Anna Bhagya: ಇಂತಹ ಕಾರ್ಡುದಾರರ ಖಾತೆಗೆ ಮಾತ್ರ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಲಿದೆ, ಸರ್ಕಾರದ ಘೋಷಣೆ.

ಹಿಂದಿನ ತಿಂಗಳಿನಲ್ಲಿ ಅಕ್ಕಿ ಪಡೆಯದವರಿಗೆ ಹಣ ನೀಡದಿರಲು ಚಿಂತನೆ ನಡೆಸಿದ ಆಹಾರ ಇಲಾಖೆ.

Anna Bhagya Scheme Money Credit Rules: ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಅನ್ನಭಾಗ್ಯದ (Anna bhagya) ಯೋಜನೆಯ ಕುರಿತು ಈಗಾಗಲೇ ಸಾಕಷ್ಟು ಅಪ್ಡೇಟ್ ಗಳು ವೈರಲ್ ಆಗಿವೆ. ಇನ್ನು ರಾಜ್ಯದ ಜನತೆ ಅನ್ನಭಾಗ್ಯ ಯೋಜನೆಯ ಅನುಕೂಲ ಪಡೆಯಲು ಉತ್ಸಾಹಕರಾಗಿದ್ದಾರೆ.

ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು. ಆದರೆ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಸೌಲಭ್ಯದಲ್ಲಿ ಬದಲಾವಣೆಯನ್ನು ತಂದಿದೆ.

ಬಿಪಿಎಲ್ ಕಾರ್ಡ್ ದಾರರಿಗೆ 5 ಕೆಜಿ ಅಕ್ಕಿಯ ಬದಲಾಗಿ ಸಿಗಲಿದೆ ಹಣ
ಜನರಿಗೆ 5 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿಗೆ ಸರಿದೂಗುವ ಹಣ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಮಾಸಿಕ ತಲಾ 170 ರೂಪಾಯಿ ನೀಡಲಾಗುತ್ತದೆ.

Anna Bhagya Scheme latest news Update
Image Credit: News9live

ಈ ತಿಂಗಳಿಂದಲೇ ಪಡಿತದಾರರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಇನ್ನು ಐದು ಕೆಜಿ ಅಕ್ಕಿಯ ಬದಲಾಗಿ ನೀವು ಹಣವನ್ನು ಪಡೆಯಲು ಕೆಲವು ಷರತ್ತುಗಳಿವೆ. ಇನ್ನು ಕೆಲವು ಜನರಿಗೆ ಅನ್ನಭಾಗ್ಯದ ಲಾಭ ಸಿಗುವುದಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.

ಇಂತಹವರಿಗೆ 5 ಕೆಜಿ ಅಕ್ಕಿಯ ಹಣ ಸಿಗುವುದಿಲ್ಲ
ಇದೀಗ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಬದಲು ಹಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಅಕ್ಕಿ ಪಡೆದವರ ಖಾತೆಗೆ ಮಾತ್ರ ಹಣ ಜಮಾ ಮಾಡಲು ಸರ್ಕಾರ ಚಿಂತನೆ ನಡೆಸಲಾಗಿದೆ. ಜೂನ್ ನಲ್ಲಿ 1,28,23,868 ಕುಟುಂಬಗಳ ಪೈಕಿ 1,17,29,296 ಕುಟುಂಬಗಳು ಅಕ್ಕಿ ಪಡೆದಿದೆ. ಉಳಿದ 10.94 ಲಕ್ಷ ಬಿಪಿಎಲ್ ಕುಟುಂಬಗಳು ಪಡಿತರ ಅಕ್ಕಿ ಪಡೆದಿರಲಿಲ್ಲ. 10.94 ಲಕ್ಷ ಕುಟುಂಬ ಅಂದರೆ ಅಂದಾಜು 20 ಲಕ್ಷ ಜನ ಅಕ್ಕಿ ಪಡೆದುಕೊಂಡಿಲ್ಲ.

Join Nadunudi News WhatsApp Group

Anna Bhagya Scheme latest news Update
Image Credit: Abplive

20 ಲಕ್ಷ ಜನರಿಗೆ ಹಣ ಹಾಕದಿದ್ದರೆ 76 ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಕೆಲವರು ಬಿಇಎಲ್ ಕಾರ್ಡ್ ಹೊಂದಿರುವ ಉದ್ದೇಶದಿಂದ ಪಡಿತರ ಪಡೆಯುವುದಿಲ್ಲ.ಉಚಿತ ಆರೋಗ್ಯ ಸೇವೆ ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿರುತ್ತಾರೆ.

ಇನ್ನು ಹೆಚ್ಚುವರಿ 5 ಕೆಜಿ ಅಕ್ಕಿಗೆ ಹಣ ನೀಡುವುದು ಅಗತ್ಯವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಳೆದ 3 ತಿಂಗಳಿಂದ 5,37,213 ಬಿಪಿಎಲ್ ಕುಟುಂಬಸ್ಥರ ಅಕ್ಕಿ ಪಡೆದಿಲ್ಲ. ಹೀಗಾಗಿ ಅಕ್ಕಿ ಪಡೆಯದವರಿಗೆ ಹಣ ನೀಡದಿರಲು ಆಹಾರ ಇಲಾಖೆ ಚಿಂತನೆ ನಡೆಸಿವೆ.

Join Nadunudi News WhatsApp Group