Anna Bhagya : ಈ ಕುಟುಂಬಗಳಿಗೆ ಈ ತಿಂಗಳಿಂದ ಅನ್ನಭಾಗ್ಯ ಹಣ ಸಿಗಲ್ಲ, ಅನ್ನಭಾಗ್ಯ ಹಣ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್

ಇಂತಹ ಕುಟುಂಬಗಳಿಗೆ ಸಿಗುವ ಅನ್ನಭಾಗ್ಯ ಯೋಜನೆಯ ಹಣ ನಿಲ್ಲಿಸಲು ಸರ್ಕಾರದ ನಿರ್ಧಾರ

Anna Bhagya KYC Latest Update: ಕರ್ನಾಟಕದಲ್ಲಿ ಅನ್ನಭಾಗ್ಯ (Anna Bhagya) ಯೋಜನೆಯಡಿ ಪ್ರತಿ ತಿಂಗಳು 05 ಕೆಜಿ ಅಕ್ಕಿಯ ಬದಲಾಗಿ, ಪಡಿತರ ಹೊಂದಿರುವ ಕುಟುಂಬದ ಯಜಮಾನರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಈ ಯೋಜನೆ ಪ್ರಾರಂಭ ಆಗಿ ಹಲವು ತಿಂಗಳಾಗಿದ್ದು,

ಅರ್ಹ BPL ಪಡಿತರ ಹೊಂದಿರುವ ಬಡ ಕುಟುಂಬಗಳಿಗೆ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲು ಹಣ ಸಹಾಯ ಮಾಡುತ್ತಿದೆ. ಅಕ್ಕಿಯ ಪೂರೈಕೆಯ ಕೊರತೆ ಇರುವುದರಿಂದ ಯಜಮಾನರ ಖಾತೆಗೆ ಹಣ ಜಮೆ ಮಾಡಲಾಗುತ್ತಿದ್ದು, ಇನ್ನುಮುಂದೆ ಈ ಯೋಜನೆಯ ಹಣ ಸಿಗಬೇಕೆಂದರೆ ಕಡ್ಡಾಯವಾಗಿ ಈ ಕೆಲಸವನ್ನು ಮಾಡಬೇಕಾಗಿದೆ.

Anna Bhagya KYC Latest Update
Image Credit: Original Source

ಅನ್ನಭಾಗ್ಯ ಯೋಜನೆಯ ಹಣ ಪಡೆಯಲು ಆಧಾರ ಕಾರ್ಡ್ ಲಿಂಕ್ ಕಡ್ಡಾಯ

ಇತೀಚಿನ ದಿನಗಳಲ್ಲಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ. ಆದ್ರೆ ಹೆಚ್ಚಿನವರು ಈ ಕುರಿತು ನಿರ್ಲಕ್ಷ ಮಾಡುತ್ತಿದ್ದು, ಅಂತವರಿಗೆ ಇನ್ನು ಮುಂದೆ ಯಾವುದೇ ಯೋಜನೆಯ ಸೌಲಭ್ಯ ದೊರೆಯುವುದಿಲ್ಲ. ಹಾಗೆಯೆ ಅನ್ನಭಾಗ್ಯ ಯೋಜನೆಯ ಹಣ ಕುಟುಂಬಗಳಿಗೆ ದೊರೆಯಬೇಕಂದರೆ ತಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕೆಂದು ಸರ್ಕಾರ ಕಡ್ಡಾಯಗೊಳಿಸಿದ್ದು, ಲಿಂಕ್ ಮಾಡದ ಕುಟುಂಬಗಳಿಗೆ ಅನ್ನಭಾಗ್ಯ ಹಣ ದೊರೆಯದು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಜಂಟಿ ಇಲಾಖೆಯ ನಿರ್ದೇಶಕರಾದ ಮೊಹಮ್ಮದ್ ಖೈಜರ್ ಅವರು ತಿಳಿಸಿದ್ದಾರೆ.

Anna Bhagya Scheme New Update
Image Credit: Gizbot

ಆಧಾರ್ ಲಿಂಕ್ ಹಾಗು ಪಡಿತರ ದೋಷಗಳನ್ನು ಸರಿಪಡಿಸಿಕೊಳ್ಳತಕ್ಕದ್ದು

Join Nadunudi News WhatsApp Group

ಅಂತ್ಯೋದಯ ಹಾಗು BPL ಪಡಿತರ ಚೀಟಿ ಹೊಂದಿರುವವರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳತಕದ್ದಾಗಿದೆ. ಅಷ್ಟೇ ಅಲ್ಲದೇ ತಮ್ಮ ಪಡಿತರ ಚೀಟಿಯಲ್ಲಿ ಏನಾದರೂ ದೋಷಗಳಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಯಾಕೆಂದರೆ ನಿಮ್ಮ ಪಡಿತರ ಚೀಟಿಯಲ್ಲಿ ಅಥವಾ ಬ್ಯಾಂಕ್ ಖಾತೆಯಲ್ಲಿ ಏನಾದರೂ ದೋಷ ಇದ್ದರೇ ನಿಮ್ಮ ಖಾತೆಗೆ ಅನ್ನಭಾಗ್ಯ ಹಣ ಬರುವುದಿಲ್ಲ.

ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರ ಹೆಸರು ಇರುವುದು ಅಥವಾ ಮುಖ್ಯಸ್ಥರ ಹೆಸರು ಇಲ್ಲದಿರುವುದು, ಆಧಾರ್ ಕಾರ್ಡ್ ಸಂಖ್ಯೆ ತಪ್ಪಾಗಿ ನಮೂದಾಗಿರುವುದು, ಬ್ಯಾಂಕ್ e-KYC ಮಾಡದಿರುವುದು, ಅಥವಾ ಕಳೆದ ಮೂರೂ ನಾಲ್ಕು ತಿಂಗಳಿಂದ ಪಡಿತರ ಪಡೆಯದೇ ಇರುವವರ ಖಾತೆಗೆ ಅನ್ನಭಾಗ್ಯ ಹಣ ವರ್ಗಾವಣೆ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಹಾಗಾಗಿ ಇಂತಹ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸರ್ಕಾರದ ಸೌಲಭ್ಯ ಪಡೆದುಕೊಳ್ಳಿ.

Join Nadunudi News WhatsApp Group