Anna Bhagya: ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಖಾತೆಗೆ ಬಂದಿಲ್ವಾ…? ಹಾಗಾದರೆ ತಕ್ಷಣ ಈ ಕೆಲಸ ಮಾಡಿ.

ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ಲ ಅಂದರೆ ತಕ್ಷಣ ಈ ಕೆಲಸ ಮಾಡಿ

Anna Bhagya Yojana Status Check: ಸದ್ಯ ರಾಜ್ಯದ ಸರ್ಕಾರ ಚುನಾವಣಾ ಸಮಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಸಮಯದಲ್ಲಿ Anna Bhagya ಯೋಜನೆಯನ್ನು ಕೂಡ ಘೋಷಿಸಿದೆ. ಈ ಯೋಜನೆಯಿಂದ ಜನರಿಗೆ 10KG ಅಕ್ಕಿ ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು. ಆದರೆ ಅಕ್ಕಿ ದಾಸ್ತಾನಿನ ಕೊರತೆಯಿಂದಾಗಿ 5KG ಹೆಚ್ಚುವರಿ ಅಕ್ಕಿಯನ್ನು ನೀಡಲು ಸಾಧ್ಯವಾಗಲಿಲ್ಲ.

ಈ ಕಾರಣಕ್ಕೆ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ 5KG ಅಕ್ಕಿ ಹಾಗೂ 5KG ಅಕ್ಕಿಯ ಬದಲಾಗಿ ಹಣವನ್ನು BPL Card ಹೊಂದಿರುವವರಿಗೆ ಜಮಾ ಮಾಡುತ್ತಿದೆ. ಪ್ರತಿ ಕೆಜಿಗೆ 34 ರೂ. ಗಳಂತೆ ಒಬ್ಬ ಸದಸ್ಯರಿಗೆ 170 ರೂ. ಗಳನ್ನು ಸರ್ಕಾರ ಜಮಾ ಮಾಡುತ್ತಿದೆ. ಆದರೆ ಎಲ್ಲ ಅರ್ಹರಿಗೆ ಯೋಜನೆಯ ಲಾಭ ಲಭ್ಯವಾಗುತ್ತಿಲ್ಲ ಎನ್ನಬಹುದು.

Anna Bhagya Yojana Status Check
Image Credit: Hosakannada

ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಖಾತೆಗೆ ಬಂದಿಲ್ವಾ…?
ಇನ್ನು ಅನ್ನ ಭಾಗ್ಯ ಯೋಜನೆಯ ಹಣ ನೇರವಾಗಿ ಅರ್ಹರ ಖಾತೆಗೆ ಸರ್ಕಾರ ಜಮಾ ಮಾಡುತ್ತಿದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ದರೆ ಅಂತವರ ಖಾತೆಗೆ ಹಣ ನೇರವಾಗಿ ಜಮಾ ಮಾಡುತ್ತಿದೆ. ಇನ್ನು ಪ್ರತಿ ತಿಂಗಳು ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತಾ ಬಂರುತ್ತಿದೆ.

ಸದ್ಯ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಅರ್ಹರ ಖಾತೆಗೆ ಯಾವ ಯಾವ ತಿಂಗಳ ಹಣವನ್ನು ಜಮಾ ಮಾಡಲಾಗಿದೆ ಎನ್ನುವದನ್ನು ತಿಳಿಯಲು ಆಹಾರ ಇಲಾಖೆಯು ಹೊಸ Website ಅನ್ನು ಪರಿಚಯಿಸಿದೆ. ಈ Website Link ನ ಮೂಲಕ ಮನೆಯಲ್ಲಿಯೇ ಕುಳಿತು Ration card status check ಮಾಡಿಕೊಳ್ಳಬಹುದು.

Anna Bhagya Yojana Money
Image Credit: News Guru Kannada

ಈ ರೀತಿಯಾಗಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
•ಕರ್ನಾಟಕ ಸರ್ಕಾರದ ಅಧಿಕೃತ Website https://www.karnataka.gov.in/ ಗೆ ಭೇಟಿ ನೀಡಿ.

Join Nadunudi News WhatsApp Group

•E -Services ಟ್ಯಾಬ್ ಮೇಲೆ ಕ್ಲಿಕ್ ಮಾಡಿ

•DBT Status ಲಿಂಕ್ ಅನ್ನು ಕ್ಲಿಕ್ ಮಾಡಿ

•ನೀವು ರೇಷನ್ ಕಾರ್ಡ್ ನಲ್ಲಿ ಯಾವ ಸಮಯದ ಸ್ಟೇಟಸ್ ತಿಳಿಯಲು ಬಯಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ.

•ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ನಂತರ Continue ಬಟನ್ ಕ್ಲಿಕ್ ಮಾಡಿ.

•ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಅನ್ನ ಭಾಗ್ಯ ಯೋಜನೆಯಡಿ ನಿಮಗೆ ಯಾವ ಯಾವ ಕಂತುಗಳ ಹಣ ಜಮಾ ಆಗಿದೆ ಎನ್ನುವುದು ಸ್ಕ್ರೀನ್ ಮೇಲೆ ತೋರುತ್ತದೆ.

Join Nadunudi News WhatsApp Group