Anna Bhagya: ಅನ್ನಭಾಗ್ಯ ನಿರೀಕ್ಷೆಯಲ್ಲಿ ಇದ್ದವರಿಗೆ ಬೇಸರದ ಸುದ್ದಿ, ಮುಂದಿನ ತಿಂಗಳು ಸಿಗಲ್ಲ ಹೆಚ್ಚಿನ ಅಕ್ಕಿ.

ಅನ್ನಭಾಗ್ಯ ಯೋಜನೆಯ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ.

Anna Bhagya Scheme: ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಈಗಾಗಲೇ ಒಂದು ಗ್ಯಾರೆಂಟಿ ಜಾರಿಗೆ ಬಂದಿದೆ. ಇನ್ನುಳಿದ ಗ್ಯಾರೆಂಟಿ ಜಾರಿಗೆ ಮಾಡುವುದರ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಚರ್ಚೆ ನಡೆಸುತ್ತಿದ್ದಾರೆ.

ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳಿಗೆ ಆನ್ ಲೈನ್ ನಲ್ಲಿ ಈಗಾಗಲೇ ಅರ್ಜಿ ಪ್ರಾರಂಭವಾಗಿದೆ. ಇನ್ನು ಅನ್ನಭಾಗ್ಯ ಯೋಜನೆ ಜುಲೈ ಒಂದರಿಂದ ಆರಂಭವಾಗಲಿದ್ದು, ಇದು ಸ್ವಲ್ಪ ವಿಳಂಬವಾಗಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಒಂದಾಗಿರುವ, ಬಿಪಿಎಲ್​ ಕಾರ್ಡ್ ದಾರರಿಗೆ ಹಾಗೂ ಅಂತ್ಯೋದಯ ಫಲಾನುಭವಿಗಳಿಗೆ ಮಾಸಿಕ 10 ಕೆ.ಜಿ. ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಹೇಳಿದ ಸಮಯಕ್ಕೆ ಜಾರಿಯಾಗುವುದಿಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಷಯ ಬಹಿರಂಗಪಡಿಸಿದ್ದಾರೆ.

Siddaramaiah clarified about Annabhagya Yojana
Image Credit: Thesouthfirst

ಅನ್ನಭಾಗ್ಯ ಯೋಜನೆಯ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ನಿನ್ನೆ ದೆಹಲಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಜುಲೈ 1ರಂದು ಅನ್ನಭಾಗ್ಯ ಯೋಜನೆ ಜಾರಿ ಅನುಮಾನ, ಸ್ವಲ್ಪ ವಿಳಂಬವಾಗಬಹುದು. ಕೇಂದ್ರದ ರಾಜಕೀಯದಿಂದಾಗಿ ಅಕ್ಕಿ ಹೊಂದಿಸಿಕೊಳ್ಳುವುದರಲ್ಲಿ ಸ್ವಲ್ಪ ತಡವಾಗಿದೆ ಎಂದು ಹೇಳಿದ್ದಾರೆ.

ಬೇರೆ ಬೇರೆ ರಾಜ್ಯಗಳಿಂದ ಅಕ್ಕಿ ಕೇಳಿದ್ದೇವೆ ಲಭ್ಯತೆ ನೋಡಿಕೊಂಡು ಜಾರಿ ಮಾಡಲಿದ್ದೇವೆ. ಅಕ್ಕಿ ಖರೀದಿ ಬಗ್ಗೆ ಕೇಂದ್ರ ಸರ್ಕಾರದ ಏಜೆನ್ಸಿಗಳ ಜತೆ ಚರ್ಚೆ ಜೊತೆಗೆ ಕೇಂದ್ರೀಯ ಭಂಡಾರ, ನಫೆಡ್ ಸೇರಿ 3 ಸಂಸ್ಥೆಗಳ ಜೊತೆ ಕೊಟೇಷನ್ ಕೂಡ ಕೇಳಿದ್ದೇವೆ. ನಾಳೆ ಕೊಟೇಷನ್ ಸಿಗಲಿದೆ ಎಂದು ಯೋಜನೆ ಅಡ್ಡಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ.

Join Nadunudi News WhatsApp Group

Siddaramaiah clarified about Annabhagya Yojana
Image Credit: Millenniumpost

ನಾವು ರಾಜ್ಯದ ಜನರಿಗೆ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದೇವೆ. ಅದಕ್ಕಾಗಿ ಅನೇಕ ರಾಜ್ಯಗಳಲ್ಲಿ ಮನವಿ ಮಾಡಿದ್ದೇವೆ. ತೆಲಂಗಾಣ ಗೋಧಿ ನೀಡುತ್ತಿದೆ, ಛತ್ತೀಸ್ ​ಗಢ 1 ಲಕ್ಷ ಮೆಟ್ರಿಕ್ ಟನ್ ನೀಡುತ್ತಿದೆ, ಅದೂ ಒಂದು ತಿಂಗಳು ಮಾತ್ರ.

ಕೇಂದ್ರ ಸರ್ಕಾರ ಈ ವಿಚಾರದಲ್ಲಿ ವಿನಾಕಾರಣ ರಾಜಕಾರಣ ಮಾಡುತ್ತಿದೆ. ಜುಲೈ 1ರಂದೇ ಯೋಜನೆ ಜಾರಿ ಮಾಡಲು ಪ್ರಯತ್ನಿಸುತ್ತೇವೆ ಎಂಬುದಾಗಿಯೂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇನ್ನು ಈ ವಿಚಾರವಾಗಿ ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿಯೂ ಸಹ ಹೇಳಿದ್ದಾರೆ.

Join Nadunudi News WhatsApp Group