Ads By Google

Okaya EV Electric Scooter: ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಿದರೆ ಥೈಲ್ಯಾಂಡ್ ಗೆ ಫ್ರೀ ಟ್ರಿಪ್, ಬಂಪರ್ ಆಫರ್ ಘೋಷಣೆ.

okaya electric thailand trip offer
Ads By Google

Okaya EV Electric Scooter Offer: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನು ಮಾರುಕಟ್ಟೆಗೆ ಹೊಸ ಹೊಸ ಮದಾರಿಯ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಡುತ್ತಿವೆ. ಇದೀಗ ವಿಶೇಷ ಆಫರ್ ನೊಂದಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ.

Image Credit: carandbike

ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಯಾದ Okaya EV ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಖರೀದಿಯ ಮೇಲೆ ಗಮನ ಸೆಳೆಯುವ ಕೊಡುಗೆಯನ್ನು ಘೋಷಿಸಿದೆ. ಈ ಕೊಡುಗೆಯ ಅಡಿಯಲ್ಲಿ ಒಕಾಯ ಎಲೆಕ್ಟ್ರಿಕ್ ಸ್ಕೂಟರ್ ಗಳ ಖರೀದಿದಾರರು ರೂ. 5000 ವರೆಗಿನ ಕ್ಯಾಶ್ ಬ್ಯಾಕ್ ಸೇರಿದಂತೆ ಸಾಕಷ್ಟು ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.

Image Credit: bikedekho

ಒಕಾಯ ಎಲೆಕ್ಟ್ರಿಕ್ ಸ್ಕೂಟರ್ ಗಳ ಖರೀದಿಯ ಮೇಲೆ ಬಂಪರ್ ಆಫರ್
ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಒಬ್ಬ ಆಯ್ದ ಗ್ರಾಹಕರು ಥೈಲ್ಯಾಂಡ್ (Thailand) ಗೆ ಮೂರು ರಾತ್ರಿ, ನಾಲ್ಕು ದಿನಗಳ ಪ್ರವಾಸವನ್ನು ಗೆಲುವ ಅವಕಾಶವನ್ನು ಪಡೆಯುತ್ತಾರೆ. ಕಂಪನಿಯ ಕಾರ್ನಿವಲ್ ಕೊಡುಗೆಯು ಬ್ರಾಂಡ್ ನ ಎಲ್ಲ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಅನ್ವಯಿಸುತ್ತದೆ ಮತ್ತು ಮಾರ್ಚ್ 31 ರವರೆಗೆ ಮಾನ್ಯವಾಗಿರುತ್ತದೆ.

Image Credit: auto.economictimes.indiatimes

ಒಕಾಯ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿವಿದ ಮಾದರಿ
ಒಕಾಯ ಎಲೆಕ್ಟ್ರಿಕ್ ಸ್ಕೂಟರ್ ತನ್ನ ಪೋರ್ಟ್ ಪೋಲಿಯೋದಲ್ಲಿ ಕಡಿಮೆ ವೇಗ ಮತ್ತು ಹೆಚ್ಚಿನ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಮಾರಾಟ ಮಾಡುತ್ತದೆ.

ಇವುಗಳಲ್ಲಿ ಪಾಸ್ಟ್ ಎಫ್ 4 , ಪಾಸ್ಟ್ ಎಫ್ 3,ಪಾಸ್ಟ್ ಎಫ್ 2, ಕ್ಲಾಸ್ ಐಕ್ಯೂ +, ಪ್ರೀಡಂ ಮತ್ತು ಪಾಸ್ಟ್ ಎಫ್ 2 ಬಿ ನಂತಹ ಮಾದರಿಗಳು ಸೇರಿವೆ. ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ 6 ಬಣ್ಣಗಳ ಆಯ್ಕೆಯನ್ನು ನೀಡುತ್ತದೆ.

Image Credit: rushlane

ಗ್ರಾಹಕರು ರಾಷ್ಟ್ರವ್ಯಾಪಿ ಬ್ರಾಂಡ್ ನ ಯಾವುದೇ ಡೀಲರ್ ಗಳಿಂದ OKaya ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಮೂಲಕ ಕಾರ್ನಿವಲ್ ನಲ್ಲಿ ಭಾಗವಹಿಸಬಹುದು.

ಖರೀದಿ ಪೂರ್ಣಗೊಂಡ ನಂತರ ಖರೀದಿದಾರರು ನೋಂದಾಯಿತ ಫೋನ್ ಸಂಖ್ಯೆಯಲ್ಲಿ ಲಿಂಕ್ ಅನ್ನು ಸ್ವೀಕರಿಸುತ್ತಾರೆ. ಅವರು ಈ ಲಿಂಕ್ ನಲ್ಲಿ ಅಗತ್ಯವಿರುವ ಮಾಹಿತಿಯನ್ನು ಸಲ್ಲಿಸಬೇಕು. ಇದರ ನಂತರ ಗ್ರಾಹಕರು ಸ್ಕ್ರ್ಯಾಚ್ ಕಾರ್ಡ್ ನ್ನು ಪಡೆಯುತ್ತಾರೆ, ಅದನ್ನು ಸ್ಕ್ರ್ಯಾಚ್ ಮಾಡಿದ ನಂತರ ಅವರು ಗೆದ್ದ ಬಹುಮಾನವನ್ನು ಪಡೆಯುತ್ತಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field