Anna Bhagya: ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ, ಇಂತವರಿಗೆ ಹಣ ಹಾಕದಿರಲು ಸರ್ಕಾರ ನಿರ್ಧಾರ.

ಬಿಪಿಎಲ್ ಕಾರ್ಡುದಾರರಲ್ಲಿ 22 ಲಕ್ಷ ಕುಟುಂಬಗಳು ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲ ಈ ಕಾರಣದಿಂದಾಗಿ ಅವರಿಗೆ ಅನ್ನಭಾಗ್ಯ ಯೋಜನೆಯ ಹಣ ಸಿಗುವುದಿಲ್ಲ.

Anna Bhagya Scheme Deposit Rules: ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಅಪ್ಡೇಟ್ ಗಳು ಹೊರ ಬಿದ್ದಿದೆ. ಸರ್ಕಾರ ಅನ್ನ ಭಾಗ್ಯ ಯೋಜನೆಯ ಸಲುವಾಗಿ ಸಾಕಷ್ಟು ಮಾಹಿತಿಗಳನ್ನು ನೀಡುತ್ತಿದೆ.

ಜನರಿಗೆ 5 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿಗೆ ಸರಿದೂಗುವ ಹಣ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಮಾಸಿಕ ತಲಾ 170 ರೂಪಾಯಿ ನೀಡಲಾಗುತ್ತದೆ. ಆದರೆ ಈ ಹಣ ಎಲ್ಲ ಕುಟುಂಬದವರಿಗೂ ಸಿಗುವುದಿಲ್ಲ. ಈ ಬಗ್ಗೆ ಸರ್ಕಾರ ಹೊಸ ಮಾಹಿತಿಯನ್ನು ನೀಡಿದೆ.

22 lakh BPL families may not get DBT benefit immediately under Anna Bhagya scheme
Image Credit: Thesouthfirst

ಬ್ಯಾಂಕ್ ಖಾತೆ ಹೊಂದಿರದ ಕುಟುಂಬದವರಿಗೆ ಅನ್ನಭಾಗ್ಯ ಯೋಜನೆಯ ಹಣ ಸಿಗುವುದಿಲ್ಲ
ಇನ್ನು ಅನ್ನಭಾಗ್ಯ ಯೋಜನೆಯಡಿ 4 ಕೋಟಿಗೂ ಅಧಿಕ ಬಿಪಿಎಲ್ ಫಲಾನುಭವಿಗಳಿಗೆ ಸರ್ಕಾರ ತಲಾ 10 ಕೆಜಿ ಅಕ್ಕಿ ನೀಡುವ ಬದಲು 5 ಕೆಜಿ ಅಕ್ಕಿ ನೀಡಿ ಇನ್ನುಳಿದ 5 ಕೆಜಿ ಅಕ್ಕಿಗೆ ಹಣ ನೀಡುವುದಾಗಿ ಭರವಸೆ ನೀಡಿತ್ತು.

ಆದರೆ ಬಿಪಿಎಲ್ ಕಾರ್ಡುದಾರರಲ್ಲಿ 22 ಲಕ್ಷ ಕುಟುಂಬಗಳು ಬ್ಯಾಂಕ್ ಖಾತೆಗಳನ್ನೇ ಹೊಂದಿಲ್ಲ ಎಂದು ತಿಳಿದು ಬಂದಿದೆ. ಬ್ಯಾಂಕ್ ಖಾತೆಯನ್ನ ಯಾರು ಹೊಂದಿರುವುದಿಲ್ಲವೋ ಅವರಿಗೆ ಹಣ ಜಮಾ ಆಗುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆಯಲ್ಲಿ ತಿಳಿಸಿದೆ.

ಕಳೆದ ತಿಂಗಳು ರೇಷನ್ ಪಡೆಯದೇ ಇದ್ದವರಿಗೆ ಸರ್ಕಾರಡಿನ ಹಣ ವರ್ಗಾವಣೆ ಆಗುವುದಿಲ್ಲ
ಅಲ್ಲದೆ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಬದಲು ಹಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಅಕ್ಕಿ ಪಡೆದವರ ಖಾತೆಗೆ ಮಾತ್ರ ಹಣ ಜಮಾ ಮಾಡಲು ಸರ್ಕಾರ ಚಿಂತನೆ ನಡೆಸಲಾಗಿದೆ. ಜೂನ್ ನಲ್ಲಿ 1,28,23,868 ಕುಟುಂಬಗಳ ಪೈಕಿ 1,17,29,296 ಕುಟುಂಬಗಳು ಅಕ್ಕಿ ಪಡೆದಿದೆ. ಉಳಿದ 10.94 ಲಕ್ಷ ಬಿಪಿಎಲ್ ಕುಟುಂಬಗಳು ಪಡಿತರ ಅಕ್ಕಿ ಪಡೆದಿರಲಿಲ್ಲ. 10.94 ಲಕ್ಷ ಕುಟುಂಬ ಅಂದರೆ ಅಂದಾಜು 20 ಲಕ್ಷ ಜನ ಅಕ್ಕಿ ಪಡೆದುಕೊಂಡಿಲ್ಲ.

Join Nadunudi News WhatsApp Group

22 lakh BPL families may not get DBT benefit immediately under Anna Bhagya scheme
Image Credit: Thehindu

20 ಲಕ್ಷ ಜನರಿಗೆ ಹಣ ಹಾಕದಿದ್ದರೆ 76 ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಕೆಲವರು ಬಿಇಎಲ್ ಕಾರ್ಡ್ ಹೊಂದಿರುವ ಉದ್ದೇಶದಿಂದ ಪಡಿತರ ಪಡೆಯುವುದಿಲ್ಲ.ಉಚಿತ ಆರೋಗ್ಯ ಸೇವೆ ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿರುತ್ತಾರೆ.

ಇನ್ನು ಹೆಚ್ಚುವರಿ 5 ಕೆಜಿ ಅಕ್ಕಿಗೆ ಹಣ ನೀಡುವುದು ಅಗತ್ಯವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಳೆದ 3 ತಿಂಗಳಿಂದ 5,37,213 ಬಿಪಿಎಲ್ ಕುಟುಂಬಸ್ಥರ ಅಕ್ಕಿ ಪಡೆದಿಲ್ಲ. ಹೀಗಾಗಿ ಅಕ್ಕಿ ಪಡೆಯದವರಿಗೆ ಹಣ ನೀಡದಿರಲು ಆಹಾರ ಇಲಾಖೆ ಚಿಂತನೆ ನಡೆಸಿವೆ.

Join Nadunudi News WhatsApp Group