Anna Bhagya: ಅನ್ನಭಾಗ್ಯ ಯೋಜನೆಯ ಹಣ ಯಾರಿಗೂ ಬರಲ್ಲ, ಸ್ಥಗಿತವಾಗುತ್ತ ಕಾಂಗ್ರೆಸ್ ಗ್ಯಾರೆಂಟಿ ಯೋಜನೆ

ಕಳೆದ 3 ತಿಂಗಳಿಂದ ಅನ್ನ ಭಾಗ್ಯ ಯೋಜನೆಯ ಹಣ ಸ್ಥಗಿತ.

Anna Bhagya Yojana Latest Update: ಪ್ರಸ್ತುತ ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಪಡಿತರ ಯೋಜನೆಗೆ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ವಿಶೇಷ ಸೌಲಭ್ಯವನ್ನು ನೀಡುತ್ತಿದೆ. ರಾಜ್ಯ ಸರ್ಕಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ 5KG ಅಕ್ಕಿಯ ಬದಲಾಗಿ 10KG ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಕಾರಣಾಂತರಗಳಿಂದ 10KG ಅಕ್ಕಿಯನ್ನು ವಿತರಿಸುವಲ್ಲಿ ವಿಫಲವಾದ ಸರ್ಕಾರ 5KG ಅಕ್ಕಿಯ ಬದಲಾಗಿ ಪ್ರತಿ ಸದ್ಯಸ್ಯರಿಗೆ 170 ರೂ. ಗಳನ್ನೂ ನೀಡುವುದಾಗಿ ಘೋಷಿಸಿತ್ತು.

ಇನ್ನು ಅನ್ನ ಭಾಗ್ಯ ಫಲಾನುಭವಿಗಳು ಪ್ರತಿ ತಿಂಗಳು 5KG ಅಕ್ಕಿಯ ಜೊತೆಗೆ ಹೆಚ್ಚುವರಿ ಅಕ್ಕಿಯ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಕಳೆದ ಮೂರು ತಿಂಗಳುಗಳಿಂದ ಅನ್ನ ಭಾಗ್ಯ ಯೋಜನೆಯಡಿ ಸಮಸ್ಯೆ ಕಂಡು ಬಂದಿದೆ.

Anna Bhagya Yojana Latest Update
Image Credit: Karnataka Times

ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಬಿಗ್ ಶಾಕ್
ಸದ್ಯ ರಾಜ್ಯ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹೌದು, ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಹೆಚ್ಚುವರಿ ಅಕ್ಕಿ ಬದಲಿಗೆ 170 ರೂ. ನಗದು ವರ್ಗಾವಣೆಯನ್ನು ಮೂರು ತಿಂಗಳಿಂದ ಸ್ಥಗಿತಗೊಳಿಸಲಾಗಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಬಂದಿರುವ ಹೆಚ್ಚುವರಿ ಅಕ್ಕಿ ಹಣ ಜಮಾ ಆಗಿಲ್ಲ. ಸದ್ಯ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಬಿಗ್ ಶಾಕ್ ಎದುರಾಗಿದೆ.

3 ತಿಂಗಳಿಂದ ಅನ್ನ ಭಾಗ್ಯ ಯೋಜನೆಯ ಹಣ ಸ್ಥಗಿತ
ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ 1.13 ಕೋಟಿ ಪಡಿತರ ಚೀಟಿದಾರರ ಕುಟುಂಬಗಳ ನಾಲ್ಕು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆಜಿ ಹೆಚ್ಚುವರಿ ಅಕ್ಕಿಗೆ 660 ಕೋಟಿ ರೂ. ಜಮಾ ಮಾಡಲಾಗುತ್ತಿದೆ. ಆದರೆ, ಮಾರ್ಚ್, ಏಪ್ರಿಲ್, ಮೇ ತಿಂಗಳಿನಿಂದಲೂ ಹಣ ಜಮಾ ಆಗಿಲ್ಲ ಎನ್ನಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲು ತಾಂತ್ರಿಕ ದೋಷವೇ ಕಾರಣ ಎನ್ನಲಾಗುತ್ತಿದೆ. ತಾಂತ್ರಿಕ ದೋಷದ ಕಾರಣ ಕಳೆದ ಮೂರು ತಿಂಗಳ ಹಣ ಸ್ಥಗಿತಗೊಂಡಿದೆ. ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳು ಸದ್ಯ ಯೋಜನೆಯ ಲಾಭವನ್ನು ಪಡೆಯಲು ಅಸಾಧ್ಯವಾಗಿದೆ.

Anna Bhagya Yojana Latest News
Image Credit: News Guru Kannada

Join Nadunudi News WhatsApp Group

Join Nadunudi News WhatsApp Group