Anna Bhagya Money: ಈ ತಿಂಗಳ ಅನ್ನಭಾಗ್ಯ ಹಣ ಖಾತೆಗೆ ಬಿಡುಗಡೆ, ಈ ರೀತಿಯಲ್ಲಿ ಚೆಕ್ ಮಾಡಿಕೊಳ್ಳಿ

ಮೊಬೈಲ್ ಮೂಲಕ ಈ ರೀತಿಯಾಗಿ ನಿಮ್ಮ ಅನ್ನ ಭಾಗ್ಯ ಸ್ಟೇಟಸ್ ಚೆಕ್ ಮಾಡಿ

Anna Bhagya Scheme Latest Update: ರಾಜ್ಯದಲ್ಲಿ ಈಗ ಹಲವು ಯೋಜನೆಗಳು ಜಾರಿಯಲ್ಲಿದೆ ಅದರಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆ (Anna Bhagya Scheme) ಕೂಡ ಒಂದಾಗಿದೆ. ಈ ಯೋಜನೆಯಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಕೆಜಿ ಅಕ್ಕಿಯ ಬದಲಾಗಿ ಕುಟುಂಬದ ಯಜಮಾನರ ಖಾತೆಗೆ ಹಣ ಜಮೆ ಮಾಡುತ್ತಿದೆ.

ಈ ಯೋಜನೆ ಪ್ರಾರಂಭ ಆಗಿ ಹಲವು ತಿಂಗಳುಗಳು ಕಳೆದಿದ್ದು, ಈಗಾಗಲೇ ಹಲವು ಕುಟುಂಬಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ಆದರೆ ಹಲವರ ಖಾತೆಗೆ ಯೋಜನೆಯ ಲಾಭ ತಲುಪಿಲ್ಲ. ಈ ಕಾರಣಕ್ಕಾಗಿ ಅರ್ಹರಿಗೆ ಹಣ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ.

Anna Bhagya Scheme Latest Updates
Image Credit: Kannada News

ಅನ್ನ ಭಾಗ್ಯ ಹಣ ನಿಮ್ಮ ಖಾತೆಗೆ ಜಮಾ ಆಗಲು ಈ ಕೆಲಸ ಮಾಡುದು ಕಡ್ಡಾಯ
ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯ ಉಚಿತ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ. ಈಗಾಗಲೇ ಸರ್ಕಾರ ಹಲವು ಬಾರಿ ಆಧಾರ್ ಹಾಗು ರೇಷನ್ ಕಾರ್ಡ್ ಲಿಂಕ್ ಬಗ್ಗೆ ಮಾಹಿತಿ ನೀಡಿದೆ, ಆದರೂ ಸಹ ಕೆಲವರು ಈ ಕೆಲಸವನ್ನು ಮಾಡಿಲ್ಲ. ಬ್ಯಾಂಕ್ ಖಾತೆಯ E-KYC ಬಹಳ ಮುಖ್ಯ ಆಗಿದ್ದು ಪ್ರತಿಯೊಬ್ಬರು ಈ ಕೆಲಸವನ್ನು ಮಾಡಿಕೊಳ್ಳಿ, ಇಲ್ಲ ಅಂತಾದರೆ ನಿಮಗೆ ಅನ್ನಭಾಗ್ಯ ಹಣ ಜಮಾ ಆಗುದಿಲ್ಲ.

ಮೊಬೈಲ್ ಮೂಲಕ ಈ ರೀತಿಯಾಗಿ ನಿಮ್ಮ ಅನ್ನ ಭಾಗ್ಯ ಸ್ಟೇಟಸ್ ಚೆಕ್ ಮಾಡಿ
ಇದೀಗ ನಿಮಗೆ ಕಂಪ್ಯೂಟರ್, ಲ್ಯಾಪ್ ಟಾಪ್ ನಿಂದ ಅನ್ನ ಭಾಗ್ಯ ಸ್ಟೇಟಸ್ ತಿಳಿದುಕೊಳ್ಳಲು ಸಾಧ್ಯವಾಗದಿದ್ದರೆ, ಮೊಬೈಲ್ ಮೂಲಕ ಕೂಡ ಅನ್ನ ಭಾಗ್ಯದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಆಹಾರ ಇಲಾಖೆಯ ಅಧಿಕೃತ Website ಆಗಿರುವ https://ahara.kar.nic.in/ ಗೆ ಭೇಟಿ ನೀಡಬೇಕಾಗುತ್ತದೆ. ನಂತರ E -Services ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು. ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಆಗ ನಿಮ್ಮ ನಂಬರ್ ಗೆ SMS ಬರದೇ ಇದ್ದರೆ ನಿಮ್ಮ ಖಾತೆಗೆ ಅನ್ನ ಭಾಗ್ಯದ ಹಣ ಜಮಾ ಆಗಿಲ್ಲ ಎಂದರ್ಥ.

Anna Bhagya Status Check
Image Credit: Original Source

Join Nadunudi News WhatsApp Group

Join Nadunudi News WhatsApp Group