Anna Bhagya: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯಾ, ಈ ವಿಧಾನದ ಮೂಲಕ ಚೆಕ್ ಮಾಡಿ.
ನಿಮ್ಮ ಮೊಬೈಲ್ ಮೂಲಕವೇ ಅನ್ನ ಭಾಗ್ಯ ಯೋಜನೆಯ ಹಣ ಬಂದಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬಹುದು.
Anna Bhagya Scheme Money Credit: ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ (Anna Bhagya) ಯೋಜನೆಯ ಕುರಿತು ಅಪ್ಡೇಟ್ ಒಂದು ಹೊರ ಬಿದ್ದಿದೆ. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಬದಲು ಹಣ ಪಡೆಯುವವರು ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು.
5 ಕೆಜಿ ಅಕ್ಕಿ ಬದಲು ಸರ್ಕಾರ ಹಣ ಕೊಡಲು ನಿರ್ಧಾರ ಮಾಡಿದ್ದು, ಹಣ ನಿಮ್ಮ ಖೇತೆಗೆ ಬಂದಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಇದೀಗ ನೀವು ನಾವು ನೀಡುವ ಮಾಹಿತಿಯನ್ನು ತಿಳಿದುಕೊಳ್ಳಬೇಕು. ನಿಮ್ಮ ಮೊಬೈಲ್ ಮೂಲಕವೇ 5 ನಿಮಿಷದಲ್ಲಿ ಅದನ್ನು ಚೆಕ್ ಮಾಡಬಹುದು.
ಅನ್ನಭಾಗ್ಯ ಯೋಜನೆ
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಅಕ್ಕಿಯ ಪೂರೈಕೆ ಇಲ್ಲದ ಕಾರಣ 5 ಕೆಜಿ ಮತ್ತು ಉಳಿದ 5 ಕೆಜಿ ಅಕ್ಕಿಯ ಬದಲಾಗಿ ಹಣ ಹಾಕಲು ಸರ್ಕಾರ ನಿರ್ಧಾರ ಮಾಡಿದೆ. ಅದರಂತೆ ಜುಲೈ 10 ರಂದು ಹಣ ವರ್ಗಾವಣೆಗೆ ಸಿದ್ದರಾಮಯ್ಯ ಚಾಲನೆ ನೀಡಿದರು. ಅದರಂತೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 170 ರೂಪಾಯಿ ನೀಡಲಾಗುತ್ತಿದೆ.
ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಬಾಗಲಕೋಟೆ ಜಿಲ್ಲೆಗಳ ಬಿಪಿಎಲ್ ಕಾರ್ಡ್ ದಾರರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಈ ಜಿಲ್ಲೆಗಳಲ್ಲಿ 20 ಲಕ್ಷ ಬಿಪಿಎಲ್ ಕಾರ್ಡ್ ದಾರರ ಕುಟುಂಬಗಳ ಸದಸ್ಯರ ಬ್ಯಾಂಕ್ ಖಾತೆಗಳಿಗೆ 115 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಲಾಗಿತ್ತು. ಇನ್ನುಳಿದ ರಾಜ್ಯಗಳಿಗೆ ಸದ್ಯದಲ್ಲಿ ಹಣ ವರ್ಗಾವಣೆ ಆಗಲಿದೆ.
ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯಾ ಎಂದು ಚೆಕ್ ಮಾಡುವುದು ಹೇಗೆ
* ಮೊದಲು ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ https://ahara.kar.nic.in/lpg/ ಭೇಟಿ ನೀಡಬೇಕು.
* ನೀವು https://ahara.kar.nic.in/lpg/ ಈ ವೆಬ್ ಸೈಟ್ ಗೆ ಹೋದರೆ ಅಲ್ಲಿ ನಿಮ್ಮ ಜಿಲ್ಲೆ ಯಾವ ವಿಭಾಗಕ್ಕೆ ಒಳಪಟ್ಟಿದೆ ನೋಡಿ, ಆ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ನೀವು ಯಾವ ಜಿಲ್ಲೆಯವರು ನೋಡಿ ಆ ವಿಭಾಗದ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಹೊಸ ವಿಂಡೋ ತೆರೆಯುತ್ತದೆ.
* ಅದರಲ್ಲಿ ಹಲವು ಆಯ್ಕೆಗಳಿದ್ದು, ಕೊನೆಯಲ್ಲಿ ನೇರನಗದು ವರ್ಗಾವಣೆಯ ಸ್ಥಿತಿ ( Status Of DBT) ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ವಿಂಡೋ ಓಪನ್ ಆಗುತ್ತದೆ.
* ಅಲ್ಲಿ ನೀವು ವರ್ಷ, ತಿಂಗಳು, ಪಡಿತರ ಚೀಟಿ ಸಂಖ್ಯೆ (RC ಸಂಖ್ಯೆ), ಕ್ಯಾಪ್ಚಾವನ್ನು ನಮೂದಿಸಿ ಗೋ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ನೇರ ನಗದು ವರ್ಗಾವಣೆ ಸ್ಥಿತಿ ಪರದೆ ಮೇಲೆ ಕಾಣಿಸಿಕೊಳ್ಳಲಿದೆ.
ಅನ್ನಭಾಗ್ಯ ಯೋಜನೆಯಡಿ ಹಣ ನಿಮ್ಮ ಅಕೌಂಟ್ ಗೆ ಜಮೆಯಾದ ನಂತರ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಸಂದೇಶ ಬರಲಿದೆ. ಅನ್ನಭಾಗ್ಯ ಯೋಜನೆಯನ್ನು ಪಡೆಯಲು ಇ-ಕೆವೈಸಿ ಮತ್ತು ಪಡಿತರ ಚೀಟಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.