Ration Card: ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರ ಹೆಸರು ಈ ರೀತಿಯಾಗಿ ಇದ್ದರೆ ಹಣ ಇಲ್ಲ, ಆಹಾರ ಇಲಾಖೆಯ ಇನ್ನೊಂದು ನಿಯಮ.
ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹೊಸ ಮಾಹಿತಿ, ಪಡಿತರ ಚೀಟಿಯಲ್ಲಿ ಒಬ್ಬರು ಮಾತ್ರ ಮುಖ್ಯಸ್ಥರಾಗಿರಬೇಕು.
Anna Bhagya Scheme Money Credit Rules: ಅನ್ನಭಾಗ್ಯ ಯೋಜನೆಯ ಕುರಿತು ಸಾಕಷ್ಟು ಅಪ್ಡೇಟ್ ಗಳು ಹೊರ ಬೀಳುತ್ತಿವೆ. ಅಂತ್ಯೋದಯ ಹಾಗು ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದ್ದು, 5 ಕೆಜಿ ಹೆಚ್ಚುವರಿ ಅಕ್ಕಿ ಸರಬರಾಜು ಮಾಡುವ ವರೆಗೂ ಪ್ರತಿ ಕೆಜಿಗೆ 34 ರೂಪಾಯಿಯಂತೆ ಪಡಿತರ ಚೀಟಿ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರವಾಗಿ ನಗದು ಜಮೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.
ಅನ್ನಭಾಗ್ಯ ಯೋಜನೆ ಹೊಸ ಅಪ್ಡೇಟ್
ಇನ್ನು ಪಡಿತರ ಚೀಟಿಯಲ್ಲಿ ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥರ ಹೆಸರು ನಮೂದಾಗಿರಬೇಕು. ಮುಖ್ಯಸ್ಥರು ನಿಧನರಾಗಿದ್ದಾರೆ ಆಹಾರ ಶಾಖೆಗೆ ಭೇಟಿ ನೀಡಿ ಮೃತರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಸಿ ಇ- ಕೆವೈಸಿ ಮೂಲಕ ಕುಟುಂಬದ ಮುಖ್ಯಸ್ಥರ ಹೆಸರು ಆಯ್ಕೆ ಮಾಡಬೇಕು. ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಕುಟುಂಬದ ಮುಖ್ಯಸ್ಥರ ಹೆಸರಿದ್ದರೆ ನಗದು ವರ್ಗಾವಣೆ ಮಾಡಲು ಸಾಧ್ಯವಿಲ್ಲ.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹೊಸ ಮಾಹಿತಿ
ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲದ, ಬ್ಯಾಂಕ್ ಖಾತೆ ಹೊಂದಿರದ ಹಾಗು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿರದ ಪಡಿತರ ಚೀಟಿದಾರರ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ತಿಳಿಸಲಾಗಿದ್ದು, ಖಾತೆ ಇಲ್ಲದಿದ್ದರೆ ಕೂಡಲೇ ಖಾತೆ ತೆರೆಯಬೇಕು, ಖಾತೆ ನಿಷ್ಕ್ರಿಯವಾಗಿದ್ದರೆ ಚಾಲ್ತಿಗೊಳಿಸಬೇಕು, ಇಲ್ಲವಾದರೆ ಜುಲೈ ತಿಂಗಳ ನಗದು ವರ್ಗಾವಣೆ ಆಗುವುದಿಲ್ಲ.
ಫಲಾನುಭವಿಗಳು 2023 ರ ಜುಲೈ ರ ಒಳಗೆ ಬ್ಯಾಂಕ್ ಖಾತೆ ಚಾಲ್ತಿಗೊಳಿಸಿದಲ್ಲಿ ಆಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆ ಮೂಲಕ ಯೋಜನೆಯ ಪ್ರಯೋಜನ ಪಡೆಯಬಹುದು. ಪಡಿತರ ಚೀಟಿದಾರರು ನೇರ ನಗದು ವರ್ಗಾವಣೆ ಪ್ರಯೋಜನ ಪಡೆಯಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.