Anna Bhagya: ಅನ್ನಭಾಗ್ಯ ಯೋಜನೆಯ ಈ ತಿಂಗಳ ಹಣ ಬಿಡುಗಡೆ, ನಿಮಗೂ ಬಂದಿದೆಯಾ ಎಂದು ಈ ರೀತಿ ಸ್ಟೇಟಸ್ ಚೆಕ್ ಮಾಡಿ

ಅನ್ನಭಾಗ್ಯ ಹಣ ನಿಮ್ಮ ಖಾತೆಗೆ ಹಣ ಜಮೆ ಆಗಿದೆಯಾ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ

Anna Bhagya Scheme Amount Status Check: ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ (Anna Bhagya Yojana) ಪ್ರಾರಂಭ ಆಗಿ ಆರು ತಿಂಗಳುಗಳು ಕಳೆದಿದೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರಕಾರ ಐದು ಕೆಜಿ ಅಕ್ಕಿಯ ಬದಲಾಗಿ ಕುಟುಂಬದ ಯಜಮಾನರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.

ಈಗಾಗಲೇ ಹೆಚ್ಚಿನವರು ಈ ಯೋಜನೆಯ ಲಾಭ ಪಡೆದುಕೊಂಡಿದ್ದು, ಇನ್ನು ಕೆಲವರು ಈ ಯೋಜನೆಯಿಂದ ಹೊರಗುಳಿದಿದ್ದಾರೆ. ಹಾಗೆಯೆ ಈಗ ಆರನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದೂ, ಈ ತಿಂಗಳ ಹಣ ನಿಮ್ಮ ಖಾತೆ ಸೇರಿದೆಯೇ ಎಂದು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.

Anna Bhagya Scheme Amount Status Check
Image Credit: Oneindia

ಅನ್ನಭಾಗ್ಯ ಯೋಜನೆಯ ಕುರಿತು ಮಾಹಿತಿ

2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಘೋಷಣೆ ಮಾಡಿದ ಐದು ಪಂಚ ಯೋಜನೆಯಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದೆ. ಕೇಂದ್ರ ಸರಕಾರ ಇದಕ್ಕೂ ಮೊದಲಿಂದಲೂ ಐದು ಕೆಜಿ ಅಕ್ಕಿ ನೀಡುತ್ತಿದ್ದು ಈ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರಕಾರ ಕೂಡ ಐದು ಕೆಜಿ ಅಕ್ಕಿ ನೀಡುವುದಾಗಿ ಜನರಿಗೆ ಭರವಸೆ ನೀಡಿತ್ತು. ಹಾಗೆಯೆ ರಾಜ್ಯದಲ್ಲಿ ಅಕ್ಕಿ ದಾಸ್ತಾನಿನ ಸಮಸ್ಯೆ ಎದುರಾಗಿ ಐದು ಕೆಜಿ ಅಕ್ಕಿಯ ಬದಲಾಗಿ ಒಂದು ಕೆಜಿಗೆ 34 ರೂಪಾಯಿಯಂತೆ 170 ರೂಪಾಯಿಗಳನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ.

Anna Bhagya Scheme Amount
Image Credit: Sahilonline

ಅನ್ನಭಾಗ್ಯ ಹಣ ನಿಮ್ಮ ಖಾತೆ ಸೇರಿದೆಯೇ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ

Join Nadunudi News WhatsApp Group

ಅನ್ನಭಾಗ್ಯ ಯೋಜನೆಯ ಹಣ ಬಂದಿದೀಯ ಎಂದು ಚೆಕ್ ಮಾಡಿಕೊಳ್ಳಲು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಲಿಂಕ್ ಓಪನ್ ಮಾಡಿ, ನಂತರ ಎಡ ಭಾಗದಲ್ಲಿ ಕಾಣುವ ಮೂರೂ ಲೈನ್ ಮೇಲೆ ಕ್ಲಿಕ್ ಮಾಡಿ ಈ ಸ್ಥಿತಿ ಎನ್ನುವ ಆಯ್ಕೆ ಕಾಣುತ್ತದೆ, ಇದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮೂರೂ ಲಿಂಕ್ ಗಳು ಕಾಣುತ್ತದೆ, ಅದರ ಕೆಳಗೆ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಯಾವುದು ಎಂದು ಆಯ್ಕೆ ಮಾಡಿ.

ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ ಡೆಬಿಟಿ ಸ್ಟೇಟಸ್ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗು ಯಾವ ತಿಂಗಳ ಹಣ ಚೆಕ್ ಮಾಡಬೇಕು ಎನ್ನುವ ಕ್ಯಾಪ್ಚ್ ಸಂಖ್ಯೆಯನ್ನು ನಮೂದು ಮಾಡಿ, ತದನಂತರ ನಿಮ್ಮ ಖಾತೆಗೆ ಹಣ ಜಮೆ ಆಗಿರುವ ಕುರಿತು ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಬರಲಿದೆ.

Join Nadunudi News WhatsApp Group