Anna Bhagya: ಇನ್ನುಮುಂದೆ ಪಡಿತರ ಚೀಟಿದಾರರಿಗೆ ಹಣ ಸಿಗುವುದಿಲ್ಲ, ಯೋಜನೆಯಲ್ಲಿ ಬದಲಾವಣೆ.

ರಾಜ್ಯ ಸರ್ಕಾರ ಈ ಅನ್ನ ಭಾಗ್ಯ ಯೋಜನೆಯಡಿ ಹಣ ನೀಡುವುದರಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.

Anna Bhagya Yojana Latest Update: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ (Congress Govt) ಉಚಿತ ಭಾಗ್ಯಗಳು ಜನರಿಗೆ ಲಭ್ಯವಾಗುತ್ತಿದೆ. ಕರ್ನಾಟಕ ಜನತೆ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಈಗಾಗಲೇ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ ಯೋಜನೆಗಳು ಅರ್ಹರಿಗೆ ಲಭ್ಯವಾಗುತ್ತಿದೆ.

ಇನ್ನೇನು ಕೆಲವೇ ದಿನಗಳಲ್ಲಿ ನಿರುದ್ಯೋಗ ಭತ್ಯೆಯಾಗಿರುವ ಯುವ ನಿಧಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ರಾಜ್ಯ ಸರ್ಕಾರದ ಯೋಜನೆಗಳನ್ನು ರಾಜ್ಯದ ಕೋಟ್ಯಾಂತರ ಜನರು ಲಾಭ ಪಡೆಯುತ್ತಿದ್ದಾರೆ.

Anna bhagya scheme
Image Credit: Oneindia

ಅನ್ನ ಭಾಗ್ಯ ಯೋಜನೆಯಡಿ 5KG ಅಕ್ಕಿ ಬದಲು ಹಣ ನೀಡುತ್ತಿರುವ ಸರ್ಕಾರ
ಇನ್ನು ರಾಜ್ಯದಲ್ಲಿ Anna Bhagya ಯೋಜನೆ ಹೆಚ್ಚಿನ ಜನರಿಗೆ ಅನುಕೂಲವನ್ನು ಮಾಡಿಕೊಟ್ಟಿದೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಘೋಷಣೆ ಹೊರಡಿಸಿತ್ತು. ಆದರೆ ರಾಜ್ಯದಲ್ಲಿ ಅಕ್ಕಿ ಸರಬರಾಜಿನ ಕೊರತೆ ಉಂಟಾದ ಕಾರಣ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯ ಬದಲಾಗಿ ಅದಕ್ಕೆ ಸರಿಹೊಂದುವ ಹಣವನ್ನು ನೀಡಲು ತೀರ್ಮಾನಿಸಿತ್ತು.

ಇನ್ನುಮುಂದೆ ಪಡಿತರ ಚೀಟಿದಾರರಿಗೆ ಹಣ ಸಿಗುವುದಿಲ್ಲ
ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಮಾಸಿಕ ತಲಾ 170 ರೂಪಾಯಿ ನೀಡುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿತ್ತು. ರಾಜ್ಯದ BPL Card ದಾರರು ಅಕ್ಕಿಯ ಬದಲಾಗಿ ಹಣವನ್ನು ಪಡೆಯುತ್ತಿದ್ದರು. ಸದ್ಯ ರಾಜ್ಯ ಸರ್ಕಾರ ಈ ಅನ್ನ ಭಾಗ್ಯ ಯೋಜನೆಯಡಿ ಹಣ ನೀಡುವುದರಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಜನರಿಗೆ ಅನುಕೂಲವಾಗುವ ಬದಲು ಹಣದ ಬದಲಾಗಿ ಹೊಸ ಸೌಲಭ್ಯವನ್ನು ನೀಡಲು ಸರ್ಕಾರ ನಿರ್ಧರಿಸಿದೆ.

Anna Bhagya Yojana Latest Update
Image Credit: Aabplive

ಪಡಿತರದ ಹಣದ ಬದಲು ಪೌಷ್ಟಿಕ ಆಹಾರ ವಿತರಣೆ
ಸದ್ಯ ರಾಜ್ಯ ಸರ್ಕಾರ ಪಡಿತರದ ಹಣದ ಬದಲು ಪೌಷ್ಟಿಕ ಆಹಾರ ವಿತರಣೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಕೃಷಿ ಸಚಿವ ಏನ್. ಚಲುವರಾಯಸ್ವಾಮಿ ಮಾಹಿತಿ ತಿಳಿಸಿದ್ದಾರೆ. ಸಚಿವರು ಪಡಿತರ ವ್ಯವಸ್ಥೆಯಲ್ಲಿ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣ ನೀಡುವ ಬದಲುಪೂರಕ ಪೌಷ್ಟಿಕ ಆಹಾರ ನೀಡುವಂತೆ ವಿಧಾನಸೌಧದಲ್ಲಿ ಮನವಿ ಮಾಡಿದ್ದಾರೆ. ಸದ್ಯ 5 ಕೆಜಿ ಅಕ್ಕಿಯ ಹೊರತಾಗಿ ರಾಗಿ ಅಥವಾ ಜೋಳ, ಕಡಲೆಕಾಯಿ ಎಣ್ಣೆ ವಿತರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಮುಂದಿನ ತಿಂಗಳಿಂದ ರಾಜ್ಯದ ಜನತೆ 5 ಕೆಜಿ ಅಕ್ಕಿ ಹಣದ ಬದಲಾಗಿ ಪೌಷ್ಟಿಕ ಆಹಾರವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group