಿದ್ದರೆ ಅಂತವರ ಮನೆ ಬಾಗಿಲಿಗೆ ಅನ್ನಭಾಗ್ಯದ ಅಕ್ಕಿ ಹಾಗೂ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಇತರ ಸೌಲಭ್ಯವನ್ನು ತಲುಪಿಸಲಾಗುತ್ತದೆ. ರಾಜ್ಯಾದ್ಯಂತ ಕೆಲವೇ ದಿನದಲ್ಲಿ ಈ ಯೋಜನೆಗೆ ಚಾಲನೆ ಸಿಗಲಿದೆ.