Anna Bhagya: ಇಂತಹ ಜನರ ಖಾತೆಗೆ ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಹಣ ಜಮಾ ಆಗಲಿಲ್ಲ, ತಕ್ಷಣ ಈ ಕೆಲಸ ಮಾಡಿ.

ಸರ್ಕಾರ ಅನ್ನ ಭಾಗ್ಯ ಯೋಜನೆಯ ಹಣ ಖಾತೆಗೆ ಜಮಾ ಆಗದೆ ಇರುವವರಿಗೆ ಮಹತ್ವದ ಮಾಹಿತಿ ನೀಡಿದೆ.

Anna Bhagya Latest Update: ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ Anna Bhagya ಯೋಜನೆಯಡಿ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಘೋಷಣೆ ಹೊರಡಿಸಿತ್ತು. ಆದರೆ ರಾಜ್ಯದಲ್ಲಿ ಅಕ್ಕಿ ಸರಬರಾಜಿನ ಕೊರತೆ ಉಂಟಾದ ಕಾರಣ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯ ಬದಲಾಗಿ ಅದಕ್ಕೆ ಸರಿಹೊಂದುವ ಹಣವನ್ನು ನೀಡಲು ತೀರ್ಮಾನಿಸಿತ್ತು.

ಇನ್ನು ಕಳೆದ ಬಾರಿ ಮುಂದಿನ ತಿಂಗಳಿಂದ ಅಕ್ಕಿಯ ಬದಲಾಗಿ ನೀಡುವ ಹಣದ ಬದಲು ಬೇರೆ ವ್ಯಸ್ಥೆಯನ್ನು ಜಾರಿಗೆ ತರಲಾಗುತ್ತದೆ. October ನಿಂದ ರಾಜ್ಯದ ಜನತೆ ಅಕ್ಕಿಯ ಬದಲಾಗಿ ಹಣ ಪಡೆಯುವುದಿಲ್ಲ ಎನ್ನುವ ಬಗ್ಗೆ ಸುದ್ದಿಯಾಗಿತ್ತು. ಆದರೆ ರಾಜ್ಯ ಸರ್ಕಾರ ಈ ತಿಂಗಳು ಹೆಚ್ಚುವರಿ ಅಕ್ಕಿ ಹಣ ಜಮಾ ಮಾಡುವ ಘೋಷಣೆ ಹೊರಡಿಸಿದೆ. ಈ ಮೂಲಕ ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ.

Anna Bhagya Latest Update
Image Credit: Hindustantimes

Septembar ನಲ್ಲಿ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣ ಜಮಾ
ಇನ್ನು Septembar ನಲ್ಲಿ ಅರ್ಹ ಫಲಾನುಭವಿಗಳ ಖಾತೆಗೆ ಹೆಚ್ಚುವರಿಯ ಅಕ್ಕಿಯ ಬದಲಾಗಿ ಕೆಜಿಗೆ 34 ರೂ. ಗಳಂತೆ 170 ರೂ. ಗಳನ್ನೂ ಡಿಬಿಟಿ ಮೂಲಕ ಸರ್ಕಾರ ಜಮಾ ಮಾಡಿದೆ. ಆದರೆ Septembar ತಿಂಗಳಿನಲ್ಲಿ ಸರ್ಕಾರ ಹಣವನ್ನು ಖಾತೆಗೆ ಜಮಾ ಮಾಡಿದ್ದರು ಕೂಡ ಕೆಲ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿಲ್ಲ.

ಅನ್ನ ಭಾಗ್ಯ ಯೋಜನೆಯ ಹಣ ಏಕೆ ಜಮಾ ಆಗಿಲ್ಲ? ಎನ್ನುವುದು ಅರ್ಹ ಫಲಾನುಭವಿಗಳ ಪ್ರಶ್ನೆಯಾಗಿದೆ. ಇದೀಗ ಸರ್ಕಾರ ಅನ್ನ ಭಾಗ್ಯ ಯೋಜನೆಯ ಹಣ ಖಾತೆಗೆ ಜಮಾ ಆಗದೆ ಇರುವವರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. Septembar ತಿಂಗಳ ಅನ್ನ ಭಾಗ್ಯ ಯೋಜನೆಯ ಹಣ ಖಾತೆಗೆ ಜಮಾ ಆಗಬೇಕಿದ್ದರೆ ನೀವು ಈ ಕೂಡಲೇ ಈ ಕೆಲಸವನ್ನು ಮಾಡಬೇಕಿದೆ.

Anna Bhagya Money Latest Update
Image Credit: Hosakannada

ಈ ಕೆಲಸ ಮಾಡಿದರೆ ಖಾತೆಗೆ ಜಮಾ ಆಗಲಿದೆ Septembar ತಿಂಗಳ ಹಣ
ಸದ್ಯ ಅನ್ನ ಭಾಗ್ಯ ಯೋಜನೆಯ್ದಿ 5KG ಅಕ್ಕಿ ಹೆಚ್ಚುವರಿಯಾಗಿ ಪಡೆಯಲು E -KYC Update ಕಡ್ಡಾಯವಾಗಿದೆ. ನಿಮ್ಮ ಬಳಿ ಇರುವ Ration Card ಗೆ Aadhaar ಸಂಖ್ಯೆಯನ್ನು ಲಿಂಕ್ ಮಾಡುವುದು ಅಗತ್ಯವಾಗಿದೆ. ಇದರ ಜೊತೆಗೆ ನಿಮ್ಮ Bank Account ಗೆ Aadhaar ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಎರಡು ಕೆಲಸಗಳು ಪೂರ್ಣಗೊಳಿಸಿದರೆ Septembar ತಿಂಗಳ ಹಣ ನಿಮ್ಮ ಖಾತೆಗೆ ಜಮಾ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Join Nadunudi News WhatsApp Group

ಅನ್ನಭಾಗ್ಯ ಹಣ ಖಾತೆಗೆ ಜಮಾ ಆಗಿರುವ ಬಗ್ಗೆ ಪರಿಶೀಲಿಸಿಕೊಳ್ಳುವ ವಿಧಾನ
*ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.kar.nic.in/ ಭೇಟಿ ನೀಡುವ ಮೂಲಕ ಅನ್ನಭಾಗ್ಯ ಹಣ ಖಾತೆಗೆ ಜಮಾ ಆಗಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದು.

Anna Bhagya Update
Image Credit: Newsnext

*ವೆಬ್ ಸೈಟ್ ಭೇಟಿ ನೀಡಿದ ಬಳಿಕ ಅಲ್ಲಿ ಇ- ಸೇವೆಗಳು ಆಯ್ಕೆಯ ಮೇಲೇ ಕ್ಲಿಕ್ ಮಾಡಿ. ಅಥವಾ https://ahara.kar.nic.in/Home/EServices ಲಿಂಕ್ ಕ್ಲಿಕ್ ಮಾಡಿ.

*ಅಲ್ಲಿ ನಿಮ್ಮ ಜಿಲ್ಲೆಯ ಹೆಸರುಗಳನ್ನೂ ಪ್ರಕಟಿಸಲಾಗುತ್ತದೆ. ನಿಮ್ಮ ಜಿಲ್ಲೆಯ ಆಯ್ಕೆಯ ಬಳಿಕ ಪಡಿತರ ಚೀಟಿ ಸಂಖ್ಯೆ ಸೇರಿದಂತಯೇ ಅಲ್ಲಿ ಕೇಳಲಾದ ಮಾಹಿತಿಯನ್ನು ನೀಡಿದರೆ ನೀವು ಸುಲಭವಾಗಿ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

Join Nadunudi News WhatsApp Group