ID Card: ಆಧಾರ್ ನಂತೆ ಬರಲಿದೆ ಇನ್ನೊಂದು ಕಾರ್ಡ್? ಯಾರಿಗೆಲ್ಲಾ ಕಡ್ಡಾಯ, ಮಾಹಿತಿ ಹೊರಕ್ಕೆ
ಶಾಲೆ ಗಳಲ್ಲಿಯು ವಿದ್ಯಾರ್ಥಿಗಳಿಗೆ ಆಧಾರ್ ನಂತೆ ಇನ್ನೊಂದು ಐಡಿ ಯನ್ನು ಜಾರಿಗೆ ತರಲು ತಿರ್ಮಾನಿಸಿದೆ.
One Nation, One ID: ಇಂದು ಆಧಾರ್ ಕಾರ್ಡ್(Aadhar Card) ಎಷ್ಟು ಮುಖ್ಯವಾದ ದಾಖಲೆ ಎಂಬುದು ನಿಮಗೂ ತಿಳಿದೆ ಇದೆ. ಪ್ರತಿಯೊಂದು ಸರಕಾರದ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಬೇಕೆ ಬೇಕು .ಅದೇ ರೀತಿ ಹುಟ್ಟಿದ್ದ ಮಗುವಿಗೂ ಕೂಡ ಆಧಾರ್ ಕಾರ್ಡ್ ಎಂಬುದು ಅಗತ್ಯ ದಾಖಲೆ. ಹಾಗೇಯೆ ವಿದ್ಯಾರ್ಥಿಗಳಿಗೂ ಒಂದು ಹೊಸ ದಾಖಲೆಯನ್ನು ಮಾಡಲು ಕೇಂದ್ರ ಸೂಚನೆ ನೀಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ, NEP 2020 ರ ಅಂಗವಾಗಿ ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ID ರಚಿಸಲು ಯೋಜನೆ ಮಾಡಿಕೊಂಡಿದೆ. ಈ ಮೂಲಕ ಶಾಲೆ ಗಳಲ್ಲಿಯು ವಿದ್ಯಾರ್ಥಿಗಳಿಗೆ ಆಧಾರ್ ನಂತೆ ಇನ್ನೊಂದು ಐಡಿ ಯನ್ನು ಜಾರಿಗೆ ತರಲು ತಿರ್ಮಾನಿಸಿದೆ.
ಗುರುತೀನ ಚೀಟಿ
ಕೇಂದ್ರ ಸರ್ಕಾರವು ಈ ಯೋಜನೆಯನ್ನು ಆರಂಭ ಮಾಡಲು ಪ್ಲಾನ್ ಮಾಡಿದ್ದು , ಓನ್ ನೇಷನ್, ಒನ್ ಸ್ಟೂಡೆಂಟ್ ಯೋಜನೆ ಇದಾಗಿದೆ, ಹೀಗಾಗಿ ವಿಶೇಷ ಗುರುತಿನ ಚೀಟಿ ನೀಡಲು ತಿರ್ಮಾನಿಸಿದೆ. ಇದು ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ (APAAR) ಆಗಿ ಪರಿಗಣಿಸ ಲಾಗುತ್ತದೆ. ಈ ಮೂಲಕ ಪೋಷಕರಿಂದ ಒಪ್ಪಿಗೆ ಪಡೆಯಲು ಈಗಾಗಲೇ ಶಾಲೆಗಳಿಗೆ ಮಾಹಿತಿ ನೀಡಲಾಗಿದೆ.
ತಿರ್ಮಾನ ಮಾಡಿವೆ
ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಈಗಾಗಲೇ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳಿಗೆ ತಮ್ಮದೇ ಆದ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಇದರ ಮೂಲಕ ನೀಡಲಿದೆ. ಇದನ್ನು ಸ್ವಯಂಚಾಲಿತ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ (APAAR) ಎಂದು ಹೇಳಲಾಗುತ್ತದೆ. ವಿದ್ಯಾರ್ಥಿಗೆ ಇದರ ಮುಲಕ I’d ಇರಲಿದೆ.
ಶೈಕ್ಷಣಿಕ ಮಾಹಿತಿ ಇರುತ್ತದೆ
ಈ ದಾಖಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ ಕೂಡ ಇರುತ್ತದೆ. ಈಗಾಗಲೇ ಇದಕ್ಕೆ ವಿದ್ಯಾರ್ಥಿಗಳ ಮಾಹಿತಿ ಯನ್ನು ಕಲೆಹಾಕಿ ಯಾವ ರೀತಿ ದಾಖಲಿಸಬೇಕು ಎಂದು ಯೋಜನೆ ಹಾಕಿ ಕೊಂಡಿದ್ದು, ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಈ ದಾಖಲೆ ಮುಖ್ಯವಾಗಿ ಕಾರ್ಯ ನಿರ್ವಹಿಸಲಿದೆ.