Anna Bhagya: ಅನ್ನಭಾಗ್ಯ 5 ನೇ ಕಂತಿನ ಹಣ ಜಮಾ ಮಾಡಿದ ಸರ್ಕಾರ, ನಿಮಗೂ ಬಂದಿದೆಯಾ ಎಂದು ಹೀಗೆ ಚೆಕ್ ಮಾಡಿ

ಅನ್ನಭಾಗ್ಯ ಯೋಜನೆಯ 5 ನೇ ಕಂತಿನ ಹಣ ಬಿಡುಗಡೆ, ಈ ರೀತಿ ಚೆಕ್ ಮಾಡಿಕೊಳ್ಳಿ

Anna Bhagya Scheme 5th Instalment: ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಹಲವು ಬಡ ಕುಟುಂಬಗಳಿಗೆ ಬಹಳ ಸಹಾಯಕ ಆಗಿದೆ. ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಹಾಗು ಅಂತ್ಯೋದಯ ಪಡಿತರ ಚೀಟಿ ಇರುವ ಕುಟುಂಬಗಳಿಗೆ 5 ಕೆಜಿ ಅಕ್ಕಿಯ ಬದಲು ಅವರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.

ರಾಜ್ಯ ಸರ್ಕಾರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನು ಇಲ್ಲದೇ ಇರುವ ಕಾರಣ ಅಕ್ಕಿ ಬದಲು ಹಣ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅಕ್ಕಿಯ ಸೌಲಭ್ಯ ಒದಗಿಸಲಾಗುವುದೆಂದು ಸರ್ಕಾರ ತಿಳಿಸಿದೆ. ಸದ್ಯ ಅನ್ನಭಾಗ್ಯ ಯೋಜನೆಯ 5 ನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗಿದ್ದು ಜನರ ಖಾತೆಗೆ ವರ್ಗಾವಣೆ ಆಗಿರುವುದರ ಬಗ್ಗೆ ಸರ್ಕಾರದಿಂದ ಮಾಹಿತಿ ಬಂದಿದೆ. ಹೌದು ಅನ್ನಭಾಗ್ಯ ಯೋಜನೆಯ 5 ನೇ ಕಂತಿನ ಹಣ ಬಿಡುಗಡೆ ಆಗಿದ್ದು ಜನರು ಈ ರೀತಿಯಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

Anna Bhagya Scheme 5th Installment
Image Credit: News Next Live

ಅನ್ನಭಾಗ್ಯ ಯೋಜನೆಯ ಬಗ್ಗೆ ಮಾಹಿತಿ

ಅನ್ನಭಾಗ್ಯ ಯೋಜನೆಯಡಿ ಪಡಿತರ ಹೊಂದಿರುವ ಬಡ ಕುಟುಂಬಗಳು ಈಗಾಗಲೇ ಪ್ರತಿ ತಿಂಗಳು 5 ಕೆಜಿ ಅಕ್ಕಿಯ ಬದಲು ಹಣ ಪಡೆಯುತ್ತಿದ್ದು ಇನ್ನು ಮುಂದೆ ಈ ಯೋಜನೆಯ ಹಣವನ್ನು ಪ್ರತಿ ತಿಂಗಳ 20ನೇ ತಾರೀಕಿನ ಒಳಗಡೆ ಕುಟುಂಬದ ಯಜಮಾನರ ಖಾತೆಗೆ ಜಮೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇನ್ನು ಅನ್ನಭಾಗ್ಯ ಹಣ ಬಂದಿದೀಯ ಎಂದು ತಿಳಿಯಲು ಪಡಿತರ ಕಾರ್ಡ್ ಒಂದಿದ್ದರೆ ಸಾಕು ಎನ್ನಲಾಗಿದೆ.

Anna Bhagya Scheme Amount
Image Credit: Deccanherald

ಅನ್ನಭಾಗ್ಯ ಹಣ ಬಂದಿರುವ ಕುರಿತು ಚೆಕ್ ಮಾಡುವ ವಿಧಾನ

Join Nadunudi News WhatsApp Group

ರೇಷನ್ ಕಾರ್ಡ್ ಮೂಲಕ ಅನ್ನಭಾಗ್ಯ ಹಣ ಬಂದಿದೀಯ ಎಂದು ತಿಳಿದುಕೊಳ್ಳಬಹುದಾಗಿದೆ. ಮೊದಲು https://ahara.kar.nic.in/lpg/ಲಿಂಕ್ ಮೇಲೆ ಕ್ಲಿಕ್ ಮಾಡಬೇಕು, ನಂತರ ನಿಮಗೆ ಮೂರೂ ಲಿಂಕ್ ಗಳು ಕಾಣುತ್ತದೆ. ಅವುಗಳ ಕೆಳಗೆ ಇರುವ ಜಿಲ್ಲೆಯನ್ನು ಆಯ್ಕೆ ಮಾಡಿ. ತದನಂತರ ನಿಮ್ಮ ಜಿಲ್ಲೆಯ ಮೇಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ, ಈಗ ಹೊಸ ಪುಟ ತೆರೆದುಕೊಳ್ಳುತ್ತದೆ.

ಈಗ ವರ್ಷ, ತಿಂಗಳು, ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿ ಕ್ಯಾಪ್ಚ್ಯಾ ಸಂಖ್ಯೆಯನ್ನು ನಮೂದಿಸಿ , ಈಗ ನಿಮ್ಮ ಬ್ಯಾಂಕ್ ಖಾತೆ ವಿವರ, ನಿಮ್ಮ ಪಡಿತರ ಚೀಟಿಯಲ್ಲಿರುವ ಸದಸ್ಯರ ವಿವರ, ಎಷ್ಟು ಹಣ ಜಮೆ ಆಗಿದೆ ಎನ್ನುವ ಸಂಪೂರ್ಣ ವಿವರ ಕಾಣಿಸುತ್ತದೆ. ಒಂದು ವೇಳೆ ಪ್ರೊಸೆಸಿಂಗ್ ಎಂಬ ಸಂದೇಶ ಕಂಡು ಬಂದರೆ, ನಿಮ್ಮ ಖಾತೆಗೆ ಸಧ್ಯದಲ್ಲೇ ಹಣ ಸಂದಾಯ ಆಗಲಿದೆ ಎಂಬ ಅರ್ಥ ಆಗಿರುತ್ತದೆ.

Join Nadunudi News WhatsApp Group