Ration Food: BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಈ ತಿಂಗಳು ಸಿಗಲಿದೆ ಈ ಎಲ್ಲಾ ವಸ್ತು.

BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್

Anna Bhagya Scheme Latest Update: ರಾಜ್ಯದಲ್ಲಿ ಈಗ ಹಲವು ಯೋಜನೆಗಳು ಜಾರಿಯಲ್ಲಿದೆ ಅದರಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆ (Anna Bhagya Scheme) ಕೂಡ ಒಂದಾಗಿದೆ. ಈ ಯೋಜನೆಯಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಕೆಜಿ ಅಕ್ಕಿ ಹಾಗೂ ಐದು ಕೆಜಿ ಅಕ್ಕಿಯ ಬದಲಾಗಿ ಕುಟುಂಬದ ಯಜಮಾನರ ಖಾತೆಗೆ ಹಣ ಜಮೆ ಮಾಡುತ್ತಿದೆ.

ಈ ಯೋಜನೆ ಪ್ರಾರಂಭ ಆಗಿ ಹಲವು ತಿಂಗಳುಗಳು ಕಳೆದಿದ್ದು, ಈಗಾಗಲೇ ಹಲವು ಕುಟುಂಬಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ಆದರೆ ಹಲವರ ಖಾತೆಗೆ ಯೋಜನೆಯ ಲಾಭ ತಲುಪಿಲ್ಲ. ಈ ಕಾರಣಕ್ಕಾಗಿ ಅರ್ಹರಿಗೆ ಹಣ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಆದಾಗ್ಯೂ, ತಿಂಗಳವರು ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಉಚಿತ ಪಡಿತರು ಹಾಗೂ ಹಣವನ್ನು ಜಮಾ ಮಾಡುತ್ತಿದೆ. ಸದ್ಯ BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಹೊರಬಿದ್ದಿದೆ.

Anna Bhagya Scheme Latest Update
Image Credit: The South First

BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್
ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯ 5KG ಅಕ್ಕಿ ಹಾಗೂ 5KG ಉಚಿತ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ. ಸದ್ಯ ರಾಜ್ಯ ಸರ್ಕಾರ ಜೂನ್ ತಿಂಗಳ ಉಚಿತ ಪಡಿತರನ್ನು ಹಾಗು ಅನ್ನ ಭಾಗ್ಯ ಹಣವನ್ನು ಕೂಡ ಜಮಾ ಮಾಡಿದೆ. ಈಗಾಗಲೇ ಸರ್ಕಾರ ಹಲವು ಬಾರಿ ಆಧಾರ್ ಹಾಗು ರೇಷನ್ ಕಾರ್ಡ್ ಲಿಂಕ್ ಬಗ್ಗೆ ಮಾಹಿತಿ ನೀಡಿದೆ, ಆದರೂ ಸಹ ಕೆಲವರು ಈ ಕೆಲಸವನ್ನು ಮಾಡಿಲ್ಲ.

ಬ್ಯಾಂಕ್ ಖಾತೆಯ E-KYC ಬಹಳ ಮುಖ್ಯ ಆಗಿದ್ದು ಪ್ರತಿಯೊಬ್ಬರು ಈ ಕೆಲಸವನ್ನು ಮಾಡಿಕೊಳ್ಳಿ, ಇಲ್ಲ ಅಂತಾದರೆ ನಿಮಗೆ ಅನ್ನಭಾಗ್ಯ ಹಣ ಜಮಾ ಆಗುದಿಲ್ಲ. ಎಲ್ಲ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಿರುವ ಫಲಾನುಭವಿಗಳ ಖಾತೆಗೆ ಜೂನ್ ತಿಂಗಳ ಪಡಿತರ ಲಭ್ಯವಾಗಲಿದೆ. ಹಾಗೆಯೆ ಉಚಿತ ಪಡಿತರ ಜೊತೆಗೆ BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಈ ಎಲ್ಲ ವಸ್ತುಗಳು ಉಚಿತವಾಗಿ ಸಿಗಲಿದೆ.

ಈ ತಿಂಗಳು ಸಿಗಲಿದೆ ಈ ಎಲ್ಲಾ ವಸ್ತು
•ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗೆ 14 ಕೆಜಿ ಜೋಳ.

Join Nadunudi News WhatsApp Group

•ಪಿಎಚ್‌ಬಿ ಫಲಾನುಭವಿಗಳಿಗೆ 2 ಕೆಜಿ ಜೋಳ.

•ಎಎವೈ ಪಡಿತರ ಚೀಟಿಗೆ 21 ಕೆಜಿ ಅಕ್ಕಿ.

•ಪಿಎಚ್‌ಎಚ್ ಫಲಾನುಭವಿಗಳಿಗೆ 3 ಕೆಜಿ ಅಕ್ಕಿ.

Anna Bhagya Scheme 2024
Image Credit: cnciexam

Join Nadunudi News WhatsApp Group