Anna Bhagya: ಮೇ ತಿಂಗಳ ಅನ್ನಭಾಗ್ಯ ಇನ್ನೂ ಬಂದಿಲ್ವಾ…? ತಕ್ಷಣ ಈ ಕೆಲಸ ಮಾಡಿ

ಅನ್ನ ಭಾಗ್ಯ ಹಣ ಬರದೇ ಇದ್ರೆ ತಕ್ಷಣ ಈ ಕೆಲಸ ಮಾಡಿ

Anna Bhagya Latest Update: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪರಿಚಯಿಸಿರುವ ಐದು ಉಚಿತ ಗ್ಯಾರಂಟಿ ಯೋಜನೆಗಳು ಜನರಿಗೆ ಲಭ್ಯವಾಗುತ್ತಿದೆ. ಅರ್ಹ ಫಲಾನುಭವಿಗಳು ಐದು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ.

ಇನ್ನು ಉಚಿತ ಯೋಜನೆಗಳು ಅನುಷ್ಠಾನಗೊಂಡು ಹಲವು ತಿಂಗಳು ಕಳೆದರು ಕೂಡ ಎಲ್ಲ ಯೋಜನೆಗಳ ಸಂಪೂರ್ಣ ಲಾಭ ಎಲ್ಲ ಅರ್ಹರಿಗೂ ಲಭ್ಯವಾಗುತ್ತಿಲ್ಲ ಎನ್ನಬಹುದು. ಈ ಕಾರಣಕ್ಕೆ ಸರ್ಕಾರ ಯೋಜನೆಗಳಿಗೆ ಸಂಬಂಧಿಸಿದಂತೆ ಆಗಾಗ ಹೊಸ ಹೊಸ ಅಪ್ಡೇಟ್ ನೀಡುತ್ತಿರುತ್ತದೆ. ಸದ್ಯ ರಾಜ್ಯದ ಜನತೆಗೆ ಉಚಿತ ಪಡಿತರನ್ನು ನೀಡುತ್ತಿರುವ ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.

Anna Bhagya Latest Update
Image Credit: Business-Standard

ಮೇ ತಿಂಗಳ ಅನ್ನಭಾಗ್ಯ ಇನ್ನೂ ಬಂದಿಲ್ವಾ…?
ಸದ್ಯ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 5KG ಅಕ್ಕಿ ಹಾಗೂ 5KG ಅಕ್ಕಿಯ ಬದಲಾಗಿ ಕೆಜಿಗೆ 34 ರೂ. ಗಳಂತೆ 174 ರೂ. ಗಳನ್ನೂ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಅನ್ನ ಭಾಗ್ಯ ಯೋಜನೆ ಅನುಷ್ಠಾನಗೊಂಡ ಸಮಯದಿಂದ ಅರ್ಹ ಫಲಾನುಭವಿಗಳು ಅನ್ನ ಭಾಗ್ಯ ಯೋಜನೆಯಡಿ 5KH ಉಚಿತ ಅಕ್ಕಿ ಹಾಗೂ 5KG ಅಕ್ಕಿಯ ಬದಲಾಗಿ ಹಣವನ್ನು ಪಡೆಯುತ್ತಿದ್ದಾರೆ.

ಅನ್ನ ಭಾಗ್ಯ ಯೋಜನೆಯ ಹಣವು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಸದ್ಯ ಈ ಯೋಜನೆಗೆ ಸಂಬಂಧಿಸಿದಂತೆ ಹೊಸ ಸಮಸ್ಯೆ ಶುರುವಾಗಿದೆ. ಕೆಲ ಅರ್ಹರ ಖಾತೆಗೆ ಕಳೆದ ಕೆಲವು ತಿಂಗಳಿಂದ ಹಣ ಜಮಾ ಆಗದೆ ಇರುವ ಬಗ್ಗೆ ದೂರು ಕೇಳಿಬರುತ್ತಿದೆ. ಹೀಗಾಗಿ ಫಲಾನುಭವಿಗಳು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳಲು ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.

Join Nadunudi News WhatsApp Group

Anna Bhagya Money
Image Credit: Hindustan Times

ಅನ್ನ ಭಾಗ್ಯ ಹಣ ಬರದೇ ಇದ್ರೆ ತಕ್ಷಣ ಈ ಕೆಲಸ ಮಾಡಿ
• ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಅನ್ನು ನವೀಕರಿಸಿ.

• ಪಡಿತರ ಚಿತೆ KYC ಅಪ್ಡೇಟ್ ಮಾಡಿಕೊಳ್ಳಬೇಕು.

• ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಯ  KYC ಅಪ್ಡೇಟ್ ಅಗತ್ಯ.

• ಪಡಿತರ ಚೀಟಿಯನ್ನು ನವೀಕರಿಸುವುದು ಅಗತ್ಯ.

Anna Bhagya Scheme Apply
Image Credit: India News

Join Nadunudi News WhatsApp Group